ಭಾರತದ ನಂಟು ಸ್ಮರಿಸಿದ ಹ್ಯಾರಿಸ್: ಅವರಿಗಿಂತ ಹೆಚ್ಚು ಭಾರತೀಯರ ಬೆಂಬಲ ನನಗಿದೆ: ಟ್ರಂಪ್‌

ಅಮೆರಿಕಾದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಕ್ರಾಟಿಕ್‌ ಪಕ್ಷದಿಂದ ಅಭ್ಯರ್ಥಿಯಾಗಿರುವ ಮಹಿಳಾ ಅಭ್ಯಾರ್ಥಿ ಕಮಲಾ ಹ್ಯಾರಿಸ್, ಚುನಾವಣೆಯ ತಮ್ಮ ಮೊದಲ ಭಾಷಣೆದಲ್ಲಿ  ಭಾರತದ ನಂಟನ್ನು ಸ್ಮರಿಸಿದ್ದಾರೆ. ಈ ಬೆನ್ನಲ್ಲೇ, ಭಾರತ ನಂಟು ಹೊಂದಿರುವ ಕಮಲಾ ಹ್ಯಾರಿಸ್‌ಗಿಂತಲೂ ಹಚ್ಚೆ ಭಾರತೀಯರು ನನ್ನ ಬೆಂಬಲಕ್ಕಿದ್ಧಾರೆ ಎಂದು ಟ್ರಂಪ್‌ ಹೇಳಿಕೊಂಡಿದ್ದಾರೆ.

”ನನ್ನ ಅಮ್ಮ ಶ್ಯಾಮಲಾ ಮೂಲತಃ ಭಾರತೀಯಳಾಗಿದ್ದು, ಆಕೆ ಎಂದೂ ಒಣ ಆದರ್ಶ ಬೋಧಿಸಲಿಲ್ಲ. ಸಂಕಷ್ಟಗಳಿದ್ದಾಗ ಎದ್ದು ನಿಂತು ಹೋರಾಡು ಎಂದು ಹುರಿದುಂಬಿಸುತ್ತಿದ್ದರು. ಚೆನ್ನೈ ಮೂಲದ ಆಕೆ‌ ಅಮೆರಿಕಕ್ಕೆ ಬಂದು ಈ ನಾಡಿನ ಒಳಿತಿಗಾಗಿ ತ್ಯಾಗಮಯಿ ಬದುಕು ನಡೆಸಿದರು,” ಎಂದು ಹ್ಯಾರಿಸ್ ಹೇಳಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಮಾತನಾಡಿರುವ ಟ್ರಂಪ್‌, ಅಧ್ಯಕ್ಷ ಸ್ಥಾನದ ಸ್ಪರ್ಧಿ ಜೋ ಬಿಡೆನ್ ಅವರಿಗಿಂತಲೂ ಕಮಲಾ ಹ್ಯಾರಿಸ್ ಕೆಟ್ಟವರು ಎಂದು ಆರೋಪಿಸಿದ್ದಾರೆ. ಅಲ್ಲದೇ, ಆಕೆ ಭಾರತ ಮೂಲದ ಸದಸ್ಯೆಯಾದರೂ ಆಕೆಗಿಂತ ಹೆಚ್ಚಿನ ಸಂಖ್ಯೆಯ ಭಾರತೀಯರು ನನ್ನ ಜೊತೆಗಿದ್ದಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಜೋ ಬಿಡೆನ್ ಅಧ್ಯಕ್ಷರಾದರೆ ಅಮೆರಿಕದಾದ್ಯಂತ ಇರುವ ಪ್ರತಿಯೊಂದು ಪೊಲೀಸ್ ಠಾಣೆಯನ್ನೂ ಮುಚ್ಚುವುದಕ್ಕೆ ಅನುಮತಿ ನೀಡುವ ಶಾಸನವನ್ನು ಅವರು ಜಾರಿಗೊಳಿಸುವ ಸಾಧ್ಯತೆ ಇದೆ. ಹಾಗಾಗಿ ಜನರು ಜಾಗರೂಕತೆಯಿಂದ ಇರಬೇಕು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.


ಇದನ್ನೂ ಓದಿಶ್ವೇತಭವನದ ಹೊರಗೆ ಗುಂಡಿನ ದಾಳಿ; ನನ್ನನ್ನು ಗುರಿಯಾಗಿಸಿದ್ದಲ್ಲ: ಟ್ರಂಪ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights