ಕೊರೋನಾ ವೈರಸ್ ನಾಶಕ್ಕೆ ಕಾರ್ಯತಂತ್ರ ರೂಪಿಸಿ: ಸಾರ್ಕ್ ದೇಶಗಳಿಗೆ ಪ್ರಧಾನಿ ಮೋದಿ ಕರೆ

ಜಗತ್ತನ್ನೇ ನಿಬ್ಬರಗುಗೊಳಿಸಿರುವ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಜಂಟಿ ಕಾರ್ಯತಂತ್ರ ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ಕ್ ದೇಶಗಳ ನಾಯಕರಿಗೆ ಕರೆ ನೀಡಿದ್ದಾರೆ.

“ನಮ್ಮ ಜಗತ್ತು COVID-19 ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ವಿವಿಧ ಹಂತಗಳಲ್ಲಿ, ಸರ್ಕಾರಗಳು ಮತ್ತು ಜನರು ಇದನ್ನು ಎದುರಿಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ಟ್ವಿಟ್ ಮಾಡಿದ್ದಾರೆ.

ಜಾಗತಿಕ ಜನಸಂಖ್ಯೆಯ ಗಮನಾರ್ಹ ಸಂಖ್ಯೆಯ ನೆಲೆಯಾಗಿರುವ ದಕ್ಷಿಣ ಏಷ್ಯಾ, ಜನರ ಆರೋಗ್ಯವನ್ನು ಸುಧಾರಿಸಲು ಸಾರ್ಕ್ ದೇಶಗಳ ನಾಯಕರು ಕೊರೋನಾ ವೈರಸ್ ವಿರುದ್ಧ ಜಂಟಿ ಹೋರಾಟ ನಡೆಸಲು ಕಾರ್ಯತಂತ್ರ ರೂಪಿಸಬೇಕು ಮತ್ತು ನಮ್ಮ ತಂತ್ರ ಇಡೀ ವಿಶ್ವಕ್ಕೆ ಮಾದರಿಯಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನಮ್ಮ ನಾಗರಿಕರನ್ನು ಆರೋಗ್ಯವಾಗಿಡಲು ಸಾರ್ಕ್ ನಾಯಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯತಂತ್ರದ ಬಗ್ಗೆ ನಾವು ಚರ್ಚಿಸಬಹದು ಎಂದು ಮೋದಿ ಸಲಹೆ ನೀಡಿದ್ದಾರೆ.

ಸೌತ್ ಏಷಿಯಾ ಅಸೋಸಿಯೇಷನ್ ಫಾರ್ ರೀಜನಲ್ ಕೊಆಪರೇಷನ್(ಸಾರ್ಕ್) ಭಾರತ, ನೇಪಾಳ, ಆಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಒಳಗೊಂಡ ಪ್ರಾದೇಶಿಕ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ.

ಮೋದಿ ಕರೆ ಕೊಟ್ಟಿರುವ ಬೆನ್ನಲ್ಲೇ, ಭಾರತದ ಜನರು “ಶೇಕ್‌ ಹ್ಯಾಂಡ್‌ ಕೊಡಬೇಡಿ, ನಮಸ್ಕಾರ ಮಾಡಿ ಎಂದಷ್ಟೇ ಹೇಳಲು ನಮ್ಮ ಮೋದಿಯವರಿಂದ್ದ ಸಾಧ್ಯವಾಗಿದೆ. ಇನ್ನಾವುದೇ ಕಾರ್ಯತಂತ್ರ ರೂಪಿಸಲು ಐಡಿಯಾಗಳು ಬರುತ್ತಿಲ್ಲ, ನೀವಾದರೂ ಮಾಡಿ” ಎಂದು ಮೋದಿಯವರು ಕರೆಕೊಟ್ಟಿದ್ದಾರೆಂದು ಟೀಕಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights