ಇಂದಿನಿಂದ ವಿಮಾನ ಹಾರಾಟ ಆರಂಭ : ವಿಮಾನ ನಿಲ್ದಾಣದಲ್ಲಿ ಭಾರೀ ಕಟ್ಟೆಚ್ಚರ…

ದೇಶದಲ್ಲಿ 4.0 ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಆಗಿದ್ದ ಜನ ತಮ್ಮ ಊರುಗಳತ್ತ ಪ್ರಯಾಣ ಬೆಳಸಲು ಮತ್ತು ಬೇರೆ ಸ್ಥಳಗಳಿಂದ ರಾಜ್ಯಕ್ಕೆ ಆಗಮಿಸಲು ಇಂದಿನಿಂದ ವಿಮಾನ ಹಾರಾಟಕ್ಕೆ ಅನುವು ಮಾಡಿಕೊಡಲಾಗಿದೆ.

ಹೌದು… ಕೆಲವು ಷರತ್ತಿನಿಂದಿಗೆ ವಿಮಾನಯಾಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ. ಜೊತೆಗೆ ಪ್ರಯಾಣ ಮಾಡುವ ಪ್ರತಿಯೊಬ್ಬ ವ್ಯಕ್ತಿ ಈ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಲೇ ಬೇಕಾಗಿದೆ. ಜೊತೆಗೆ ವಿಮಾನಗಳ ಹಾರಾಟಕ್ಕೂ ಕೆಲವು ನಿಯಮಗಳಿವೆ.

ವಿಮಾನ ಹಾರಾಟದ ನಿಗದಿತ ಸಮಯಕ್ಕೆ ಇಪ್ಪತ್ತು ನಿಮಿಷಗಳ ಮುನ್ನ ನಿರ್ಗಮನವನ್ನು ಮುಚ್ಚಲಾಗುವುದು ಹೀಗಾಗಿ ಪ್ರಯಾಣಿಕರು ಎರಡು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಬರಬೇಕು. ಫಿಸಿಕಲ್ ಚೆಕ್ ಇನ್ ವ್ಯವಸ್ಥೆ ನಿರ್ಬಂಧಿಸಿದ್ದು ಕೇವಲ ವೆಬ್ ಚೆಕ್ ಇನ್ ವ್ಯವಸ್ಥೆ ಮೂಲಕ ಗ್ರಾಹಕರು ಮುಂಚೆಯೇ ಚೆಕ್ ಇನ್ ಮಾಡಿಕೊಳ್ಳಬೇಕು, ಕೇವಲ ಒಂದು ಲಗೇಜ್ ಬ್ಯಾಗ್ ನೊಂದಿಗೆ ಪ್ರಯಾಣ ಮಾಡಬಹದಾಗಿದ್ದು, ಪ್ರಯಾಣದ ವೇಳೆ ಊಟದ ವ್ಯವಸ್ಥೆ ನಿರ್ಬಂಧಿಸಲಾಗಿದೆ ಎಂದು ಹೊಸ ನಿಯಮಗಳಲ್ಲಿ ತಿಳಿಸಲಾಗಿದೆ.

ಅಲ್ಲದೆ 14 ವರ್ಷದೊಳಗಿನ ಮಕ್ಕಳನ್ನು ಹೊರತುಪಡಿಸಿ ವಿಮಾನ ಪ್ರಯಾಣ ಮಾಡುವ ಎಲ್ಲರಿಗೂ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ. ವಿಮಾನ ನಿಲ್ದಾಣಕ್ಕೆ ಖಾಸಗಿ ವಾಹನಗಳಲ್ಲಿ ಆಗಮಿಸಿದಲ್ಲಿ ಡಿಜಿಟಲ್ ಪೇಮೆಂಟ್ ಗೆ ಆದ್ಯತೆ ನೀಡಿ, ಪ್ರಯಾಣಕ್ಕೆ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು, ಮಾಸ್ಕ್ ಗ್ಲೌಸ್  ಬಳಕೆ ಕಡ್ಡಾಯ, ಏರ್ ಪೋರ್ಟ್ ಗೆ ಆಗಮಿಸುವ ಮೊದಲು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಬೇಕು ಎಂದು ಷರತ್ತು ವಿಧಿಸಿದೆ. ಪ್ರಯಾಣ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಜನ ಸಂದಣಿ ಪ್ರದೇಶದಲ್ಲಿ ಅನಗತ್ಯ ವಸ್ತುಗಳನ್ನು ಸ್ಪರ್ಶಿದಂತೆ ಎಚ್ಚರಿಸಬೇಕು ಎಂದು ಸೂಚಿಸಿದೆ.

ಏರ್ ಇಂಡಿಯಾ, ಇಂಡಿಗೋ, ಏರ್ ಏಷ್ಯಾ, ವಿಸ್ತಾರಾ, ಸ್ಪೈಸ್ ಜೆಟ್, ಟ್ರೂ ಜೆಟ್, ಸ್ಟಾರ್ ಏರ್, ಅಲೈನ್ಸ್ ಏರ್ ಸಂಸ್ಥೆಗಳ ವಿಮಾನಗಳ ಸಂಚಾರ ಆಗುತ್ತಿದೆ.
ಮುಂಬೈ, ರಾಂಚಿ, ಚೆನ್ನೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್ ನಗರಗಳಿಂದ ವಿಮಾನಗಳು ಬರುತ್ತಿವೆ. ಬೆಂಗಳೂರಿನಿಂದ ಮುಂಬೈ, ರಾಂಚಿ, ಚೆನ್ನೈ, ದೆಹಲಿ, ಇಂದೋರ್, ವಿಜಯವಾಡ, ಪುಣೆ, ಕೋಲ್ಕತಾ, ಕೊಚ್ಚಿ, ಅಹ್ಮದಾಬಾದ್ ನಗರಗಳಿಗೆ ವಿಮಾನಗಳ ಸಂಚಾರ ಇದೆ. ಹಾಗೆಯೇ, ಬೆಂಗಳೂರು, ಮೈಸೂರು ಮತ್ತು ಮಂಗಳೂರು ಮಧ್ಯೆ ವಿಮಾನ ಸಂಚಾರ ಇದೆ.

ಕೇಂದ್ರ ವಿಮಾನಯಾನ ಸಚಿವಾಲಯ ನೀಡಿರುವ ಆದೇಶದಂತೆ ದೇಶೀಯ ವಿಮಾನಗಳ ಮೂಲಕ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳುವ ಪ್ರಯಾಣಿಕರು ಹೋಮ್ ಕ್ವಾರಂಟೈನ್​ನಲ್ಲಿರಬೇಕಾದುದು ಅನಿವಾರ್ಯ. ಈ ಹೋಂ​ ಕ್ವಾರಂಟೈನ್​ ಅವಧಿಯನ್ನು ನಿಗದಿಪಡಿಸುವ ಸ್ವಾತಂತ್ರ್ಯವನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಅದರಂತೆ ಆಯಾ ರಾಜ್ಯಗಳಲ್ಲಿ ಬೇರೆ ರೀತಿಯ ನಿಯಮಗಳನ್ನು ಜಾರಿಗೆ ತರಲಾಗಿದೆ.

ಕೊರೋನಾ ಆತಂಕ ಹೆಚ್ಚಾಗಿರುವ ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್​ ಮುಂತಾದ ಕೆಲವು ರಾಜ್ಯಗಳು ಕೂಡ ತಮ್ಮ ರಾಜ್ಯಕ್ಕೆ ವಿಮಾನಗಳಲ್ಲಿ ಬರುವವರಿಗೆ ಕೆಲವು ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಿದೆ.

ಕೊರೋನಾ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಪ್ರತಿಯೊಬ್ಬ ವೈಮಾನಿಕ ಪ್ರಯಾಣಿಕರಿಗೂ ಆರೋಗ್ಯ ಸೇತು ಆ್ಯಪ್ ಕಡ್ಡಾಯಪಡಿಸಲಾಗಿದೆ. ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್​ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರತೀ ಎರಡು ಗಂಟೆಗೊಮ್ಮೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಫಾಗ್ ಮೆಷಿನ್ ಮೂಲಕ ಪರಿಸರಸ್ನೇಹಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights