ಕುಡುಕರ ಪುಂಡಾಟ : ಚಲಿಸುತ್ತಿದ್ದ ರೈಲಿನಲ್ಲಿ ಗುಂಡು ತುಂಡು ಪಾರ್ಟಿ..!

ಕೆಳಗೆ ಹಾಸಿದ ದೊಡ್ಡದಾದ ಜಮಕಾನ. ಅದರ ಮೇಲೊಂದು ಪ್ಯಾಕೇಟ್ ನಲ್ಲಿ ಉಪ್ಪಿನ ಕಾಯಿ, ಮತ್ತೊಂದು ಪ್ಯಾಕೇಟ್ ನಲ್ಲಿ ಚಿಪ್ಸ್, ಜೊತೆಗೆ ಸಿಗರೇಟ್ ಪ್ಯಾಕೇಟ್ ಜೊತೆಗೆ ಗುಂಡು ಹಾಕಿದ ಲೋಟಗಳು. ಇದನ್ನ ಓದಿದ್ರೆ ಥಟ್ ಅಂತ ನೆನಪಾಗೋದು ಬಾರ್ ಶಾಪ್ ಇಲ್ಲವೇ ಯಾವುದಾದರೂ ಓಪನ್ ಪ್ಲೇಸ್ ನಲ್ಲಿ ಕುಳಿತು ಮಾಡೋ ಗುಂಡು ಪಾರ್ಟಿ. ಆದ್ರೇ ಇದೆಲ್ಲಾ ಕಂಡಿದ್ದು ಚಲಿಸುತ್ತಿದ್ದ ರೈಲಿನಲ್ಲಿ ಅಂದ್ರೆ ನೀವು ನಂಬಲೇಬೇಕು.

ಹೌದು… ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವುದು ಅಧಿಕವಾಗುತ್ತಿದ್ದು,  ರೈಲ್ವೆ ಸಿಬ್ಬಂದಿಗಳು ಎಂದು ಹೇಳಿಕೊಂಡ ಗುಂಪೊಂದು ಬೋಗಿಯಲ್ಲಿ ಬಿಂದಾಸ್ ಗುಂಡು ತುಂಡು ಪಾರ್ಟಿ ಮಾಡಿದ ವಿಡಿಯೋ ಸದ್ಯ ಸಾಕಷ್ಟು ವೈರಲ್ ಆಗಿದ್ದು ನಾಗರೀಕರಿಗೆ ಮುಜುಗರವನ್ನುಂಟು ಮಾಡಿದೆ.

ಧಾರವಾಡ- ಮೈಸೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಇಂಥಹದೊಂದು ಘಟನೆ ನಡೆದಿದೆ. ಮದ್ಯಪಾನ ಮಾಡಿ ಸಿಗರೇಟ್ ಸೇದುತ್ತಿದ್ದ ಪುಂಡ ಕುಡುಕರು ಮೋಜು ಮಸ್ತಿಯಿಂದ ಸಾರ್ವಜನಿಕರಿಗೆ ಕಿರಿಕಿರಿ ಮಾಡಿದ್ದಾರೆ. ಮದ್ಯಪಾನ, ಧೂಮ್ರಪಾನ ಹಾಗೂ ಜೂಜಾಟ ಆಡಿ ಕಾನೂನು ಉಲ್ಲಂಘನೆ ಮಾಡಿದ್ದು ವಿರೋಧಕ್ಕೆ ಕಾರಣವಾಗಿದ್ದು ತಪ್ಪಿಕಸ್ತರಿಗೆ ಶಿಕ್ಷೆ ನೀಡುವಂತೆ ಜನ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights