ಕೋವಿಡ್-19 : ಒಂದೇ ದಿನಕ್ಕೆ ಬೆಂಗಳೂರಿನ ಶಿವಾಜಿನಗರದಲ್ಲಿ 14 ಕೊರೊನಾ ಕೇಸ್ ಪತ್ತೆ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇಂದು ಬೆಳ್ಳಂಬೆಳಿಗ್ಗೆ ಬಿಗ್ ಶಾಕ್ ನೀಡಿದೆ. ಕಳೆದ 24 ಗಂಟೆಯಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲಿ ಬರೋಬ್ಬರಿ 14 ಕೊರೊನಾ ಕೇಸ್ ಗಳು ದಾಖಲಾಗಿವೆ.

ಹೌದು… ಕೋವಿಡ್-19ನ ಹಾಟ್ ಸ್ಪಾಟ್ ಆಗಿರುವ ಬೆಂಗಳೂರಿನ ಶಿವಾಜಿ ನಗರದಲ್ಲಿ ಮತ್ತೆ 14 ಕೊರೊನಾ ಕೇಸ್ ಗಳು ದಾಖಲಾಗಿವೆ. ಶುಕ್ರವಾರ(ನಿನ್ನೆ) ಹೋಟೆಲ್ ಹೌಸ್‌ ಕಿಪೀಂಗ್ ಸಿಬ್ಬಂದಿಯ ಸಂಪರ್ಕದಿಂದ ಶಿವಾಜಿನಗರದಲ್ಲಿ 11 ಮಂದಿಗೆ ಸೋಂಕು ತಗುಲಿತ್ತು. ರಿಜೆಂಟ್ ಪ್ಲೇಸ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ವ್ಯಕ್ತಿಗೆ ಈ ಹಿಂದೆ ಕೊರೋನಾ ಬಂದಿತ್ತು. ಈತನ ಮೂಲಕ ಇಷ್ಟು ಮಂದಿಗೆ ವೈರಸ್ ವಕ್ಕರಿಸಿದೆ.

ಹೋಟೆಲ್ ಹೌಸ್‌ ಕಿಪೀಂಗ್ ಸಿಬ್ಬಂದಿಯ ಸಂಪರ್ಕದಲ್ಲಿದ್ದ 73 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತ. ಇವರು ಮೊದಲು ಒಂದೇ ಬಿಲ್ಡಿಂಗ್ ನಲ್ಲಿ ಇದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ 20 ಜನರ ಗಂಟಲು ದ್ರವ ಪರೀಕ್ಷೆ ನಡೆಸಿದ್ದು,  ಒಟ್ಟು 1 4 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ನಿನ್ನೆ 22 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 11 ಪಾಸಿಟಿವ್ ದೃಢಪಟ್ಟಿತ್ತು. ಇಂದು 20 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 14 ಪಾಸಿಟಿವ್ ಬಂದಿದೆ. ಈ 14 ಜನ ಹಾಗೂ ನಿನ್ನೆ ಪಾಸಿಟಿವ್ ಬಂದ 11 ಜನ ಒಂದೇ ಪ್ಲೋರ್ ನಲ್ಲಿ ಇದ್ದರು.

ಹೀಗಾಗಿ ಶಿವಾಜಿನಗರದಲ್ಲಿ ಇದೀಗ ಒಟ್ಟು ಪ್ರಕರಣಗಳ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ನಿನ್ನೆ 202 ಪ್ರಕರಣ ಪತ್ತೆಯಾಗಿದ್ದು, ಇಂದಿನ 14 ಪ್ರಕರಣ ಸೇರಿ 216ಕ್ಕೆ ಏರಿಕೆಯಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights