ನನಗೆ ನಾನೇ ಹೈಕಮಾಂಡ್, ಪಕ್ಷೇತರಳಾಗಿಯೇ ಉಳಿಯುತ್ತೇನೆ : ಸುಮಲತಾ

ನಾಗಮಂಗಲದಲ್ಲಿ ಕಾಂಗ್ರಸ್ ಕಾರ್ಯಕರ್ತರ ಸಭೆಗೆ ಹಾಜರಾಗುವ ಮೂಲಕ ತಾವು ಬಿಜೆಪಿ ಕಡೆ ವಾಲುತ್ತಿರುವ ಗುಮಾನಿಗೆ ತೆರೆ ಎಳೆದಿರುವ ಮಂಡ್ಯ ಸಂಸದೆ ಸುಮಲತಾ ತಮ್ಮ ಪಕ್ಷೇತರ ಸ್ಥಾನಮಾನ ಉಳಿಸಿಕೊಳ್ಳುವ ಮಾತನ್ನಾಡಿದ್ದಾರೆ. ಇದರೊಂದಿಗೆ ಬಿಜೆಪಿ ಕಾರ್ಯಕರ್ತರ ಆಸೆಗೆ ತಣ್ಣಿರಾಕಿದ್ದಾರೆ..
ನನಗೆ ಯಾವು ಹೈಕಮಾಂಡಿಲ್ಲ, ಯಾವ ಹೈಕಮಾಂಡ್ ಆಣತಿಗೂ ನಾನು ಒಳಪಡಲು ಇಷ್ಟಪಡಲ್ಲ. ನನಗೆ ನಾನೇ ಹೈಕಮಾಂಡ್ ಎಂದು ಸುಮಲತಾ ಆಡಿರುವ ಮಾತು ಅವರು ಬಿಜೆಪಿ ಸೇರಬಹುದು ಎಂಬ ಊಹಾಪೋಹಕ್ಕೆ ತೆರೆ ಎಳೆದಿದೆ.

ನಾನು ಅವತ್ತೂ ಹೇಳಿದ್ದೇನೆ ಇಂದೂ ಹೇಳುತ್ತಿದ್ದೇನೆ ಯಾವುದೇ ಕಾರಣಕ್ಕೂ ಯಾವುದೇ ಪಕ್ಷವನ್ನೂ ಸೇರಲ್ಲ, ನನಗೆ ಯಾವ ಹೈಕಮಾಂಡ್ ಇಲ್ಲ ಎಂದು ಸುಮಲತಾ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ನಾನು ಮೊದನಿಂದದಲೂ ಸ್ಪಷ್ಟವಾಗಿದ್ದೇ‌ನೆ. ನನ್ನ ವಿಚಾರವಾಗಿ ಬೇರೆಯವರಿಂದ ಗೊಂದಲ ಮೂಡುತ್ತಿದೆ. ನನ್ನ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ ಎನ್ನುವುದು ಗೊತ್ತಿದೆ. ಬೇರೆಯವರ ನಿರ್ಧಾರಕ್ಕೆ ಉತ್ತರ ಕೊಡುವ ಅಗತ್ಯವೂ ಇಲ್ಲ. ಹೀಗಾದಾಗ ವದಂತಿಗಳು ಸಾಮಾನ್ಯ ಎಂದು ಸುಮಲತಾ ಹೇಳಿದ್ದಾರೆ.

ಬಿಜೆಪಿ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಟೀಕೆಗೆ ಒಳಗಾಗಿದ್ದ ಸುಮಲತಾ ಅವರು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಕೈಬಳಗದ ಸದಸ್ಯರ ಅನುಮಾನ ದೂರ ಮಾಡಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights