ದೆಹಲಿ ಜಮತ್ ಸಿಕ್ರೇಟ್ : ಲಾಕ್ ಡೌನ್ ನಡುವೆಯೂ ನಿಜಾಮುದ್ದೀನ್ ನಲ್ಲಿ ಜನ ಸೇರಿದ್ದು ಹೇಗೆ..?
ವಿಶ್ವಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಸಾವಿರಾರು ಜನರ ಪ್ರಾಣ ಬಲಿ ಪಡೆದು ಕೇಕೆ ಹಾಕುತ್ತಿದೆ. ನಿನ್ನೆ ಒಂದೇ ದಿನ ಭಾರತದಲ್ಲಿ 437 ಕೊರೊನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ. ಕೇವಲ 24 ಗಂಟೆಗಳಲ್ಲಿ ಅತೀದೊಡ್ಡ ಪ್ರಮಾಣದ ಸೋಂಕಿತ ಪ್ರಕರಣ ಇದಾಗಿದೆ.
70 ದೇಶದ 8000 ಜನ 3 ದಿನ (ಮಾರ್ಚ್ 13 ರಿಂದ 15) ಸಮಾವೇಶ. ಇದೊಂದೆ ಸದ್ಯ ಕೊರೊನಾ ಭೀತಿ ಹೆಚ್ಚಿಸಿರೋದು. ದಿಲ್ಲಿ ಜಮಾತ್ ಸಭೆ ಅಸಲಿ ರಹಸ್ಯ ಏನು..? ಆ ಆಡಿಯೋ ಬಿಚ್ಚಿಟ್ಟಾ ದೆಹಲಿ ಜಮಾತ್ ಸಿಕ್ರೇಟ್ ಯಾವುದು..?342 ಜನಕ್ಕೂ ರಾಜ್ಯದಲ್ಲಿ ನಿಜಾಮುದ್ದೀನ ನಂಜು ಅಂಟಿದಿಯಾ..? ಇಂತೆಲ್ಲಾ ಪ್ರಶ್ನೆಗಳು ದೆಹಲಿ ಧಾರ್ಮಿಕ ಸಭೆ ಬಳಿಕ ಎಲ್ಲರನ್ನು ಕಾಡ ತೊಡಗಿವೆ.
ಈ ದೆಹಲಿಯ ನಿಜಾಮುದ್ದೀನ್ ಮುಸ್ಲಿಂ ಧಾರ್ಮಿಕ ಸಭೆ ಬಳಿಕ ಸಾರ್ವಜನಿಕರಲ್ಲಿ ಉಂಟಾಗಿದ್ದು ಆತಂಕ ಒಂದಾ.? ಎರಡಾ.? ನಿಮ್ಮ ಅಕ್ಕ-ಪಕ್ಕ ವಾಸಿಸುವವರು ದೆಹಲಿಗೆ ಹೋಗಿದ್ದಾರಾ..? ನಿಮ್ಮ ಧರ್ಮ ಗುರುಗಳು ದೆಹಲಿಗೆ ಹೋಗಿದ್ರಾ..? ಇವರ ಸಂಬಂಧಿಕರು ನಿಮ್ಮ ಸಂಪರ್ಕದಲ್ಲಿ ಇದ್ರಾ..? ದೆಹಲಿಗೆ ಹೋದವರ ಸ್ನೇಹಿತರು ನಮ್ಮ ಮನೆಯವರಿಗೆ ಪರಿಚಯವಿತ್ತಾ…? ಹೀಗೆ ಪ್ರಶ್ನೆ ಹಾಕಿಸುವಂತೆ ಮಾಡಿಬಿಟ್ಟಿದೆ.
ಇಂತಹ ಪ್ರಶ್ನೆಯನ್ನು ನಿನಗೆ ನಿವೇ ಹಾಕಿಕೊಳ್ಳುವಂತೆ ಇಡೀ ದೇಶವೇ ಮತ್ತೆ ಭಯ ಭೀತಿಯಲ್ಲಿ ಮುಳುಗುವಂತೆ ದೆಹಲಿಯ ಧಾರ್ಮಿಕ ಸಭೆ ಮಾಡಿಬಿಟ್ಟಿದೆ. ಕೊರೊನಾ ಆತಂಕದಲ್ಲಿದ್ದರು ಸಭೆ ಸೇರಿದ್ದು ಹೇಗೆ ಇದಕ್ಕೆ ಆಡಿಯೋ ಬಿಚ್ಚಿಟ್ಟಿದಿಯಾ ಉತ್ತರ..? ಹೀಗೊಂದು ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ದೆಹಲಿಯ ನಿಜಾಮುದ್ದೀನ ನಡೆದಿದ್ದೇನು…? 8000 ಸಾವಿರ ಜನ ಎಲ್ಲೆಲ್ಲಿಂದ ದೆಹಲಿಗೆ ಬಂದಿದ್ದರು…? ಏನಿದು ನಿಜಾಮುದ್ದೀನ್ ನಂಜು..? ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ನಿಜಾಮುದ್ದೀನ್ ಅನ್ನೋದು ದೆಹಲಿ ಒಂದು ಪ್ರದೇಶ. ಇಲ್ಲಿಯ ಬೃಹತ್ ಮಸೀದ್ ಒಂದರಲ್ಲಿ ತಬಲೀಗ್ ಜಮತ್ ಆಯೋಜನೆ ಯ ಸಮಾವೇಶ ನಡೆಸಲಾಗಿತ್ತು. ಈ ಸಮಾವೇಶದಲ್ಲಿ ದೇಶ ವಿದೇಶದಿಂದ 4000 ಕ್ಕೂ ಅಧಿಕ ಜನ ಭಾಗವಹಿಸಿದ್ದರು. ಕೊರೊನಾ ಸೋಂಕಿತ ದೇಶದಿಂದ ಸಮಾವೇಶದಲ್ಲಿ ಭಾಗಿಯಾಗಿದ್ದರು. ಇದರಿಂದ ಸಮಾವೇಶದಲ್ಲಿದ ನೂರಾರು ಜನರಿಗೆ ಸೋರು ಹರಡಿದೆ. 10 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.ಇದೊಂದು ಮುಸ್ಲೀಂ ಧಾರ್ಮಿಕ ಸಭೆ ಹಾಗೂ ಶೈಕ್ಷೇಣಿಕ ಸಭೆ ಕೂಡ ಆಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನ ಮರಳಿ ತಮ್ಮ ರಾಜ್ಯಕ್ಕೆ ಹೋಗಿದ್ದಾರೆ. ಕೊರೊನಾ ಸೋಂಕಿತರು ಭಾರತದ ಉದ್ದಗಲಕ್ಕೂ ಹೋಗಿದ್ದಾರೆ. ಕರ್ನಾಟಕದಿಂದ 342 ಮಂದಿ ಪಾಲ್ಗೊಂಡಿದ್ದರು ಎನ್ನಲಾಗುತ್ತಿದೆ. ಮಾತ್ರವಲ್ಲ ಭಾರತದ ನಾನಾ ಜಿಲ್ಲೆಗಳಿಂದ ಮುಸ್ಲೀಂ ಧರ್ಮಗುರುಗಳು ಭಾಗವಹಿಸಿದ್ದರು.

ಇದುವರೆಗೂ ಭಾರತದಲ್ಲಿ 1,834 ಜನರಿಗೆ ಕೊರೋನಾ ಸೋಂಕು ಹರಡಿದೆ. ಕೊರೋನಾದಿಂದ ಸತ್ತವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 335ಕ್ಕೆ ಏರಿಕೆಯಾಗಿದೆ. ಆಂಧ್ರಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ 9 ಹೊಸ ಕೇಸ್ಗಳು ವರದಿಯಾಗಿವೆ. ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಿಗೆ ಕೊರೋನಾ ವೈರಸ್ ಹರಡುತ್ತಿರುವುದರಿಂದ 150ಕ್ಕೂ ಹೆಚ್ಚು ಹೊಸ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಸಭೆ ನಡೆದ ನಿಜಾಮುದ್ದೀನ್ ಪ್ರದೇಶದ 1,800 ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಸಮಾವೇಶ ಮುಗಿದ ಬಳಿಕವೂ ಮರ್ಕಸ್ ಮಸೀದ್ ನಲ್ಲಿ 2000 ಮಂದಿ ಉಳಿದುಕೊಂಡಿದ್ದರು ಎನ್ನಲಾಗುತ್ತದೆ.ಹಾಗಾದ್ರೆ ಸಮಾವೇಶಕ್ಕೆ ಹೋದವರಲ್ಲಿ ಭಯ ಇರಲಿಲ್ಲವೇ..? ದೇಶದ ಪ್ರಧಾನಿ ಲಾಕ್ ಡೌನ್ ಘೋಷಿಸಿದ್ರು ಇವರು ನಿಯಮ ಉಲ್ಲಂಘಿಸಿ ಸಭೆ ಸೇರಿದ್ರಾ..?
ಹೌದು… ನಿಜಾಮುದ್ದೀನ್ ನ ಮರ್ಕಸ್ ಮಸೀದ್ ನಲ್ಲಿ ಒಂದು ರೂಮ್ ನಲ್ಲಿ 300 ಜನರಂತೆ. ಸಮಾವೇಶದ ಬಳಿಕವೂ ಇವರನ್ನ ಿಲ್ಲಿ ಉಳಿಸಿಕೊಂಡಿರುವುರ ಹಿಂದೆ ಆಡಿಯೋ ರಹಸ್ಯವಿದೆ ಎಂದು ಹೇಳಲಾಗುತ್ತದೆ. ಮಸ್ಲೀಂ ಧರ್ಮಗುರು ಮೌಲಾ ಮಾತನಾಡಿದ ಆಡಿಯೋ ಎನ್ನಲಾದ ಭಾರೀ ಸದ್ದು ಮಾಡಿದೆ. ಆ ಆಡಿಯೋದಲ್ಲಿ ಇರುವ ವಿಷಯ ಇದು “ ಪ್ರಾಣಕ್ಕೆ ಹೋಗುವುದು ಬೇಡ. ನಮ್ಮ ಪ್ರಾಣ ಕಾಯುವವನು ಮುಲ್ಲಾ. ನಮ್ಮ ಸಭೆಯಲ್ಲಿ ಜನರನ್ನು ಚದರಿಸುವ ದೃಷ್ಟಿಯಿಂದ ಈ ರೀತಿ ಮಾಡಲಾಗುತ್ತಿದೆ.” ಎನ್ನುವ ಆಡಿಯೋದಿಂದ ಜನ ಮಸೀದ್ ನಲ್ಲಿ ಸಭೆಯಲ್ಲಿ ಉಳಿದುಕೊಂಡರಾ ಎನ್ನುವ ಅನುಮಾನ ಶುರುವಾಗಿದೆ. ಆದರೆ ಈ ಆಡಿಯೋ ಮೌಲಾ ಅವರದ್ದೇ ಎನ್ನುವುದು ದೃಢವಾಗಿಲ್ಲ.
ಹೀಗಾಗಿನೋ ಏನೋ ಮರ್ಕಸ್ ಮಸೀದಿಯಲ್ಲಿ ನೂರಾರು ಜನರಿಗೆ ಸೋಂಕು ತಗಲಿದೆ. ಇವರುಗಳು ಎಲ್ಲೆಲ್ಲಿದ್ದಾರೆ ? ಇವರುಗಳು ಆ ಮಾಹಿತಿ ನೀಡ್ತೀವಿ ನೋಡಿ. ಬಾಗಲಕೋಟಿ 16 ಮಂದಿ, ಹುನುಗುಂದ 3, ಬಳ್ಳಾರಿಯ 12 ಜನರಲ್ಲಿ 6 ಮಂದಿ ಸಿಕ್ಕಿದ್ದಾರೆ. ದಕ್ಷಿಣ ಕನ್ನಡ -1, ಉಡಪಿ 16, ಚಿಕ್ಕಬಳ್ಳಾಪರು ದಂಪತಿ, ಗದಗ 11 ಜನರಿಗೆ ಸೋಂಕು-27 ಜನರಿಗೆ ತಪಾಸಣೆ, ಬೆಳಗಾವಿ 12 ಜನರಲ್ಲಿ ಇಂಡೋನಿಷಿಯಾ ಮೂಲದ ಇಬ್ಬರು ಹೀಗೆ ರಾಜ್ಯದ 15 ಜಿಲ್ಲೆಗಳಲ್ಲಿ ಜನ ಸಭೆಗೆ ಹೋಗಿದ್ದು ಅವರಿಗೆ ನಿಜಾಮುದ್ದೀನ ನಂಟಿದೆ. ಒಟ್ಟು ಕರ್ನಾಟಕದ 342 ಜನರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ವಿಪರಿಯಾಸ ಅಂದರೆ 2000 ವಿದೇಶದ ಧರ್ಮ ಗುರುಗಳು ದೇಶದ್ಯಾಂತ ಸಂಚಾರ ಮಾಡಿದ್ದಾರೆ. ಅವರಲ್ಲಿ ಕೆಲವರನ್ನು ಪತ್ತೆ ಮಾಡಲಾಗಿದೆ. ಬೆಂಗಳೂರಿನ 12 ಜನ ಇದ್ದಾರೆ. ಇನ್ನೂ 1000 ಜನ ಎಲ್ಲೆಲ್ಲಿ ಓಡಾಡಿದ್ದಾರೋ? ಅದ್ಯಾರಿ ಸೋಂಕು ಇದಿಯೋ? ಅನ್ನೋದೆ ದೊಡ್ಡ ಸವಾಲಾಗಿದೆ. ಸಭೆಗೆ ಹೋದವರನ್ನೆಲ್ಲಾ ಕ್ವಾರಟೈನ್ ನಲ್ಲಿ ಇರಿಸೋಕೆ ಎಲ್ಲಾ ರಾಜ್ಯಗಳು ಮುಂದಾಗಿದೆ. ಸರ್ಕಾರದ ಆದೇಶ ಉಲ್ಲಂಘಿಸಿದ ಧರ್ಮಗುರು ವಿರುದ್ಧ ಸದ್ಯ ಎಫ್ ಐ ಆರ್ ದಾಖಲಾಗಿದೆ.

