ಮೌಂಟ್‌ ಎವರೆಸ್ಟ್‌ ಏರಿದ ಏಷ್ಯಾದ ಮೊದಲ ಅಂಧ ವ್ಯಕ್ತಿ ಝಾಂಗ್ ಹೊಂಗ್!

ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್‌ಅನ್ನು ಚೀನಾದ 46 ವರ್ಷದ ಝಾಂಗ್ ಹೊಂಗ್ ಅವರು ಏರಿದ್ದಾರೆ. ಈ ಮೂಲಕ ಮೌಂಟ್‌ ಎವರೆಸ್ಟ್‌ ಅನ್ನು ಏರಿದ ಏಷ್ಯಾದ ಮೊದಲ ವ್ಯಕ್ತಿ ಹಾಗೂ ಜಗತ್ತಿನ ಮೂರನೇ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

8,849 ಮೀಟರ್ ಎತ್ತರವಿರುವ ಹಿಮಾಚ್ಛಾದಿತ ಶಿಖರವನ್ನು ಅವರು ಮೇ 24ರಂದು ನೇಪಾಳದ ಬದಿಯಿಂದ ಏರಿದ್ದಾರೆ. ನಂತರ ಗುರುವಾರ ಮೂಲಶಿಬಿರಕ್ಕೆ ಮರಳಿ ಬಂದಿದ್ದಾರೆ.

ಅವರು ಮೌಂಟ್‌ ಎವರೆಸ್ಟ್‌ಅನ್ನು ಹತ್ತುವ ಸಂದರ್ಭದಲ್ಲಿ ಅವರಿಗೆ ಮೂವರು ಮಾರ್ಗದರ್ಶಕರು ನೆರವು ನೀಡಿದ್ದಾರೆ.

ನೈರುತ್ಯ ಚೀನಾದ ಚೊಂಗ್ಕಿಂಗ್ ನಗರದಲ್ಲಿ ಜನಿಸಿದ ಝಾಂಗ್, 21ನೇ ವರ್ಷ ಪ್ರಾಯದಲ್ಲಿ ಗ್ಲೌಕೋಮದಿಂದಾಗಿ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದರು.

ಇದನ್ನೂ ಓದಿ: ಕೊರೊನಾ ಹುಟ್ಟು ಆಕಸ್ಮಿಕವೋ? ಉದ್ದೇಶಪೂರ್ವಕವೋ? ಮೂಲ ಪತ್ತೆಗಾಗಿ ಜೋ ಬಿಡನ್ ಆದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights