FACT CHECK | ತಮಿಳುನಾಡಿನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕ್ಯಾಬ್ ಚಾಲಕರು ಬಲವಂತವಾಗಿ ತಮ್ಮ ಟ್ಯಾಕ್ಸಿಗೆ ಹತ್ತಿಸಿಕೊಳ್ಳಲು ಯತ್ನಿಸಿದ್ದು ನಿಜವೇ?
ತಮಿಳುನಾಡು ಕ್ಯಾಬ್ ಚಾಲಕನೊಬ್ಬ ವಿಮಾನ ನಿಲ್ದಾಣದಲ್ಲಿ ಪೊಲೀಸರ ಸಮ್ಮುಖದಲ್ಲಿ ಪ್ರಯಾಣಿಕರನ್ನು ತನ್ನ ವಾಹನಕ್ಕೆ ಬಲವಂತವಾಗಿ ಹತ್ತಿಸಿಕೊಳ್ಳುತ್ತಿದ್ದಾನೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದು ತಮಿಳುನಾಡು ಸರ್ಕಾರವನ್ನು ಟೀಕಿಸುತ್ತ ವಿಡಿಯೋವನ್ನು ಪೋಸ್ಟ್ ಮಾಡಲಾಗುತ್ತಿದೆ.
ಫೇಸ್‌ಬುಕ್ ಬಳಕೆದಾರರು ಈ ಪೋಸ್ಟ್‌ಅನ್ನು ಹಂಚಿಕೊಂಡಿದ್ದು ವ್ಯಕ್ತಿಯೊಬ್ಬರು, “ತಮಿಳುನಾಡಿನಲ್ಲಿ . ಕ್ಯಾಬ್ ಮಾಫಿಯಾಗಳು ಪ್ರಯಾಣಿಕರನ್ನು ಕಾರುಗಳಿಗೆ ಹೇಗೆ ಬಲವಂತವಾಗಿ ಹತ್ತಿಸುತ್ತಿದ್ದಾರೆ ಮತ್ತು ಪೊಲೀಸರು ವಿಮಾನ ನಿಲ್ದಾಣಗಳಲ್ಲಿ ಏಜೆಂಟ್‌ಗಳಂತೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ನೋಡಿ. ವಿಮಾನ ನಿಲ್ದಾಣಗಳಲ್ಲಿ ಕ್ಯಾಬ್ ಚಾಲಕರು ಮಹಿಳೆಯರನ್ನು ಬಲವಂತವಾಗಿ ಹಿಡಿದು ಕ್ಯಾಬ್‌ಗಳಿಗೆ ಹೇಗೆ ಎಳೆಯುತ್ತಿದ್ದಾರೆ ಎಂಬುದನ್ನು ನೋಡಿ. ಸುರಕ್ಷತೆ ‘0’ ಮಹಿಳೆಯರಿಗೆ ಗೌರವ ‘0’. ಮಾಫಿಯಾ ನಿಯಮ 100% ಇದು ಪೆರಿಯಾರ್ ಮಾದರಿ?” ಇದು ಡಿಎಂಕೆ ಆಳ್ವಿಕೆಯ ತಮಿಳುನಾಡು ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇಂಡಿಯನ್ ಎಕ್ಸ್‌ಪ್ರೆಸ್ ತಮಿಳು (@IeTamil) ಮಾರ್ಚ್ 27, 2025 ರಂದು ನಡೆದ ಈ ಘಟನೆ ಬಗ್ಗೆ ವರದಿ ಮಾಡಿರುವುದು ಲಭ್ಯವಾಗಿದೆ.

“ನನ್ನನ್ನು ಮದುವೆಯಾಗಿ ಅವಳೊಂದಿಗೆ ಹನಿಮೂನ್ ಮಾಡಿ’… ನವವಿವಾಹಿತ ದಂಪತಿಗಳ ಮೇಲೆ ಮಹಿಳೆ ಆಕ್ರೋಶ: ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಗಲಾಟೆ” ಎಂಬ ಶೀರ್ಷಿಕೆಯ ಇಂಡಿಯಾ ಎಕ್ಸ್‌ಪ್ರೆಸ್ ತಮಿಳು ಲೇಖನದಲ್ಲಿ ಮಾರ್ಚ್ 27, 2025 ರಂದು ಪೋಸ್ಟ್ ಮಾಡಲಾದ ಅದೇ ವೀಡಿಯೊ ಕಂಡುಬಂದಿದೆ.
ವರದಿಯ ಪ್ರಕಾರ, ಈ ಘಟನೆ ಮಾರ್ಚ್ 26 ರ ಸಂಜೆ ಚೆನ್ನೈನಿಂದ ಕೊಯಮತ್ತೂರಿಗೆ ಬಂದ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. ವಿಮಾನದಿಂದ ಇಳಿದ ಇಬ್ಬರು ಪ್ರಯಾಣಿಕ ದಂಪತಿಗಳನ್ನು ಮಹಿಳೆಯೊಬ್ಬರು ನಿಂದಿಸುತ್ತಾ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ.

ತನಗೆ ಮೋಸ ಮಾಡಿದ್ದಕ್ಕಾಗಿ ಆ ವ್ಯಕ್ತಿಯ ಮೇಲೆ ಅವರು ನಿಂದನೆ ಮಾಡಿದ್ದಾರೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಆ ವ್ಯಕ್ತಿಯ ಸಂಬಂಧಿಯೊಬ್ಬರು ಮಹಿಳೆಯ ಕೈ ಹಿಡಿದು ತಡೆಯಲು ಪ್ರಯತ್ನಿಸಿದರು. ಆದರೆ, ಆ ಮಹಿಳೆ ಆ ಸಂಬಂಧಿಗೆ ಕಪಾಳಮೋಕ್ಷ ಮಾಡಿ, ಅವರ ಜೊತೆ ವಾಗ್ವಾದಕ್ಕಿಳಿದರು. ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯೂ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದರು.
ವರದಿಗಳ ಪ್ರಕಾರ, ಆ ಮಹಿಳೆ ಇನ್‌ಸ್ಟಾಗ್ರಾಮ್ ಮೂಲಕ ಆ ವ್ಯಕ್ತಿಯನ್ನು ಭೇಟಿಯಾಗಿದ್ದರು. ಅವರು ಮದುವೆ ಮಾಡಿಕೊಂಡಿದ್ದರು, ಆದರೆ ಅವರ ಮದುವೆಯನ್ನು ನೋಂದಾಯಿಸಲಿಲ್ಲ. ನಂತರ, ಆ ವ್ಯಕ್ತಿ ತನ್ನ ಮೊದಲ ಮದುವೆಯನ್ನು ಬಹಿರಂಗಪಡಿಸದೆ ಅಧಿಕೃತವಾಗಿ ಬೇರೊಬ್ಬರನ್ನು ವಿವಾಹವಾದರು.
ತಮಿಳುನಾಡು ಸರ್ಕಾರದ ಸತ್ಯ-ಪರಿಶೀಲನಾ ಘಟಕವು X ನಲ್ಲಿ ವೀಡಿಯೊವನ್ನು ತಳ್ಳಿಹಾಕಿತು, ವೈರಲ್ ಕ್ಲಿಪ್ ತಮಿಳುನಾಡಿನ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕ ಪ್ರಯಾಣಿಕರನ್ನು ಒತ್ತಾಯಿಸುವುದನ್ನು ತೋರಿಸಿಲ್ಲ ಮತ್ತು ಅದು ದಂಪತಿಗಳ ನಡುವಿನ ವೈಯಕ್ತಿಕ ವಿವಾದವನ್ನು ತೋರಿಸಿದೆ ಎಂದು ಹೇಳಿದೆ.
Rumor being spread that a taxi driver misbehaved with a woman at Tamil Nadu airports.
The video actually shows a personal dispute in which a woman confronted her unfaithful lover at Coimbatore airport in March. It is being misrepresented online with the false claim that taxi… https://t.co/q93M6pmTtD pic.twitter.com/aMjhmNlxmJ
— TN Fact Check (@tn_factcheck) August 16, 2025
ತಮಿಳುನಾಡು ವಿಮಾನ ನಿಲ್ದಾಣಗಳಲ್ಲಿ ಟ್ಯಾಕ್ಸಿ ಚಾಲಕ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಸುಳ್ಳು ಎಂದು TN ಫ್ಯಾಕ್ಟ್ ಚೆಕ್ (@tn_factcheck) ಆಗಸ್ಟ್ 16, 2025ರಂದು ಪೋಸ್ಟ್ ಮಾಡಿದೆ. ಮಾರ್ಚ್‌ನಲ್ಲಿ ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ತನ್ನ ವಿಶ್ವಾಸದ್ರೋಹಿ ಪ್ರೇಮಿಯನ್ನು ಎದುರಿಸಿದ ವೈಯಕ್ತಿಕ ವಿವಾದದ ಘಟನೆಯನ್ನು ವಿಡಿಯೋದಲ್ಲಿ ತಿಳಿಸಲಾಗಿದೆ.
ತಮಿಳುನಾಡಿನ ಕ್ಯಾಬ್ ಚಾಲಕನೊಬ್ಬ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಬಲಪಂಥೀಯ ಬೆಂಬಲಿಗರು ಈ ಕ್ಲಿಪ್ ಅನ್ನು ದಾರಿತಪ್ಪಿಸುವ ರೀತಿಯಲ್ಲಿ ಪ್ರಸಾರ ಮಾಡಿದ್ದಾರೆ. ವಾಸ್ತವವಾಗಿ, ಈ ವೀಡಿಯೊವು ಮಹಿಳೆ ಮತ್ತು ಆಕೆಯ ಪತಿಯ ನಡುವಿನ ವೈಯಕ್ತಿಕ ವಿವಾದವನ್ನು ಚಿತ್ರಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ತಮಿಳುನಾಡಿನ ಕ್ಯಾಬ್ ಚಾಲಕನೊಬ್ಬ ಮಹಿಳೆಯರನ್ನು ಕ್ಯಾಬ್‌ಗೆ ಬಲವಂತವಾಗಿ ಎಳೆದೊಯ್ದಿದ್ದಾನೆ ಎಂದು ಹೇಳುವ ವೈರಲ್ ವೀಡಿಯೊ ಸುಳ್ಳು. ಈ ವೈರಲ್ ಕ್ಲಿಪ್ ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ನಡೆದ ವೈಯಕ್ತಿಕ ವಿವಾದದಿಂದ ಬಂದಿದೆ, ಅಲ್ಲಿ ಒಬ್ಬ ಮಹಿಳೆ ತನ್ನ ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ನಡೆದ ಗಲಾಟೆ ದೃಶ್ಯಗಳನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಉತ್ತರಕಾಶಿಯಲ್ಲಿ ಮೇಘಸ್ಫೋಟದ ದೃಶ್ಯ ಎಂದು AI ವಿಡಿಯೋ ಹಂಚಿಕೆ

