ಪತ್ನಿಯ ಅಶ್ಲೀಲ ವಿಡಿಯೋ ಹರಿಬಿಟ್ಟಿದ್ದ ಪ್ರಿಯಕರ ಮತ್ತು ಆತನ ತಂದೆಯನ್ನ ಕೊಚ್ಚಿಕೊಂದ ಪತಿ…!

ಪತ್ನಿಯ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಪ್ರಿಯಕರ ಮತ್ತು ಆತನ ತಂದೆಯನ್ನ ಪತಿ ಕೊಚ್ಚಿಕೊಂದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗುಡ್ಡದ ಕೆಂಗನಹಳ್ಳಿಯಲ್ಲಿ ನಡೆದಿದೆ.

ಮಂಜುನಾಥ್ (28) ಮತ್ತು ಈತನ ತಂದೆ ಗಂಗಪ್ಪ(70) ಹತ್ಯೆಯಾದವರು. ಕೃಷ್ಣಪ್ಪ ಹಾಗೂ ಆತನ ಸಂಬಂಧಿಕರಿಂದ ಪ್ರಿಯಕರ ಹಾಗೂ ಆತನ ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿಲಾಗಿದೆ.

ಘಟನೆ ನಂತರ ಪರಾರಿಯಾಗಿರುವ ಆರೋಪಿಗಳು,

ಕೃಷ್ಣಪ್ಪನ ಪತ್ನಿ ಜತೆ ಮಂಜುನಾಥ್ ಅಕ್ರಮ ಸಂಬಂಧ ಆರೋಪ ಮಾಡಲಾಗಿತ್ತು. ಜೊತೆಗೆ ಆಕೆಯ ಅಶ್ಲೀಲ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಂಜುನಾಥ್ ಹರಿಬಿಟ್ಟಿದಕ್ಕೆ ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದನು.

ರೊಚ್ಚಿಗೆದ್ದ ಕೃಷ್ಣಪ್ಪ ಹಾಗೂ ಆತನ ಸಂಬಂಧಿಕರು ಮಂಜುನಾಥ್  ಹಾಗೂ ತಂದೆ ಗಂಗಪ್ಪನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights