ಪಾಕ್ ಗೆ ಬೆಲೆ ಏರಿಕೆ ಬಿಸಿ : 1 ಕೆ.ಜಿ ಟೊಮೇಟೋ ಬೆಲೆ ಕೇಳಿ ಪಾಕಿಸ್ತಾನಿಗಳು ಸುಸ್ತೋ ಸುಸ್ತು…

ಪಾಖಿಸ್ತಾನಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಒಂದು ಕೆ.ಜಿ ಟೊಮೇಟೋ ಬೆಲೆ ಕೇಳಿ ಪಾಕಿಸ್ತಾನಿಗಳು ಸುಸ್ತೋ ಸುಸ್ತಾಗಿದ್ದಾರೆ.

ಹೌದು… ಉಗ್ರರಿಗೆ ಹಣ ಸುರಿದು ಖಜಾನೆ ಖಾಲಿ ಮಾಡಿಕೊಂಡಿರೋ ಪಾಕಿಸ್ತಾನ, ಈಗ ಬೆಲೆ ಏರಿಕೆ ಬಿಸಿಯಿಂದ ಪರದಾಡ್ತಿದೆ. ಪಾಪಿಸ್ತಾನದಲ್ಲಿ ಪೆಟ್ರೋಲ್ ಗಿಂತಲೂ ಹಾಲಿನ ಬೆಲೆ ಜಾಸ್ತಿಯಾಗಿದ್ದು ಗೊತ್ತೇ ಇದೆ. ಇನ್ನು ಟೊಮೇಟೋ ದರದ ಸ್ಥಿತಿಯೂ ಭಿನ್ನವಾಗಿಲ್ಲ. ಸದ್ಯ ಲಾಹೋರ್, ಇಸ್ಲಾಮಾಬಾದ್ ಹಾಗೂ ಕರಾಚಿಯಲ್ಲಿ 1 ಕೆ.ಜಿ ಟೊಮೇಟೋ ಬರೋಬ್ಬರಿ 320 ರೂ.ಗೆ ಮಾರಾಟವಾಗ್ತಿದೆ.

ಹಿಂಗತ ನಾವು ಹೇಳ್ತಿಲ್ಲ. ಬದಲಿಗೆ ನೈಲಾ ಇನಾಯತ್ ಮುಂತಾದ ಪಾಕಿಸ್ತಾನದ ರಿಪೋರ್ಟರ್ಸ್ ಈ ಬಗ್ಗೆ ವಿಸ್ತೃತ ವರದಿ ಮಾಡಿದ್ದಾರೆ. ಆದರೆ, ಅಲ್ಲಿನ ಅಧಿಕಾರಿ ವರ್ಗ ಹಾಗೂ ಆಳುವ ರಾಜಕಾರಣಿಗಳಿಗೆ ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಹೀಗಾಗಿ, ಜನ ಸಾಮಾನ್ಯರು ಹಿಡಿ ಶಾಪ ಹಾಕುವಂತಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights