ಏಶಿಯಾನೆಟ್ ನ್ಯೂಸ್, ಮೀಡಿಯಾ ಒನ್ ಟಿವಿ ವಾಹಿನಿಗಳ ನಿಷೇಧ ತೆರವು

ಒಂದು ಸಮುದಯದ ಪರವಾಗಿ ಸುದ್ದಿಬಿತ್ತರ ಮಾಡುತ್ತಿರುವುದರಿಂದ ಕೋಮುಸೌಹಾರ್ದಕ್ಕೆ ಧಕ್ಕೆ ಆಗಬಹುದೆಂದು ಕಾರಣ ನೀಡಿ 48 ಘಂಟೆಗಳ ಕಾಲ ಎರಡು ಮಲಯಾಳಂ ಸುದ್ದಿವಾಹಿನಿಗಳ ಪ್ರಸಾರಕ್ಕೆ ನಿಷೇಧ ಹೇರಿದ್ದ ಕೇಂದ್ರ ಸರ್ಕಾರ ಅವಧಿಗೂ ಮುಂಚಿತವಾಗಿಯೇ ನಿಷೇಧವನ್ನು ತೆರವುಗೊಳಿಸಿದೆ.

ಏಷಿಯಾನೆಟ್ ನ್ಯೂಸ್ ಮೇಲೆ ನಡುರಾತ್ರಿ 1:30ಕ್ಕೆ ಹಾಗು ಮೀಡಿಯಾ ಒನ್ ವಾಹಿನಿಯ ಮೇಲೆ ಶನಿವಾರ ಬೆಳಗ್ಗೆ 9:30ಕ್ಕೆ ನಿಷೇಧ ತೆರವುಗೊಳಿಸಿದೆ ಎಂದು ತಿಳಿದುಬಂದಿದೆ.

ಈಶಾನ್ಯ ದೆಹಲಿಯಲ್ಲಿ ಪೆಬ್ರವರಿ 25ರಂದು ನಡೆದ ಕೋಮು ಹಿಂಸಾಚಾರದ ಬಗ್ಗೆ ಈ ವಾಹಿನಿಗಳು ಮಾಡಿದ ವರದಿಗಳು ಒಂದು ಕೋಮುವಿನ ಪರವಹಿಸಿದ್ದವು ಎಂದು ಆರೋಪಿಸಿ 48 ಘಂಟೆಗಳ ಕಾಲ ಪ್ರಸಾರ ನಿಷೇಧಿಸಿ ಶುಕ್ರವಾರ ರಾತ್ರಿ 7:30ರಿಂದ ಜಾರಿಯಾಗುವಂತೆ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಆದೇಶ ಹೊರಡಿಸಿತ್ತು. “ವಾಹಿನಿಯ ವರದಿಗಾರಿಕೆ ಒಂದು ಪಕ್ಷವನ್ನು ವಹಿಸಿದ್ದು, ಸಿ ಎ ಎ ಪರ ಬೆಂಬಲಿಗರ ಧ್ವಂಸದ ಮೇಲೆ ಬೇಕಂತಲೇ ಆಸಕ್ತಿ ವಹಿಸಿದೆ” ಎಂದು ಮೀಡಿಯಾ ಒನ್ ಮೇಲಿನ ನಿಷೇಧ ಆದೇಶದಲ್ಲಿ ಸಚಿವಾಲಯ ತಿಳಿಸಿತ್ತಲ್ಲದೆ “ವಾಹಿನಿ ಆರ್ ಎಸ್ ಎಸ್ ನನ್ನು ಪ್ರಶ್ನಿಸುತ್ತಿದೆ ಹಾಗೂ ದೆಹಲಿ ಪೊಲೀಸರ ನಿಷ್ಕ್ರಿಯತೆಯನ್ನು ಆರೊಪಿಸಿದೆ. ದೆಹಲಿ ಪೊಲೀಸರು ಮತ್ತು ಆರ್ ಎಸ್ ಎಸ್ ಬಗ್ಗೆ ವಾಹಿನಿ ಆಕ್ಷೇಪ ವ್ಯಕ್ತಪಡಿಸುತ್ತಿದೆ” ಎಂದು ತಿಳಿಸಿತ್ತು.

ಈ ನಿಷೇಧದ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಮತ್ತು ಸಿಪಿಐ ಪಕ್ಷಗಳು ಬಿಜೆಪಿ ಸರ್ಕಾರ ಮಾಧ್ಯಮದ ಅಭಿವ್ಯಕಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ ಎಂದು ಟೀಕಿಸಿದ್ದವು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights