‘ಟಾಮ್ ಆ್ಯಂಡ್ ಜೆರ್ರಿ’ ನಿರ್ದೇಶಕ ಜೆನಿ ಡೀಚ್ ನಿಧನ

ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸಿದ್ದ ‘ಟಾಮ್ ಆ್ಯಂಡ್ ಜೆರ್ರಿ’ ಶೋವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಮಕ್ಕಳಿಂದ ದೊಡ್ಡವರವರೆಗೂ ‘ಟಾಮ್​ ಆ್ಯಂಡ್ ಜೆರ್ರಿ’ಯ ಅಭಿಮಾನಿಗಳೇ. ಈ ಸರಣಿಯ ನಿರ್ದೇಶಕ ಮತ್ತು ಆಸ್ಕರ್ ಪ್ರಶಸ್ತಿ ಪುರಸ್ಕೃತ ಜೆನಿ ಡೀಚ್ ನಿಧನರಾಗಿದ್ದಾರೆ.

ದೇಶ, ಭಾಷೆಯ ಭೇದವಿಲ್ಲದೆ ಇಡೀ ವಿಶ್ವಾದ್ಯಂತ ‘ಟಾಮ್​ ಆ್ಯಂಡ್​ ಜೆರ್ರಿ’ ಕಾರ್ಟೂನ್​ ಸೀರೀಸ್​ ಗಳಿಸಿದ ಪ್ರಖ್ಯಾತಿಯ ಹಿಂದಿನ ಶಕ್ತಿ ಇದೇ ಜೆನಿ ಡೀಚ್. 95 ವರ್ಷದವರಾಗಿದ್ದ ಅವರು ಕಳೆದ ಗುರುವಾರವೇ ಪ್ರಾಗ್​ ಲಿಟಲ್ ಕ್ವಾರ್ಟರ್​ನಲ್ಲಿರುವ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ, ಈ ವಿಷಯ ತಡವಾಗಿ ಗೊತ್ತಾಗಿದೆ. ಅವರು ‘ಪೊಪೆಯೆ’ ಸೀರೀಸ್ ಕೂಡ ನಿರ್ದೇಶಿಸಿದ್ದಾರೆ.

1924ರಲ್ಲಿ ಚಿಕಾಗೋದಲ್ಲಿ ಜನಿಸಿದ ಡೀಚ್​ ಅವರ ಪೂರ್ತಿ ಹೆಸರು ಯೂಜಿನ್ ಮರಿಲ್ ಡೀಚ್. ಮನ್ರೋ, ಟಾಮ್ ಟೆರಿಫಿಕ್ ಮತ್ತು ನುದ್ನಿಕ್ ಅನಿಮೇಟೆಡ್ ಕಾರ್ಟೂನ್​ಗಳನ್ನು ಡೀಚ್ ನಿರ್ದೇಶಿಸಿದ್ದಾರೆ.

ಇವರು 1960ರಲ್ಲಿ ನಿರ್ದೇಶಿಸಿದ್ದ ಮನ್ರೋ ಎಂಬ ಶಾರ್ಟ್​ ಫಿಲ್ಮ್​ಗೆ ಬೆಸ್ಟ್​ ಅನಿಮೇಟೆಡ್ ಶಾರ್ಟ್​ ಫಿಲ್ಮ್ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿತ್ತು. ವಿಶ್ವದ ಪ್ರಸಿದ್ಧ ಕಾರ್ಟೂನಿಸ್ಟ್​​ನ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights