ಕೊರೊನಾ ಚೀನಾದ ಪೂರ್ವ ನಿರ್ಮಿತ ಷಡ್ಯಂತ್ರ? :75 ವರ್ಷದ ಸೇಡು ವೈರಸ್ ಸೃಷ್ಟಿಗೆ ಕಾರಣವಾಯ್ತಾ..?

ಕೊರೊನಾ ಜಗತ್ತಿನಾದ್ಯಂತ ಯಮನಂತೆ ಕಾಡುತ್ತಿದೆ. ಕಾಡ್ಗಿಚ್ಚಿನಂತೆ ಹರಡುತ್ತಿರುವ ಈ ವೈರಸ್ 2 ಲಕ್ಷಕ್ಕೂ ಹೆಚ್ಚು ಜನರನ್ನು ಜನರ ಬಲಿ ಪಡೆದಿದೆ. ಈ ಮಹಾಮಾರಿ ಚಾಟಿ ಏಟಿಗೆ ಮೇಲೇಳಲು ಸಾಧ್ಯವಾಗದೇ ನಲುಗುತ್ತಿರುವ ಅಮೆರಿಕಾದ ಪರಿಸ್ಥಿತಿ ಚಿಂತಾಜನಕವಾಗಿದೆ. 300 ಕ್ಕೂ ಹೆಚ್ಚು ದೇಶಗಳು ಕಿಲ್ಲರ್ ಕೊರೊನಾಗೆ ತತ್ತರಿಸಿ ಹೋಗಿವೆ. ವೈದ್ಯಕೀಯ ವ್ಯವಸ್ಥೆಯಲ್ಲಿ ಉನ್ನತಮಟ್ಟದಲ್ಲಿರುವ ದೇಶಗಳೇ ಕೊರೊನಾ ಹೊಡೆತಕ್ಕೆ ಮೇಲೇಳಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಸಂಕಷ್ಟದಲ್ಲಿ ಮುಂದೆಳುತ್ತಿವೆ. ಆದರೆ ಚೀನಾ ಮಾತ್ರ ತನ್ನಲ್ಲಿರುವ ಸಲಕರಣೆಗಳ ದೇಶವ್ಯಾಪಿ ಮಾರಾಟದ ಮೂಲಕ ಸದೃಢಗೊಳ್ಳುತ್ತಿದೆ. ಹಾಗಾದ್ರೆ  3ನೇ ಮಹಾಯುದ್ಧಕ್ಕೆ ಫಡ್ಯಂತ್ರ ಹೋಡಿತಾ ಚೀನಾ..? ಅನ್ನೋ ಪ್ರಶ್ನೆ ಸದ್ಯ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕಾಡತೊಡಗಿದೆ.

ಎಸ್.. ಒಂದು ಯುದ್ಧ ಮಾಡಿದ್ರೆ 10 ರಿಂದ20 ದೇಶಗಳಿಗೆ ತೊಂದರೆಯಾಗಬಹುದು. ಆದರೆ ಡೆಡ್ಲಿ ಕೊರೊನಾ 200ಕ್ಕೂ ಹೆಚ್ಚು ದೇಶಗಳನ್ನು ನಲಗಿಸಿಬಿಟ್ಟಿದೆ. ಹೀಗಾಗಿ ಇದು 3ನೇ ಮಹಾಯುದ್ಧಕ್ಕಾಗಿ ಚೀನಾ ಮಾಡಿದ ಕುತಂತ್ರವಾಗಿದೆ ಎಂದು ಅಮೆರಿಕಾ ದೂರುತ್ತಿದೆ. ಹಾಗಾದ್ರೆ ನಿಜವಾಗಲೂ ಇದು ಚೀನಾ ಸೃಷ್ಠಿಸಿದ ಯುದ್ಧಾಸ್ತ್ರನಾ..?

ಹೌದು… ಈ ಬಗ್ಗೆ ಜಗತ್ತೇ ಚೀನಾ ಮೇಲೆ ಉರಿಉರಿದು ಬೀಳುತ್ತಿದೆ. ಇಡೀ ವಿಶ್ವದ ದೇಶಗಳು ಕೊರೊನಾ ವಿರುದ್ಧ ಔಷಧಿ ತಯಾರಿಕೆಗೆ ಒದ್ದಾಡುತ್ತಿವೆ. ಆದರೆ ಚೀನಾದಲ್ಲಿ ಮಾತ್ರ ಕೊರೊನಾ ಸಂಪೂರ್ಣ ಹಿಡಿತಕ್ಕೆ ಬಂದಿದೆ. ಅಷ್ಟಕ್ಕೂ ಚೀನಾದ ವುಹಾನ್ ನಲ್ಲಿ ಹರಡಿದಷ್ಟು ಕೊರೊನಾ ವೈರಸ್ ಚೀನಾದ ಬೇರೆ ಯಾವ ಪ್ರಾಂತ್ಯದಲ್ಲೂ ವುಹಾನ್ ನಷ್ಟು ತೊಂದರೆಯನ್ನುಂಟು ಮಾಡಿಲ್ಲ. ಜೊತೆಗೆ ಬೇರೆ ಪ್ರಾಂತ್ಯಗಳಿಗೂ ವೈರಸ್ ಅಷ್ಟಾಗಿ ಹರಡಿಲ್ಲ. ಹೀಗಿರುವಾಗ ಜಗತ್ತಿನಾದ್ಯಂತ ವೈರಸ್ ಹರಡಿದೆ. ಹೀಗಾಗಿ ಇದೊಂದು ದೊಡ್ಡ ಕುತಂತ್ರ ಎಂದು ಹೇಳಲಾಗುತ್ತದೆ. ಯಾಕೆ ಅಂತ ನೋಡ್ತಾ ಹೋದ್ರೆ ಇಲ್ಲಿ ಚೀನಾದ ನರಿಬುದ್ಧಿ ಹೊರಬೀಳುತ್ತಾ ಹೋಗುತ್ತದೆ.

ಮೊದಲ ಮಹಾಯುದ್ಧ

1914ರಿಂದ 1918ರವರೆಗೂ ನಡೆದ ಮೊದಲ ಮಹಾಯುದ್ಧ ಬೃಹತ್ ವಿನಾಶವನ್ನೇ ಸೃಷ್ಠಿಸಿತು. ಸಾವಗೀಡಾದವರು, ಗಾಯಗೊಂಡವರು, ಗಂಡನನ್ನು ಕಳೆದುಕೊಂಡವರು, ಅನಾಥರಾದವರ ಸಂಖ್ಯೆ ಲೆಕ್ಕಕ್ಕೇ ಇಲ್ಲ.7-ಕ್ಕೂ ಹೆಚ್ಚು ರಾಷ್ಟ್ರಗಳ ಪೈಕಿ, ಆಸ್ಟ್ರಿಯಾ, ಬ್ರಿಟನ್, ಪ್ರಾನ್ಸ್, ಜರ್ಮಿನಿ, ರಷ್ಯಾ ಪ್ರಮುಖ ಪಾತ್ರ ವಹಸಿದ್ದವು. 1914ರಲ್ಲಿ ಹನ್ನೆರಡು ಸ್ವಾತಂತ್ರ ರಾಷ್ಟ್ರಗಳ ನಡುವೆ ಶುರುವಾದ ಈ ಯುದ್ಧ ನಂತರದ ದಿನಗಳಲ್ಲಿ ವಿಶ್ವದ ಬಹುಭಾಗವನ್ನು ಆವರಿಸಿಕೊಂಡಿತು. 1915ರಲ್ಲಿ ಇಟಲಿ ಹಾಗೂ 1917ರಲ್ಲಿ ಅಮೆರಿಕಾ ರಣರಂಗ ಪ್ರವೇಶಿಸಿದವು. ಯುದ್ಧದಲ್ಲಿ ಭಾಗಿಯಾದ ರಾಷ್ಟ್ರಗಳ ಜನಸಂಖ್ಯೆ 80 ಕೋಟಿ, ಅದು ವಿಶ್ವದ ಅಂದಿನ ಜನಸಂಖ್ಯೆಯ ಅರ್ಧದಷ್ಟು. ಈ ಯುದ್ಧದಲ್ಲಿ ಮಡಿದವರು ಒಂದು ಕೋಟಿಗೂ ಅಧಿಕ ಜನ ಎಂದೇಳಲಾಗುತ್ತದೆ. ಆದರೆ ಚೀನಾದ ಯಾವುದೇ ಯುದ್ಧಾಸ್ತ್ರ ಬಳಕೆ ಮಾಡದೇ ಜಗತ್ತಿನ 2 ಲಕ್ಷಕ್ಕೂ ಅಧಿಕ ಜನರನ್ನು ಬಲಿ ಪಡೆದಿದೆ ಎನ್ನಲಾಗುತ್ತಿದೆ. ಹೀಗಾಗಿ ಅಮೆರಿಕಾ ಕೊರೊನಾವನ್ನು ಚೀನೀ ವೈಸರ್ ಅಂತಲೇ ಬಿಂಬಿಸೋದು.

2ನೇ ಮಹಾಯುದ್ಧ

ಇನ್ನೂ 2ನೇ ಮಹಾಯುದ್ಧವು, 1ನೇ ಸೆಪ್ಟೆಂಬರ್ 1939 ರಿಂದ 2ನೇ ಸೆಪ್ಟೆಂಬರ್ 1945 ರ ವರೆಗೆ ನಡೆಯಿತು ಮತ್ತು ಇದು ಜಗತ್ತು ಕಂಡಂತ ಅತ್ಯಂತ ಭೀಕರವಾದ ಯುದ್ಧ. ಒಂದು ಕಡೆ ಹಿಟ್ಲರನ ಜರ್ಮನಿ, ಮುಸೊಲಿನಿಯ ಇಟಲಿ ಮತ್ತು ರಾಜ ಹಿರೋಹಿಟೋನ ಜಪಾನ್ ಮತ್ತೊಂದು ಕಡೆ ಬ್ರಿಟನ್ನಿನ ಸಂಯುಕ್ತ ಸಂಸ್ಥಾನ, ಸೋವಿಯತ್ ಒಕ್ಕೂಟ, ಫ್ರಾನ್ಸ್ ಮತ್ತು ಅಮೇರಿಕಾ. ಈ ಯುದ್ಧದಲ್ಲಿ 6 ಕೋಟಿಗೂ ಹೆಚ್ಚು ಜನರು ಸಾವಿಗೀಡಾದರು. ಅಂದರೆ, 1940ರ ವೇಳೆಯಲ್ಲಿದ್ದ ಜಗತ್ತಿನ ಒಟ್ಟು ಸಂಖ್ಯೆಯ ಶೇ.3ರಷ್ಟು ಮಂದಿ. ಇಂಥದೊಂದು ಭೀಕರ ಯುದ್ಧ ಹಿಂದೆಂದೂ ಆಗಿರಲಿಲ್ಲ. ಈ ಯುದ್ಧದಲ್ಲಿ ಇಡೀ ಜಗತ್ತೇ ಎರಡು ಹೋಳಾದವು. 30 ರಾಷ್ಟ್ರಗಳ 10 ಕೋಟಿ ಜನ ಭಾಗಿಯಾಗಿ ಕ್ಷಿಪಣಿ, ಬಾಂಬ್, ಗನ್ ಬಳಕೆ ಮಾಡಲಾಯಿತು. ಅಣುಬಾಂಬ್ ದಾಳಿಗೆ 2 ಲಕ್ಷ ಜನ ಸತ್ತಿದ್ರು. ಹೀರೋಶೀಮಾ ಮತ್ತು ನಾಗಾಸಾಕಿ ಮೇಲೆ ಅಣುಬಾಂಬ್ ಪ್ರಯೋಗವಾಗಿದೆ.

ಚೀನಾದ ಪೂರ್ವ ನಿರ್ಮಿತ ಷಡ್ಯಂತ್ರ!

ಈ ಯುದ್ಧಗಳು ಆಗಿ 75 ವರ್ಷಗಳು ಕಳೆದಿವೆ. ಕೆಲ ಮೂಲಗಳ ಪ್ರಕಾರ, ಚೀನಾ ಯಾವುದೇ ಯುದ್ಧಾಸ್ತ್ರ ಇಲ್ಲದೇ ಜೈವಿಕ ಯುದ್ಧಕ್ಕೆ ಸಜ್ಜಾಗಿದೆಯಂತೆ. ಇದಕ್ಕೆ ಸಾಕಷ್ಇ ಎಂಬಂತೆ ಚೀನಾದ ಗುಳ್ಳೆ ನರಿ ಬುದ್ಧಿ ಕಾಣಸಿಗುತ್ತದೆ. ವುಹಾನ್ ಮತ್ತೊಂದು ಪ್ರಾಂತ್ಯ ಬಿಟ್ಟರೆ ಇಡೀ ಚೀನಾಕ್ಕೆ ರೋಗ ಹರಡಲಿಲ್ಲ. ಬದಲಾಗಿ ಜಗತ್ತೆಲ್ಲಾ ಹರಡಿದೆ. ಕೊರೊನಾ ಇಟಲಿ, ಸ್ಪೇನ್, ಜರ್ಮನಿ, ಅಮೆರಿಕಾ ದಂತಹ ಬಲಿಷ್ಟ ರಾಷ್ಟ್ರಗಳನ್ನು ಕಾಡುತ್ತಿದೆ. ಆರ್ಥಿಕ ಸಂಕಷ್ಟ ಎದುರಾಗಿದೆ. ಬಲಿಷ್ಟ ರಾಷ್ಟ್ರಗಳ ವಿರುದ್ಧ ಯುದ್ಧ ಸಾರುವುದು ಅಷ್ಟು ಸುಲಭವಲ್ಲ. ಹೀಗಾಗಿ ಇಂತಹದೊಂದು ಜೈವಿಕ ಅಸ್ತ್ರ ಪ್ರಯೋಗ ಮಾಡಲು ಚೀನಾ ಮುಂದಾಗಿದೆ ಎನ್ನಲಾಗುತ್ತಿದೆ.

1980 ರಲ್ಲೇ 3ನೇ ಮಹಾಯುದ್ಧಕ್ಕೆ ಚೀನಾ ಪ್ಲಾನ್ ಮಾಡಿದೆ ಎನ್ನಲಾಗುತ್ತದೆ. ಅಮೆರಿಕಾವನ್ನು ನೇರವಾಗಿ ಎದುರಿಸುವುದು ಕಷ್ಟ ಎನ್ನುವುದು ಚೀನಾಕ್ಕೆ ಗೊತ್ತಿದೆ. ಯಾವುದೇ ಕ್ಷಿಪಣಿಗಳನ್ನು ಬಳಸದೆ ರಣತಂತ್ರ ಹೆಣದಿದೆಯಂತೆ ಚೀನಾ. ಇದರ ಜೊತೆಗೆ ರಫ್ತಿನ ಮೂಲಕ ಹಣ ಮಾಡುವ ಯೋಜನೆ ಮಾಡಿದೆಯಂತೆ. ಆರಂಭದಲ್ಲಿ ಕೊರೊನಾ ಹರಡುವಲ್ಲಿ ಅಮೆರಿಕಾದ ಕೈವಾಡ ಇದೆ ಎನ್ನುವ ಗೂಬೆ ಕೂಡಿಸುವ ಪ್ಲಾನ್ ಆಗಿತ್ತು. ಆಮೂಲಕ ಜಗತ್ತಿನ ಕಣ್ಣನ್ನು ಬೇರೆಡೆ ಸೆಳೆಯುವಂತೆ ಮಾಡಿತ್ತು. ಉತ್ಪಾದನೆಯಲ್ಲಿ ಚೀನಾ ಮೇಲೆನೇ ನಾನಾ ದೇಶಗಳು  ಅವಲಂಭಿಸಿವೆ. ಹೀಗಾಗಿ ಚೀನಾ ಬೇರೆ ದೇಶಗಳಿಗೆ ಅಗತ್ಯ ಸಲಕರಣೆಗಳ ಬೇಡಿಕೆ ಹೆಚ್ಚಿಸಿ ಮಾರಾಟ ಮಾಡುವ ಯೋಜನೆ ಮಾಡಿದೆ. ಪ್ರಪಂಚದ ಎಲ್ಲೆಡೆ ವೈದ್ಯಕೀಯ ಸಲಕರಣೆಗಳನ್ನು ಸೃಷ್ಟಿಸಿ ಲಾಭ ಪಡೆದುಕೊಳ್ಳುತ್ತಿದೆ. ಸಹಾಯ ಮಾಡುವ ನೆಪದಲ್ಲಿ ಪರೋಕ್ಷವಾಗಿ ಈ ರೀತಿ ಸಂಚು ಹೂಡಿದೆ. ಎಲ್ಲಾ ದೇಶದಲ್ಲಿ ಜೈವಿಕ ಯುದ್ಧಾಸ್ತ್ರ ಪ್ರಯೋಗ ಮಾಡಿ ಆರ್ಥಿಕತೆ ವ್ಯವಸ್ಥೆ ಕುಗ್ಗಿಸಿ ಜಗತ್ತಿನ ಬಲಿಷ್ಠ ರಾಷ್ಟ್ರವಾಗುವ ಉದ್ದೇಶದಿಂದ ಈ ಕುತಂತ್ರ ಮಾಡಿದೆ ಎನ್ನಲಾಗುತ್ತಿದೆ. ಅದರಲ್ಲೂ ವಿಶ್ವದ ಬಲಿಷ್ಠ ರಾಷ್ಟ್ರ ಅಮೆರಿಕಾಗಿಂತ ಮುಂದುವರೆಯುವುದೇ ಚೀನಾದ ಮೊದಲ ಪ್ಲಾನ್ ಆಗಿದೆ.

ಗುಳ್ಳೆನರಿಯಿಂದ ಜಗತ್ತು ದೂರವಾಗೋ ಪ್ಲಾನ್

ಹೀಗಾಗಿ ಯಾವುದೇ ಶಸ್ತ್ರಸ್ತ್ರಗಳನ್ನು ಬಳಕೆ ಮಾಡದೆ ಯುದ್ಧ ಸಾರಿದೆ. ಗುಳ್ಳೆ ನರಿ ಯಿಂದ ಜಗತ್ತು ದೂರವಾಗೋದು ಹೇಗೆ? ಅನೋ ಯೋಜನೆಯಲ್ಲಿದೆ. ವಿಶ್ವದ ಪವರ್ ರಾಷ್ಟ್ರವಾಗಲೂ ಉತ್ಪಾದನೆ ಕಾರ್ಖಾನೆ. ವ್ಯಾಪಾರದ ಮೂಲಕ ತನ್ನ ಜಿಡಿಪಿಯನ್ನು ಏರಿಸಿಕೊಂಡಿದೆ. ವಿಶ್ವದ ಜಾಗತೀಕ ವಲಯಕ್ಕೆ ಪೆಟ್ಟುಕೊಟ್ಟಿದೆ. ಇದೆಲ್ಲಾ ಸೂಪರ್ ಪವರ್ ರಾಷ್ಟ್ರವಾಗಿ ಬೆಳೆಯಲು ಮಾಡಿದ ಪ್ಲಾನ್. ಬೇರೆ ರಾಷ್ಟ್ರಗಳಿಗೆ ಕಳಪೆ ರ್ಯಾಪಿಡ್ ಟೆಸ್ಟ್ ವಿತರಣೆ ಮಾಡುತ್ತಿದೆ. ಜೊತೆಗೆ ಸಹಾಯ ಮಾಡುವ ಫೂಸ್ ಕೊಡುತ್ತಿದೆ. ಹೀಗಾಗಿ ಅಮೆರಿಕಾ, ಇಟಲಿ, ಜರ್ಮನ, ಸ್ಪೇನ್ ಕೆಂಗಣ್ಣಿಗೆ

ಗುರಿಯಾದ ಚೀನಾಕ್ಕೆ ತಕ್ಕ ಪಾಠ ಕಲಿಸಲು ದೇಶಗಳು ಮುಂದಾಗಿದ್ದು ಚೀನಾದಲ್ಲಿರುವ ತಮ್ಮ ಕಂಪನಿಗಳು ಸ್ಥಳಾಂತರಕ್ಕೆ ಯೋಚಿಸಿವೆ. ಚೀನಾ ಉತ್ಪನ್ನಗಳನ್ನು ಖರೀದಿಗೆಗೆ ನಿರಾಖರಿಸುವ ಯೋಚನೆಯಲ್ಲಿವೆ.

ಆದರೆ ಚೀನಾ ಮಾತ್ರ ಮಹಾದಾನಿಯಂತೆ ಫೂಸ್ ಕೊಡುತ್ತಾ ಹಣ ಮಾಡುತ್ತಿದೆ. ಒಂದು ವೇಳೆ ಈ ಪ್ಲಾನ್ ನಿಜವಾಗಿದ್ದರೆ ಚೀನಾ ಕಥೆ ಏನಾಗುತ್ತದೆ ಗೊತ್ತಿಲ್ಲಾ. ಜಗತ್ತು ಪಾಠ ಕಲಿಸೇ ಕಲಿಸುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights