ಕ್ಯಾಂಡಲ್‌ ಲೈಟ್‌: ರಾತ್ರಿ 9 ಗಂಟೆಗೆ ನಿದ್ರೆ ಮಾಡಬೇಕೆನಿಸಿದರೆ ನಾನು ಮಲಗುತ್ತೇನೆ!; ಮಮತಾ ಬ್ಯಾನರ್ಜಿ

ಭಾನುವಾರ ರಾತ್ರಿ 9 ಗಂಟೆಗೆ ದೇಶದ ಎಲ್ಲ ಜನರೂ ಮನೆಯ ಲೈಟ್ ಆರಿಸಿ, ಮನೆಯ ಟೆರೇಸ್ ಅಥವಾ ಬಾಲ್ಕನಿಗೆ ಬಂದು ದೀಪ, ಟಾರ್ಚ್​ಗಳನ್ನು ಬೆಳಗಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪಿಎಂ ಮೋದಿ, ಅದು ಅವರವರ ವೈಕ್ತಿಕ ವಿಚಾರ. ನನಗೆ ನಾಳೆ ರಾತ್ರಿ 9 ಗಂಟೆಗೆ ನಿದ್ರೆ ಮಾಡಬೇಕು ಎನಿಸಿದರೆ ಮಲಗುತ್ತೇನೆ ಎಂದು ಹೇಳಿದ್ದಾರೆ.

ನಾಳೆ ರಾತ್ರಿ 9 ಗಂಟೆಗೆ ದೀಪ ಹಚ್ಚುವುದು ಅಥವಾ ಮಲಗುವುದು ಜನರ ವೈಯಕ್ತಿಕ ವಿಚಾರ. ನನಗೆ ನಾಳೆ ಮಲಗಬೇಕು ಎನಿಸಿದರೆ ನಾನು ದೀಪ ಹಚ್ಚುವುದಿಲ್ಲ. ನಿಮಗೆ ಅವರು ಹೇಳಿದಂತೆ ದೀಪ ಹಚ್ಚಬೇಕೆನಿಸಿದರೆ ಹಚ್ಚಿ, ಆದರೆ, ಆ ಬಗ್ಗೆ ನನ್ನನ್ನು ಕೇಳಬೇಡಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೊರೋನಾ ವೈರಸ್ ದಾಳಿಯಿಂದ ತತ್ತರಿಸಿರುವ ಭಾರತದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ದೇಶದ ಜನರೆಲ್ಲರೂ ತಮ್ಮ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಏ. 5ಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮೊಂಬತ್ತಿ, ಹಣತೆ ಅಥವಾ ಮೊಬೈಲ್ ಟಾರ್ಚ್​ ಬೆಳಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights