ಕೂಲ್ ಆಗಿದ್ದ ಕಾಫಿನಾಡಿನಲ್ಲಿ ಬೆಂಕಿ ಇಟ್ಟವನಿಗಾಗಿ ಬೆನ್ನು ಬಿದ್ದ ಪೊಲೀಸ್…

ದತ್ತಜಯಂತಿಯ ಹಿಂದೆ-ಮುಂದೆಯೂ ಏನೂ ಆಗ್ಲಿಲ್ಲ. ಇತಿಹಾಸದಲ್ಲೇ ಸೇರದ ಜನ ಸೇರುದ್ರು ಶೋಭಾಯಾತ್ರೆ ಶಾಂತವಾಗೇ ಮುಗ್ದೋಯ್ತು. ಮತ್ಯಾವುದೇ ಗಲಾಟೆ-ದೊಂಬಿ ಏನೂ ಇಲ್ಲ. ಆದ್ರೆ, ಅವನೊಬ್ಬ ಅನಾಮಿಕ ಮಾತ್ರ ಕಾಫಿನಾಡ ಕೊರೆವ ಚಳಿಯಲ್ಲೂ ಬೆಂಕಿ ಹತ್ತಿಸಿದ್ದಾನೆ. ಆತ ಸೈಕೋನೋ, ಕುಡುಕನೋ, ದ್ವೇಷ ಕಾರ್ತಿರೋನೋ ಅದೂ ಗೊತ್ತಿಲ್ಲ. ಆದ್ರೆ, ಜನಕ್ಕೆ ಭಯ. ಪೊಲೀಸರಿಗೆ ತಲೆನೋವು. ದತ್ತಜಯಂತಿ ಮುಗ್ದೋಯ್ತೆಂದು ನೆಟ್ಟುಸಿರು ಬಿಟ್ಟ ಪೊಲೀಸರು ಅವನೊಬ್ಬನಿಗಾಗಿ 12 ಜನ ಹುಡುಕಾಡ್ತಿದ್ದಾರೆ. ಆ ಅನಾಮಿಕ ಯಾರು, ಹುಡುಕ್ತಿರೋದೇಕೆ ಗೊತ್ತಾ…


ಇವ್ನನ್ನ ನೋಡಿ… ಯಾರು… ಏನು… ಎಲ್ಲಿಯವ್ನು… ಕುಲ-ಗೋತ್ರ ಯಾವ್ದು ಗೊತ್ತಿಲ್ಲ. ಆದ್ರೆ, ರಸ್ತೆ ಬದಿ ನಿಂತಿದ್ದ ಬೈಕ್‍ಗಳಿಗೆಲ್ಲಾ ಬೆಂಕಿ ಇಟ್ಟು ಹೋಗ್ತಿದ್ದಾನೆ. ಈತ ಸುಟ್ಟದ್ದು ಒಂದಲ್ಲ.. ಎರಡಲ್ಲ.. ಬರೋಬ್ಬರಿ ಐದು ಬೈಕ್. ಅದು ಒಂದೇ ಜಾಗದಲಲ್ಲ. ಚಿಕ್ಕಮಗಳೂರಿನ ಸಹರಾ ಶಾದಿ ಮಹಲ್, ಮಾರ್ಕೇಟ್ ರೋಡ್, ಗೌರಿ ಕಾಲುವೆ, ಪೆನ್ಷನ್ ಮೊಲ್ಲಾ ಸೇರಿ ನಾಲ್ಕು ಏರಿಯಾದಲ್ಲಿ ಐದು ಬೈಕಿಗೆ ಬೆಂಕಿ ಇಟ್ಡಿದ್ದಾನೆ. ಈತನಿಗಾಗಿ ಈಗ ಚಿಕ್ಕಮಗಳೂರು ಪೊಲೀಸರು ತಲೆಗೆ ಹುಳ ಬಿಟ್ಟುಕೊಂಡು ಎರಡು ತಂಡವಾಗಿ 12 ಜನ ಹುಡುಕಾಡ್ತಿದ್ದಾರೆ. ಪಲ್ಸರ್ ಬೈಕಲ್ಲಿ ಬಂದ ಈ ಅನಾಮಧೇಯ ವ್ಯಕ್ತಿ ಎಲ್ಲಾ ಧರ್ಮೀಯರ ಬೈಕಿ ಬೆಂಕಿ ಹಚ್ಚಿದ್ದಾನೆ. ಒಂದೇ ಧರ್ಮಿಯರ ಬೈಕಾಗಿದ್ರೆ ದ್ವೇಷ ಅನ್ಬೋದಿತ್ತು. ಆದ್ರೆ, ಬೈಕ್ ಎಲ್ಲಾ ಧರ್ಮದವರದ್ದಾಗಿರೋದ್ರಿಂದ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಅತಿಯಾದ ಮಧ್ಯದಿಂದ ಹೀಗೆ ಮಾಡುದ್ನೋ ಅಥವ ಮಾದಕ ದ್ರವ್ಯಗಳ ಮತ್ತಿನಿಂದ ಹೀಗೆ ಮಾಡುದ್ನೋ ಅನ್ನೋದೇ ಯಕ್ಷಪ್ರಶ್ನೆಯಾಗಿದ್ದು ಒಂದೆಡೆ ಜನ ಭಯಬಿದ್ದಿದ್ರೆ, ಪೊಲೀಸರು ಅವ್ನ ಬೆನ್ನು ಬಿದ್ದಿದ್ದಾರೆ.

ಐದು ಬೈಕ್‍ಗಳನ್ನ ಸುಡಲು ಆತ ತೆಗೆದುಕೊಂಡ ಸಮಯ ಕೇವಲ ನಲವತ್ತೇ ನಿಮಿಷ. ಮಧ್ಯರಾತ್ರಿ 2.20 ರಿಂದ 3 ಗಂಟೆಯೊಳಗೆ ಏರಿಯಾದಲ್ಲಿ ಐದು ಬೈಕ್ ಸುಟ್ಟಿದ್ದಾನೆ. ಅಷ್ಟೆ ಅಲ್ದೆ, ಆತ ಸಿ.ಸಿ.ಟಿವಿಗಳು ಇಲ್ಲದ ಜಾಗವನ್ನ ನೋಡಿಕೊಂಡೇ ಬೈಕ್‍ಗಳಿಗೆ ಬೆಂಕಿ ಇಟ್ಟಿದ್ದಾನೆ. ಆದ್ರೆ, ಸಹರಾ ಶಾದಿಮಲ್ ಬಳಿ ಇದ್ದ ಸಿ.ಸಿ.ಟಿವಿ ಫುಟೇಜ್ ಹಾಗೂ ಈ ಏರಿಯಾಗಳಿಗೆ ಹೋಗಿ-ಬರುವ ಮಾರ್ಗದಲ್ಲಿನ ಸಿ.ಸಿ.ಟಿವಿ ಫುಟೇಜ್‍ಗಳನ್ನ ಪೊಲೀಸರು ವಶಪಡಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ. ಆದ್ರೆ, ಬೈಕನ್ನ ಕಳೆದುಕೊಂಡವರೆಲ್ಲಾ ಮಧ್ಯಮದ ವರ್ಗದವರೇ ಆಗಿದ್ದು ಈಗ ಕಂಗಾಲಾಗಿದ್ದಾರೆ. ಈಗಾಗ್ಲೇ ಪೊಲೀಸರು ಐದರಿಂದ ಆರು ಜನರ ಮೇಲೆ ಶಂಕಿ ವ್ಯಕ್ತಪಡಿಸಿದ್ದಾರೆ. ಆದ್ರೆ, ಈತನ ಹಾವ-ಭಾವ ನೋಡಿದ್ರೆ ಗಲಾಟೆ ಎಬ್ಬಿಸೋದಕ್ಕೆ ಹೀಗೆ ಮಾಡಿರುವಂತೆ ಕಾಣ್ತಿದ್ದು, ಪೊಲೀಸರ ತನಿಖೆಯಿಂದ ಸ್ಪಷ್ಟವಾಗಲಿದೆ. ಆದ್ರೆ, ನಗರ ಹಾಗೂ ಬಸವನಹಳ್ಳಿ ಪೊಲೀಸರಂತು ಹಗಲಿರುಳು ಹುಡುಕ್ತಿದ್ದಾರೆ.

ಒಟ್ಟಾರೆ, ಈ ಅನಾಮಿಕನ ನಡೆ ಕಾಫಿನಾಡೀಗರನ್ನ ಚಿಂತೆಗೀಡು ಮಾಡಿದ್ರೆ, ಮನೆ ಮುಂದೆ ಬೈಕ್ ನಿಲ್ಲಿಸೋರು ರಾತ್ರಿ ನಿದ್ದೆ ಮಾಡದಂತ ಸ್ಥಿತಿ ನಿರ್ಮಾಣವಾಗಿದೆ. ಕಾಫಿನಾಡಿಗರು ಕೂಡ ಕೂಡಲೇ ಪೊಲೀಸರನ್ನ ಆತನನ್ನ ಬಂಧಿಸಬೇಕು ಹಾಗೂ ರಾತ್ರಿ ವೇಳೆ ಪೊಲೀಸರ ಗಸ್ತನ್ನ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ. ಹಿಂದೂ-ಮುಸ್ಲಿಮರು ಇಬ್ಬರ ಬೈಕನ್ನೂ ಸುಟ್ಟಿರೋದ್ನ ಕಂಡ್ರೆ ಸಮಾಜದಲ್ಲಿ ಅಶಾಂತಿ ಸೃಷ್ಠಿಸೋದಕ್ಕೆ ಮಾಡಿರುವಂತೆ ಕಾಣ್ತಿದೆ. ಆದ್ರೆ, ಯಾವ ಕಾರಣಕ್ಕೆ ಅನ್ನೋದು ಪೊಲೀಸರ ತನಿಖೆಯಿಂದಷ್ಟೆ ಹೊರಬರಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights