ಕೊರೊನಾ ಪತ್ತೆಗೆ ಹೊಸ ತಂತ್ರಜ್ಞಾನ ರೂಪಿಸುತ್ತಿದ್ದಾರೆ ವಿಜ್ಞಾನಿಗಳು

ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ಸಮುದಾಯದಲ್ಲಿ ಹರಡುವ ಸಾಧ್ಯತೆಗಳನ್ನು ಎದುರಿಸುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಮಾಹಿತಿ ಇಲ್ಲದ ಅಥವಾ ಬಹಿರಂಗಗೊಂಡಿಲ್ಲದ ಕೊರೊನಾ ಸೋಂಕಿತರ ಪ್ರಕರಣಗಳನ್ನು, ವಿಶೇಷವಾಗಿ ಪಾದರಾಯನಪುರದಲ್ಲಿ ಕಂಡುಹಿಡಿಯಲು ಕಂಪ್ಯೂಟರಿಂಗ್ ವಿಧಾನಗಳನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.

ಕೊರೊನಾ ಸೋಂಕಿತರ ಪತ್ತೆಗಾಗಿ ಬಿಬಿಎಂಪಿ ನಡೆಸಿದ ಸಾಮಾನ್ಯ ಪರೀಕ್ಷೆಗಳ ಫಲಿತಾಂಶಗಳು ತೃಪ್ತಿದಾಯಕವಾಗಿಲ್ಲ – ಹೊಂಗಸಂದ್ರ, ಪಾದರಾಯನಪುರ ಮತ್ತು ಮಂಗಮ್ಮನಪಾಳ್ಯ ವಲಯಗಳಲ್ಲಿ 920 ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದ್ದು, ಕೇವಲ ಎಂಟು ಪ್ರಕರಣಗಳು ದೃಢಪಟ್ಟಿವೆ.

“ಆದರೆ, ಇಂತಹ ಸಂದಿಗ್ಧ ಸಂದರ್ಭದಲ್ಲಿ ಎಂಟು ಸಣ್ಣ ಸಂಖ್ಯೆಯಲ್ಲ. ಶೇಕಡಾವಾರು ನಿಖರತೆಯ ದೃಷ್ಟಿಕೋನದಿಂದ, ಇದು ಹೆಚ್ಚು ಮತ್ತು ಚಿಂತೆ ಮಾಡುವ ಸಂಗತಿಯಾಗಿದೆ ”ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಯ ಎಲೆಕ್ಟ್ರಿಕ್ ಕಮ್ಯುನಿಕೇಶನ ಎಂಜಿನಿಯರಿಂಗ್ ಡಿಪಾರ್ಟ್‌ಮೆಂಟ್‌ನ (ಇಸಿಇ) ಸಹಾಯಕ ಪ್ರಾಧ್ಯಾಪಕ ಹಿಮಾಂಶು ತ್ಯಾಗಿ ಹೇಳಿದ್ದಾರೆ.

ಕಂಟೈನ್‌ಮೆಂಟ್‌ ಏರಿಯಾಗಳ ಸೋಂಕಿತರ ಸಂಖ್ಯೆಯನ್ನು ಆಧರಿಸಿ ಹೊಸ ಪರೀಕ್ಷಾ ಕಾರ್ಯತಂತ್ರವನ್ನು ಬಿಬಿಎಂಪಿಗೆ ರೂಪಿಸಿಕೊಡುವುದಕ್ಕಾಗಿ ಕಳೆದ ಮೂರು ವಾರಗಳಿಂದ ಡಾ. ತ್ಯಾಗಿಯವರು ಪ್ರೊಫೆಸರ್ ಭರದ್ವಾಜ್ ಅಮೃತೂರ್ ಮತ್ತು ಸಹಾಯಕ ಪ್ರಾಧ್ಯಾಪಕ ಆದಿತ್ಯ ಗೋಪಾಲನ್ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಈ ತಂತ್ರವನ್ನು ಪ್ರಯೋಗಿಕವಾಗಿ ಜಾರಿಗೆ ತರಲು ಪಾದರಾಯನಪುರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಒಟ್ಟು 62 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನ ಒಟ್ಟು ಪ್ರಕರಣಗಳ ಮೂರನೇ ಒಂದು ಭಾಗವಾಗಿದೆ. ಆ ಕಾರಣಕ್ಕಾಗಿ ಪಾದಯಾರನಪುರವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಸ್ಮಾರ್ಟ್‌ ಸಿಟೀಸ್ ಇನಿಶಿಯೇಟಿವ್‌ನ ಎಂಡಿ ಹೆಫ್ಸೀಬ ಕೊರ್ಲಾಪತಿ ತಿಳಿಸಿದ್ದಾರೆ.

“ಅಡಾಪ್ಟಿವ್ ಸ್ಟ್ರಾಟಿಫೈಡ್ ರಾಂಡಮ್ ಸ್ಯಾಂಪ್ಲಿಂಗ್ ಸ್ಟ್ರಾಟಜಿ” ಎಂದು ಕರೆಯಲ್ಪಡುವ ಸಿಮ್ಯುಲೇಟರ್ ಫ್ರೇಮ್‌ವರ್ಕ್ ಸಹಾಯದಿಂದ ಈಗಾಗಲೇ ಒಳನೋಟಗಳನ್ನು ಸಿದ್ದಗೊಳಿಸಲಾಗಿದೆ.

20 ರಿಂದ 40 ವರ್ಷ ವಯಸ್ಸಿನ ಪುರುಷರು ಹೆಚ್ಚು ಮೊಬೈಲ್ ಹೊಂದಿರುವುದರಿಂದ ಅವರು ಹೆಚ್ಚಿನ ಸಂಖ್ಯೆಯಲ್ಲಿ ರೋಗಕ್ಕೆ ತುತ್ತಾಗುತ್ತಾರೆ. ಅದಲ್ಲದೆ, ಸಣ್ಣ ಕಟ್ಟಡಗಳ ನಡುವೆ ಅಪಾರ್ಟ್‌ಮೆಂಟ್‌ಗಳಂತಹ ಕಟ್ಟಡಗಳನ್ನೂ ಹೇಗೆ ಕಟ್ಟಲಾಗಿದೆ ಎಂಬುದು ಹರಡುವಿಕೆಯ ಮಾದರಿಯ ಮೇಲೆ ಪರಿಣಾಮ ಬೀರುತ್ತದೆ. ಎಂದು ಹೆಫ್ಸೀಬ ತಿಳಿಸಿದ್ದಾರೆ.

ಮಾನವ ಸಂವಹನ ಆಧಾರಿತ ಸಿಮ್ಯುಲೇಟರ್

ಐಐಎಸ್‌ಸಿ ವಿಜ್ಞಾನಿಗಳು 10,000 ರಿಂದ 30,000 ಜನಸಂಖ್ಯೆಗಾಗಿ ಫೈನ್‌ ಗ್ರೇಜ್ಡ್‌ ಏಜೆಂಟ್‌ ಆಧಾರಿತ ಸಿಮ್ಯುಲೇಟರ್ ಅನ್ನು ನಿರ್ಮಿಸುತ್ತಿದ್ದಾರೆ.

“ಸಿಮ್ಯುಲೇಟರ್‌ನಲ್ಲಿ, ಎಲ್ಲಾ ವ್ಯಕ್ತಿಗಳ ವಯಸ್ಸು ಮತ್ತು ಲಿಂಗದಂತಹ ವಿವಿಧ ಗುಣಲಕ್ಷಗಳ ಬಗ್ಗೆ ಕೇಳಲಾಗಿದೆ.  ಜೊತೆಗೆ ಜನರು ಪರಸ್ಪರ ಹೇಗೆ ಬೆರೆಯುತ್ತಾರೆ, ಹೇಗೆ ಪರಸ್ಪರ ಭೇಟಿಯಾಗುತ್ತಾರೆ ಎಂಬುದನ್ನು ರೂಪಿಸಲಾಗಿದೆ. ಇದು ಸೋಂಕು ಹೇಗೆ ಹರಡುತ್ತದೆ ಗುರುತಿಸಲು ಸಹಾಯ ಮಾಡುತ್ತದೆ ”ಎಂದು ಡಾ ಗೋಪಾಲನ್ ಹೇಳಿದರು.

ಕಂಟೈನ್‌ಮೆಂಟ್‌ ವಲಯದ ಯಾವ ಬೀದಿಗಳಿಗೆ ಹೆಚ್ಚಿನ ಪರೀಕ್ಷೆಯ ಅಗತ್ಯವಿರುತ್ತದೆ ಎಂಬುದನ್ನು ಹೈಲೈಟ್ ಮಾಡುವ ಸಾಮರ್ಥ್ಯವನ್ನು ಈ ಮಾದರಿ ಹೊಂದಿದೆ ಎಂದು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights