ದೇಶದಲ್ಲಿರುವ ಎರಡು ಬಗೆಯ ಬಾವಲಿಗಳಲ್ಲಿ ಕೊರೊನಾ ಪತ್ತೆ : ಹೊಸ ಸಂಶೋಧನೆ

ಚೀನಾದಲ್ಲಿ ಬಾವಲಿಗಳಿಂದ ಹರಡಿದೆ ಎನ್ನಲಾದ ಕೊರೋನಾ ವೈರಸ್ ಸದ್ಯ​ ನಮ್ಮ ದೇಶದಲ್ಲಿರುವ ಎರಡು ಬಗೆಯ ಬಾವಲಿಗಳಲ್ಲಿ ಕೂಡ ಪತ್ತೆಯಾಗಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಹೌದು… ಈ ಬಗ್ಗೆ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಅಘತಕಾರಿ ಮಾಹಿತಿಯನ್ನು ಹೊರಹಾಕಿದೆ. ಐಸಿಎಂಆರ್ ವರದಿ ಪ್ರಕಾರ ಭಾರತದ 2 ಬಗೆಯ ಬಾವಲಿಗಳಿಲ್ಲಿ ಕೊರೊನಾ ಸೋಂಕಿದೆ. ಇದು ಕೇವಲ ಬಾವಲಿಗಳಿಗೆ ಮಾತ್ರವಲ್ಲದೇ ಬಾವಲಿಗಳಿಂದ ಪ್ಯಾಂಗೊಲಿನ್ ಗಳಿಗೂ ಸೋಂಕು ಹರಡಲಿದೆ ಎನ್ನಲಾಗಿದೆ. ಪ್ಯಾಂಗೊಲಿನ್ ಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ. ಚೀನಾದಲ್ಲೂ ಇದೇ ರೀತಿ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

25 ಬಾವಲಿಗಳನ್ನು ತೆಗೆದುಕೊಂಡು ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ಪುದುಚೇರಿಯಲ್ಲಿ ಸಂಶೋಧನೆ ಮಾಡಲಾಗಿದೆ. ಅವುಗಳಲ್ಲಿ 2 ಪ್ರಭೇದಗಳ ಬಾವಲಿಗಳಲ್ಲಿ ಕೊರೋನಾ ಸೋಂಕು ಕಂಡುಬಂದಿದೆ. ಎನ್​ಐವಿ (ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ವೈರಾಲಜಿ) ಜೊತೆ ಸೇರಿ‌ ನಡೆಸಿದ ಅಧ್ಯಯನದಲ್ಲಿ ಇದು ದೃಢಪಟ್ಟಿದೆ. ಈ ಅಧ್ಯಯನದ ವರದಿ ತಯಾರಿಸಿರುವ ಐಸಿಎಂಆರ್ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್​ನಲ್ಲಿ ವರದಿ ಪ್ರಕಟಿಸಿದೆ.

ಈ ಮಾಹಿತಿ ಸದ್ಯ ದೇಶವನ್ನ ಬೆಚ್ಚಿ ಬೀಳಿಸಿದೆ. ಬಾವಲಿಗಳಿಂದಲೇ ಚೀನಾದಲ್ಲಿ ಸೋಂಕು ಹರಡಿರುವ ಸಾಧ್ಯತೆ ಇರುವುದರಿಂದ ಭಾರತದಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಭಾರತದಲ್ಲಿ 119 ಜಾತಿಯ ಬಾವಲಿಗಳಿದ್ದು ಇವುಗಳಲ್ಲಿ ಎರಡು ಜಾತಿಯ ಬಾವುಲಿಗಳಿಗೆ ಕೊರೊನಾ ಸೋಂಕು ಇರುವುದು ಕಂಡುಬಂದಿದೆ. ಮತ್ತೊಂದು ಆತಂಕಕಾರಿ ವಿಚಾರ ಎಂದರೆ ಈ ಬಾವಲಿಗಳಿಗೆ ಸೋಂಕು ಹರಡುವ ಸಾಮಾರ್ಥ್ಯವಿದೆ. ಅಲ್ಲದೇ ಸಾಕಷ್ಟು ಬಗೆಯ ಸಾಂಕ್ರಾಮಿಕ ರೋಗಗಳ ನೈಸರ್ಗಿಕ ಮೂಲ ಬಾವಲಿಗಳಾಗಿದ್ದು, ನಿಫಾ ಎನ್ನುವ ವೈರಸ್ ಹರಡಿದ್ದೂ ಬಾವಲಿಗಳಿಂದಲೇ. ಇದರಿಂದ ಮುಜಾಗೃತ ದೃಷ್ಟಿಯಿಮದ ಬಾವಲಿಗಳ ಮೇಲೆ ಎಚ್ಚರ ವಹಿಸುವುದು ಸೂಕ್ತ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights