ಕೊರೊನಾ ಸಂಕಷ್ಟದಲ್ಲಿ ನೂರಾರು ಮೈಲಿ ನಡೆದು ಬದುಕುಳಿದ ಪಾದಗಳು

ದಿಕ್ಕು ತೋಚದೇ ಸಾವಿರಾರು ಕಿ.ಮೀ. ಸೈಕಿಲ್ ತುಳಿಯುತ್ತಾ ಮನೆಗೆ ತಲುಪಿದ ಯುವಕ., ಕೆಲಸ ಮಾಡುವ ಜಾಗದಿಂದ ನೂರಾರು ಕಿ.ಮೀ. ನಡೆದ ತುಂಬು ಗರ್ಭಿಣಿ, ಹಸಿವು ತಾಳಲಾರದೆ ಸೂರತ್‌ನಲ್ಕಿ ಅರ್ಧರಾತ್ರಿ ವಿಧ್ವಂಸಕ್ಕೆ ಇಳಿದ ಕಾರ್ಮಿಕರು, ಆದರೆ ದೇಹ, ಆಗದಿದ್ದರೆ ಹೆಣವಾದರು ಊರಿಗೆ ತಲುಪಿಸೋಣ ಎಂದು ಮುಂಬಯಿ ಬಸ್ಟಾಂಡು, ರೈಲ್ವೇಸ್ಟೇಷನ್‌ಗಳ ಹತ್ತಿರ ಮುಗಿಬಿದ್ದ ಕೂಲಿಗಳು,ನಗರದ ಜೈಲುಗಳಲ್ಲಿ, ಕಾರ್ಖಾನೆಗಳಲ್ಲಿ, ಮಿಲ್ಲುಗಳಲ್ಲಿ ಸಾವಿರಾರು ಜನ ಬಿಡುಗಡೆಗಾಗಿ ಆತಂಕ ದಿಂದ ಎಸುರುನೋಡುವ ಕೆಲಸಗಾರರು….
ಇವರ ಒಳಿತುಗಾಗಿ ಒಂದು ದೀಪವನ್ನಾದರು ಹಚ್ಚಿದ್ದಿಯಾ? ಅವರ ಬದುಕು ಹೋರಾಟಕ್ಕೆ  ಮದ್ದತ್ತುಗಾಗಿ ಒಮ್ಮೆಯಾದರು ಚಪ್ಪಾಳೆ ತಟ್ಟಿದ್ದೀಯಾ?
ಯಾರು ತಂದ ಕಾಯಿಲೆ? ಯಾರು ಮಾಡಿದ ತಪ್ಪು? ಯಾರು ತೀರಿಸಬೇಕಾದ ಋಣ?
ವಾರ್ತೆಗಳು ಬರೆಯುವವರು ಅವುಗಳನ್ನು ಓದುವವರಿಗಾಗಿಯೇ ಬರೆಯುತ್ತಾರೆ. ಓದುಗರು ವಾರ್ತೆಗಳು ಬರೆಯುವವರು ಬರೆದಿದ್ದನ್ನೇ ಓದುತ್ತಾರೆ?  ಮತ್ತೆ ಓದು ಬರಹ ಬರದವರಿಗಾಗಿ ಯಾರು ಮಾತನಾಡಬೇಕು?  ಗಣಿಯಲ್ಲಿ, ಕೆಲಸದಲ್ಲಿ,  ಕಾರ್ಖಾನಾಗಳಲ್ಲಿ ತಮ ಬದುಕನ್ನು ಧಾರೆ ಎರೆದವರಿಗಾಗಿ, ನೀನು ಬಳಸುವ ಪ್ರತಿಒಂದು ವಸ್ತುವನ್ನು ತಯಾರಿಸುವವರಿಗಾಗಿ, ಪ್ರತಿಒಂದು ಕಾಳುಗಳನ್ನು ಬೆಳೆಯುವವರಿಗಾಗಿ ಯಾರು ದೀಪ ಹಚ್ಚಬೇಕು?
ಯಾರು ಚಪ್ಪಾಳೆ ತಟ್ಟಿ ಶ್ಲಾಘಿಸಬೇಕು?
ನೀನೂ ಒಬ್ಬ ಮನುಷ್ಯನಾ?
ನೀನೂ ಓದಿಕೊಂಡಿದ್ದಿಯಾ?
ನೀನೂ ಬರೆಯುತ್ತಿದ್ದಿಯಾ?
ಯಾವುದಕ್ಕಾಗಿ?
ಬಾ!
ಈ ಹೊಡೆದ
ಪಾದಗಳಿಗೆ ನಿನ್ನ
ಮೆತ್ತನೆಯ ತುಟಿಗಳಿಂದ
ಒಂದು ಮುತ್ತನ್ನು ಒತ್ತು!
 @Siddarthi Subhashchandra Bose ವಾಲ್‌ನಿಂದ
(ತೆಲುಗುನಿಂದ ಕನ್ನಡಕ್ಕೆ ಭಾಷ್ಯಾಂತರ ಪದ್ಮಾ ಕೆ ರಾಜ್)
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights