ಪ್ರಧಾನಿ ಮೋದಿಗೆ ಗಂಡಾಂತರ – ಗಾಣಗಾಪುರದಲ್ಲಿದೆ ಪರಿಹಾರ – ರಾಜಗುರು ದ್ವಾರಕಾನಾಥ

ಪ್ರಧಾನಿ ಮೋದಿ ಗಂಡಾಂತರದಲ್ಲಿದ್ದು, ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರೆ ಮಾತ್ರ ಸಂಕಷ್ಟದಿಂದ ಪಾರಾಗಲಿದ್ದಾರೆ ಎಂದು ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕಾನಾಥ ಭವಿಷ್ಯ ನುಡಿದಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮೋದಿಗೆ ಸದ್ಯ ಕೆಲವು ಸಂಕಟಗಳಿವೆ. ಪೌರತ್ವ ಕಾಯ್ದೆ, ಎನ್.ಆರ್.ಸಿ. ಇತ್ಯಾದಿಗಳನ್ನು ಮೋದಿಗೆ ತೊಂದರೆಗಳಾಗಿ ಕಾಡುತ್ತಿವೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಪ್ರಧಾನಿಗೆ ಇನ್ನಷ್ಟು ಗಂಡಾಂತರಗಳು ಎದುರಾಗೋ ಸಾಧ್ಯತೆಗಳಿವೆ. ಇವೆಲ್ಲ ಸಂಕಷ್ಟಗಳಿಂದ ಮುಕ್ತರಾಗಲು ಮೋದಿ ಪೂಜೆ ಮಾಡಿಸಬೇಕು. ಕಾಂಗ್ರೆಸ್ ಬಿಟ್ಟು ದೂರಮಾಡಿಕೊಂಡಿರೋ ಶಕ್ತಿಕೇಂದ್ರಕ್ಕೆ ಮೋದಿ ಹತ್ತಿರವಾಗಬೇಕು.ಮೋದಿಯನ್ನು ಕಾಪಾಡುವವರು ಗಾಣಗಾಪುರದ ದತ್ತಾತ್ರೇಯ ಮಾತ್ರ. ಗಾಣಗಾಪುರ ಬಿಟ್ಟರೆ ಗುಜರಾತ್ ನ ರಾಜಕೋಟ್ ದಲ್ಲಿ ದತ್ತಾತ್ರೇಯ ಇದ್ದಾರೆ. ಆದರೆ ರಾಜಕೋಟ್ ಗಿಂತ ಗಾಣಗಾಪುರ ಶಕ್ತಿಯುತ ಕ್ಷೇತ್ರ. ಗಾಣಗಾಪುರ ದತ್ತತ್ರೇಯರು ತಪಸ್ಸು ಮಾಡಿದ ಕ್ಷೇತ್ರವಾಗಿದ್ದು, ಫುಲ್ ಆಗಿದೆ. ಮೋದಿ ಕಾಶಿಗೆ ಹೋದ್ರೂ ಸಂಸದರಾಗಿ ಜಯಿಸಿ, ಪ್ರಧಾನಿಯಾದ್ರು. ಈಗ ಎದುರಾಗಿರೋ ಸಂಕಷ್ಟಗಳಿಗೆ ದತ್ತಾತ್ರೇಯನ ಸನ್ನಿಧಿಯಲ್ಲಿ ಪೂಜೆ ಸಲ್ಲಿಕೆಯೊಂದೇ ಪರಿಹಾರ. ಗಾಣಗಾಪುರಕ್ಕೆ ಬಂದು ಪೂಜೆ ಮಾಡಿಸಿದಲ್ಲಿ ಎಲ್ಲ ಸಂಕಷ್ಟಗಳೂ ನಿವಾರಣೆಯಾಗಲಿವೆ. ಮೋದಿ ಬಂದು ಪೂಜೆ ಸಲ್ಲಿಸಿದರೆ, ಬೇರೆ ರೀತಿಯ ಚಲನವಲಯ ಸ್ಟಾರ್ಟ್ ಆಗಿ, ದೇಶದ ಪ್ರಗತಿಯ ಪಥಕ್ಕೆ ಶರವೇಗ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ದತ್ತನ ಪೂಜೆ ಮಾಡಿಸದಿದ್ದಕ್ಕೆ ಖರ್ಗೆಗೆ ಸಿಎಂ ಸ್ಥಾನ ಮಿಸ್….
ನಾನು ಹೇಳಿದಂತೆ ನಡೆದುಕೊಂಡವರು ಗುರು ಮುಟ್ಟುವಲ್ಲಿ ಸಫಲರಾಗಿದ್ದಾರೆ. ನನ್ನ ಮಾತು ಕೇಳಿ ಪೂಜೆ ಸಲ್ಲಿಸಿದ ಧರ್ಮಸಿಂಗ್ ಮುಖ್ಯಮಂತ್ರಿಯಾದರು. ಮಹಾರಾಷ್ಟ್ರದ ವಿಲಾಸರಾವ್ ದೇಶಮುಖ್ ರೂ ಮುಖ್ಯಮಂತ್ರಿಯಾದ್ರು. ಕಳೆದ ವಿಧಾನಸಭೆ ಚುನಾವಣೆ ವೇಳೆ ನಾನು ಸಲಹೆ ನೀಡಿದಂತೆ ನನ್ನ ಬಳಿ ಮಲ್ಲಿಕಾರ್ಜುನ ಖರ್ಗೆ ಬಂದಿದ್ದರೆ ಇಷ್ಟೊತ್ತಿಗೆ ಸಿಎಂ ಆಗ್ತಿದ್ದರು. ಬಂದು ಪೂಜೆ ಮಾಡಿಸಿ ಅಂತ ಹೇಳಿದ್ದೆ. ಮನೆಗೇ ಹೋಗಿ ಕರೆದು ಬಂದಿದ್ದೆ, ನೀವು ಪೂಜಿಸೋ ಬುದ್ಧನೂ ವಿಷ್ಣುವಿನ ಅವತಾರ ಅಂತ ಹೇಳಿದ್ದೆ. ಗಾಣಗಾಪುರ ದತ್ತ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲು ಅವರ ಪತ್ನಿ ರಾಧಾಬಾಯಿ ಒಪ್ಪಿಕೊಂಡಿದ್ದರು. ಆದ್ರೆ ಖರ್ಗೆಯವರು ಬರಲಿಲ್ಲ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವ್ರು ಸಿಎಂ ಆಗಲಿಲ್ಲ ಎಂದರು.

ಗುರುವಿನಿಂದ ದೂರವಾದವರು ಯಾರೂ ಉದ್ಧಾರವಾಗಿಲ್ಲ….
ಗುರುಗಳಿಂದ ದೂರವಾದವರಿಗೆ ಯಾರಿಗೂ ಒಳ್ಳೆಯದಾಗಿಲ್ಲ ಎಂದು ರಾಜಗುರು ದ್ವಾರಕಾನಾಥ ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರದ ವಿಲಾಸರಾವ್ ದೇಶಮುಖ್ ಮೊದಲು ನನ್ನ ಬಳಿ ಬಂದಿದ್ದರು. ಸಿಎಂ ಆಗ್ತೀಯಾ ಹೋಗು ಅಂದಿದ್ದೆ. ಅದರಂತೆ ಸಿಎಂ ಸಹ ಆದ್ರು. ಆದರೆ ನಂತರದಲ್ಲಿ ನಾನು ನೀಡಿದ ಸಲಹೆಗಳನ್ನು ಪಾಲಿಸಲಿಲ್ಲ, ಅಕಾಲಿಕವಾಗಿ ನಿಧನ ಹೊಂದಿದರು. ಡಿ.ಕೆ.ಶಿವಕುಮಾರ್ ಅವರೂ ಮಧ್ಯದಲ್ಲಿ ನನ್ನಿಂದ ದೂರವಾಗಿದ್ದರು. ಈಗ ಮತ್ತೆ ತಮ್ಮ ಬಳಿ ಬಂದು ಮಾರ್ಗದರ್ಶನ ಪಡೆಯುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಕುಮಾರಸ್ವಾಮಿ ಸಿಎಂ ಆಗ್ತಾರೆ, ಬಿಜೆಪಿ ತಡವಾಗಿ ಅಧಿಕಾರಕ್ಕೆ ಬರುತ್ತೆ ಅಂದಿದ್ದೆ. ಅದರಂತೆಯೇ ಎಲ್ಲವೂ ನಡೆದಿವೆ. ಆದರೆ ಬಿಜೆಪಿಯವರು ನನ್ನನ್ನು ಜೆಡಿಎಸ್ ಗೆ ಬ್ರ್ಯಾಂಡ್ ಮಾಡಲು ನೋಡಿದರು. ನಾನೊಬ್ಬ ಸಂತನಾಗಿದ್ದು, ಯಾರ ವರ್ತನೆಗಳ ಬಗ್ಗೆಯೂ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights