FACT CHECK | ಉತ್ತರಕಾಶಿಯಲ್ಲಿ ಮೇಘಸ್ಫೋಟದ ದೃಶ್ಯ ಎಂದು AI ವಿಡಿಯೋ ಹಂಚಿಕೆ
ಉತ್ತರಾಖಂಡದ ಉತ್ತರಕಾಶಿಯ ಧಾರಾಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ಮೇಘಸ್ಫೋಟ ದುರಂತದ ನಂತರ ಆ ಘಟನೆಗೆ ಸಂಬಂಧಿಸಿದ ಹಲವು ರೀತಿಯ ವಿಡಿಯೊ ತುಣುಕುಗಳು, ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಕವಿತಾ ಉಪಾಧ್ಯಾಯ ಎಂಬ ಎಕ್ಸ್ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು, ಉತ್ತರಾಖಂಡದ ಧರಾಲಿ ಗ್ರಾಮದಲ್ಲಿ ಪ್ರವಾಹದ ವಿನಾಶಕಾರಿ ಪರಿಣಾಮವನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
The tragic incident of cloudburst in Uttarkashi has caused huge loss of life and property,
#uttarkashi #uttarakhand #Uttrakhand #UttarakhandDisaster #UttarakhandFloods pic.twitter.com/Iwd6i5nHQk
— Ashu (Sushant Ka Parivar) (@Ashu31stDec) August 5, 2025
ಕಣಿವೆ ಪ್ರದೇಶದ ಮಧ್ಯದಲ್ಲಿ ನದಿ ಹರಿಯುತ್ತಿದ್ದು, ಅದರ ಎರಡೂ ಬದಿಗಳಲ್ಲಿ ಮಣ್ಣು, ಕಟ್ಟಡ ಕುಸಿದಿರುವುದು, ಮನೆಗಳು, ಕಟ್ಟಡಗಳ ಅವಶೇಷಗಳು ನೀರಿನಲ್ಲಿ ಸಿಲುಕಿರುವುನ್ನು ಚಿತ್ರದಲ್ಲಿ ಕಾಣಬಹುದು. ಇದೇ ರೀತಿಯ ಪ್ರತಿಪಾದನೆಯನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೆ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಹಲವರು ಇದೇ ಚಿತ್ರವನ್ನು ಹಂಚಿಕೊಂಡಿರುವುದು ಕಂಡುಬಂದಿದೆ.
ಚಿತ್ರವನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿದಾಗ, ಅದರಲ್ಲಿ ಎಐ ಎಂಬ ವಾಟರ್ ಮಾರ್ಕ್ ಇರುವುದು ಕಂಡಿತು. ಇದರ ಆಧಾರದಲ್ಲಿ ಎಐ ಚಿತ್ರ ಪತ್ತೆ ಟೂಲ್ ಹೈವ್ ಮಾಡರೇಷನ್‌ನಲ್ಲಿ ಚಿತ್ರವನ್ನು ಹಾಕಿದಾಗ, ಅದು ಎಐ ಚಿತ್ರ ಎಂಬುದು ದೃಢಪಟ್ಟಿತು.

ಮತ್ತೊಂದು ಎಐ ಪತ್ತೆ ಟೂಲ್ ‘ವಾಸ್‌ಇಟ್‌ಎಐ’ನಲ್ಲಿ ಚಿತ್ರವನ್ನು ಹಾಕಿದಾಗಲೂ ಅದು ಎಐ ಚಿತ್ರ ಎಂಬುದನ್ನು ಖಚಿತಪಡಿಸಿತು.

ಉತ್ತರಕಾಶಿಯಲ್ಲಿ ಮೇಘಸ್ಫೋಟಗೊಂಡ ನಂತರ ಧಾರಾಲಿ ಊರಿಗೆ ಹಾನಿಯಾದ ಚಿತ್ರಗಳನ್ನು ಉತ್ತರಾಖಂಡ ಪೊಲೀಸ್ ಇಲಾಖೆ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ಚಿತ್ರವನ್ನು ಹೋಲುವ ಯಾವ ಚಿತ್ರವೂ ಅದರಲ್ಲಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರಾಖಂಡದ ಧರಾಲಿ ಗ್ರಾಮದಲ್ಲಿ ತೀವ್ರ ಮಳೆಯಿಂದ ಉಂಟಾದ ಭೀಕರ ಪ್ರವಾಹದ ದೃಶ್ಯ ಎಂದು AI ನಿಂದ ರಚಿತವಾದ ಫೋಟೊವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮೃಗಾಲಯದ ಆವರಣಕ್ಕೆ ಬಿದ್ದ ಮಗುವನ್ನು ಜೋಪಾನವಾಗಿ ಪೋಷಕರಿಗೆ ಒಪ್ಪಿಸಿದ ಆನೆ..! ಅಸಲೀಯತ್ತೇನು?

