ತಮ್ಮ ಫಾಲೋವರ್ಸ್ ಸಂಖ್ಯೆ ತಿಳಿದುಕೊಳ್ಳಲು ದೀಪ ಹಚ್ಚಲು ಹೇಳಿದ್ರಾ ಮೋದಿ…?

ತಮ್ಮ ಫಾಲೋವರ್ಸ್ ನ ಸಂಖ್ಯೆ ತಿಳಿದುಕೊಳ್ಳಲು ದೀಪ ಹಚ್ಚಲೆ ಹೇಳಿದ್ರಾ ಮೋದಿ…? ಹೀಗೊಂದು ಪ್ರಶ್ನೆ ಎಲ್ಲೆಡೆ ಸದ್ದು ಮಾಡುತ್ತಿದೆ.

ಹೌದು… ದಿನಾಂಕ 5 ಭಾನುವಾರ ರಾತ್ರಿ 9ಗಂಟೆ 9 ನಿಮಿಷ ಮನೆಯ ಲೈಟ್ ಆಫ್ ಮಾಡಿ ಮೇಣದ ಬತ್ತಿ/ದೀಪ/ಟಾರ್ಚ್ ಹಚ್ಚುವಂತೆ 130 ಕೋಟಿ ಜನರಲ್ಲಿ ದೇಶದ ಪ್ರಧಾನಿ ಮನವಿ ಮಾಡಿಕೊಂಡಿದ್ದರು. ಈ ಮೂಲಕ ಕೊರೊನಾ ವಿರುದ್ಧ ಹೋರಾಡಲು ನಾವೆಲ್ಲಾರು ಒಗ್ಗಾಟಾಗಿದ್ದೇವೆ ಎನ್ನುವ ಬೆಳಗಿನ ಸಂದೇಶವನ್ನು ರವಾನಿಸಿ ಎಂದು ಕರೆ ನೀಡಿದ್ದರು.

ಮೋದಿ ಅವರ ಮನವಿಯಂತೆ ಜನ ದೀಪ ಹಚ್ಚಿದ್ರು, ದೀಪಾವಳಿಯಂತೆ ಆಚರಣೆ ಕೂಡ ಮಾಡಿದ್ರೂ. ಈ ರೀತಿ ದೀಪ ಹಚ್ಚೋದ್ರ ಹಿಂದೆ ಸಸ್ತಾಸ್ತ್ರಗಳು ಇವೆ. ಈ ಅಸ್ತ್ರಗಳು ಕೊರೊನಾ ವಿರುದ್ಧ ಹೋರಾಡಲು ಮೋದಿ ಬಳಸಿದ್ದಾರೆ ಎನ್ನುವ ಹೇಳಿಕೆಗಳು ಕೇಳಿ ಬಂದವು. ಆದರೆ ಬೆಳಗಾಗುವ ಹೊತ್ತಿಗೆ ದೀಪ ಹಚ್ಚೋದರ ಹಿಂದಿನ ಗುಟ್ಟು ಇದಾಗಿರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ದೇಶದೆಲ್ಲೆಡೆ ಬಹುತೇಕ ಜನ ಮೋದಿ ಹೇಳಿದ ಮಾತನ್ನ ಚಾಚು ತಪ್ಪದೆ ಪಾಲಿಸ್ತಾರೆ. ಹೀಗಾಗಿ ಮೋದಿ ಅವರು ತಮ್ಮ ಪಾಲೋವರ್ಸ್ ಅಂಕಿ ಅಂಶ   ಬಗ್ಗೆ ತಿಳಿದುಕೊಳ್ಳಲು ದೇಶದೆಲ್ಲೆಡೆ ದೀಪ ಬೆಳಗಲು ಹೇಳಿದ್ರು ಎನ್ನಲಾಗುತ್ತಿದೆ.ಅಷ್ಟಕ್ಕು ದೀಪ ಹಚ್ಚಿದ್ರೆ ಮೋದಿ ಪಾಲೋವರ್ಸ್ ಬಗ್ಗೆ ಹೇಗೆ ಗೊತ್ತಾಗುತ್ತೆ ಅಂತೀರಾ..? ಅದಕ್ಕೂ ಕೆಲ ಮಂದಿ ಮಾತನಾಡಿಕೊಳ್ಳುತ್ತಿರುವುದು ಹೀಗೆ.

ಸ್ಯಾಟಲ್ಯಾಟ ಮೂಲಕ ದೇಶದ ಫೋಟೋ ಹಾಗೂ ವಿಡಿಯೋ ವನ್ನ ಮಾಡಿಕೊಳ್ಳಲಾಗುತ್ತದೆ. ಪ್ರತೀ ಮನೆ ಮನೆಗಳಲ್ಲಿ ದೀಪ ಬೆಳಗಿಸಿದಾಗ ತೆಗೆಯುವ ದೃಶ್ಯಗಳಿಂದ ದೇಶದಲ್ಲಿ ಯಾವ ಭಾಗದಲ್ಲಿ ಮೋದಿ ಪಾಲೋವರ್ಸ್ ಹೆಚ್ಚಿದ್ದಾರೆ ಎನ್ನುವ ವಿಚಾರ ತಿಳಿಯುತ್ತದೆ. ಹೀಗಾಗಿ ಮೋದಿ ಅವರು ದೇಶದ ಜನರ ಕೈಯಲ್ಲಿ ದೀಪ ಬೆಳಗಿಸುವ ಕೆಲಸ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.

 

ಜೊತೆಗೆ ಈ ಕೆಲಸವನ್ನು ಮೋದಿ ಏಪ್ರಿಲ್ 5ನೇ ತಾರೀಖು ಯಾಕೆ ಮಾಡಿಸಿದರು ಅನ್ನೋದಕ್ಕೂ ಒಂದು ಕಾರಣವಿದೆ ಎನ್ನಲಾಗುತ್ತದೆ. ಇಂದಿಗೆ  ಭಾತರತೀಯ ಜನತಾ ಪಾರ್ಟ್ ಸ್ಥಾಪನೆಯಾಗಿ 40 ವರ್ಷ ಪೂರ್ಣಗೊಂಡಿವೆ. ಈ ಹಿನ್ನೆಯಲ್ಲಿ 40 ವರ್ಷದ ಆಡಳಿತ ಅವಧಿಯಲ್ಲಿ ತಾವು ಗಳಿಸಿದ  ಜನರ ಪ್ರೀತಿ ಬಗ್ಗೆ ಲೆಕ್ಕಾಚಾರದ ಜೊತೆಗೆ ಕೊರೊನಾ ವಿರುದ್ಧ ಹೋರಾಡುವ ಅಸ್ತ್ರ ಬಳಕೆ ಮಾಡಿಲು ಮೋದಿ ಮುಂದಾಗಿದ್ದಾರೆ ಎನ್ನಲಾಗುತ್ತದೆ.

ಇಂದಿಗೆ ಭಾರತೀಯ ಜನತಾ ಪಕ್ಷ ಸ್ಥಾಪನೆಗೊಂಡು 40 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಕಾರ್ಯಕರ್ತರಿಗೆ ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಪಕ್ಷಕ್ಕೆ ಅಧಿಕಾರ ಸಿಕ್ಕಾಗಲೆಲ್ಲಾ ಪಕ್ಷದ ಏಳಿಗೆಗೆ ಮತ್ತು ಬಡವರ ಸರ್ವತೋಮುಖ ಅಭಿವೃದ್ಧಿಗೆ ಶ್ಲಾಘಿಸಿದ್ದಾರೆ. ಇನ್ನು ಪಕ್ಷದ ಕಾರ್ತಕರ್ತರು ತಮ್ಮ ಬೆವರು, ರಕ್ತದಿಂದ ಪಕ್ಷಕ್ಕೆ ನೀರುಳಿಸಿದ್ದಾರೆ. ಅವರ ಕಾರಣದಿಂದಾಗಿಯೇ ಪಕ್ಷದಲ್ಲಿ ಕೋಟ್ಯಾಂತರ ಜನರ ಸೇವೆ ಮಾಡಲು ಶ್ರಮಿಸಿ ಸಕಾರಾತ್ಮಕ ಬದಲಾವಣೆಯನ್ನು ತಂದಿದ್ದಾರೆ. ದೇಶ ಕೊರೊನಾ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲೇ 40ನೇ ವರ್ಷಕ್ಕೆ ಕಾಲಿಟ್ಟಿದೆ. ಈ ವೇಳೆ ಪಕ್ಷದ ಎಲ್ಲಾ ಕಾರ್ಯಕರ್ತರು, ಅಧ್ಯಕ್ಷರು ಮಾರ್ಗ ಸೂಚಿಗಳನ್ನು ಪಾಲಿಸಬೇಕು ಎಂದು ಆಗ್ರಹಿಸಿದ್ದಾರೆ. ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ದೇಶದಲ್ಲಿ ಕೋವಿಡ್ 19 ನನ್ನು ಹೋಗಕಾಡಿಸಲು ಒಗ್ಗೂಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಮೋದಿ ಅವರು ಕೊರೊನಾ ವಿರುದ್ಧ ಹಚ್ಚಲಾದ ದೀಪದ ಹಿಂದೆ ಇಷ್ಟೆಲ್ಲಾ ಊಹಾಪೋಹಗಳು ಸುಳಿದಾಡುತ್ತಿವೆ.

https://twitter.com/narendramodi/status/1246995757468532736

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights