ಭಾರತದ ಮೇಲೆ ಚೀನಾ ಆಕ್ರಮಣ: ಅಮೇರಿಕಾ ವಿದೇಶಾಂಗ ಸಮಿತಿ ವಿರೋಧ

ಲಡಾಕ್‌ನಲ್ಲಿನ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತದ ವಿರುದ್ಧದ ಚೀನಾದ ಆಕ್ರಮಣದಿಂದ “ಅತ್ಯಂತ ಕಳವಳಗೊಂಡಿದ್ದೇನೆ” ಎಂದು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಫಾರಿನ್ ಅಫೇರ್ಸ್ ಕಮಿಟಿಯ ಮುಖ್ಯಸ್ಥ ಎಲಿಯಟ್ ಎಂಗಲ್ ಹೇಳಿದ್ದಾರೆ. ರಾಜತಾಂತ್ರಿಕತೆ ಮತ್ತು ಅಸ್ತಿತ್ವದಲ್ಲಿರುವ ಗಡಿ ಪ್ರಶ್ನೆಗಳನ್ನು ಪರಿಹರಿಸುವ ಕಾರ್ಯವಿಧಾನಗಳು ಮತ್ತು ಮಾನದಂಡಗಳನ್ನು ಗೌರವಿಸಿ ಎಂದು ಚೀನಾಕ್ಕೆ ಒತ್ತಾಯಿಸಿದ್ದಾರೆ.

“ಭಾರತ-ಚೀನಾ ಗಡಿಯಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ನಡೆಯುತ್ತಿರುವ ಚೀನಾದ ಆಕ್ರಮಣದಿಂದ ನಾನು ತುಂಬಾ ಕಳವಳಗೊಂಡಿದ್ದೇನೆ. ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಸಂಘರ್ಷಗಳನ್ನು ಪರಿಹರಿಸುವ ಬದಲು ತನ್ನ ನೆರೆಹೊರೆಯವರನ್ನು ಪೀಡಿಸಲು ಚೀನಾ ಸಿದ್ಧವಾಗಿದೆ ಎಂದು ಮತ್ತೊಮ್ಮೆ ತೋರಿಸುತ್ತಿದೆ” ಎಂದು ಡೆಮಾಕ್ರಟಿಕ್‌ ಪಕ್ಷದ ಎಂಗಲ್ ಹೇಳಿದ್ದಾರೆ.

“ಎಲ್ಲಾ ದೇಶಗಳು ಒಂದೇ ರೀತಿಯ ನಿಯಮಗಳಿಗೆ ಬದ್ಧರಾಗಿರಬೇಕು. ಇಲ್ಲಿದಿದ್ದಲ್ಲಿ ನಾವು ‘ಸರಿಹೊಂದುವಂತಹ’ ಜಗತ್ತಿನಲ್ಲಿ ವಾಸಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಚೀನಾದ ಸೈನ್ಯವು ಭಾರತೀಯ ಭೂಪ್ರದೇಶಕ್ಕೆ ನುಸುಳಿದ ನಂತರ ಮೇ ಆರಂಭದಿಂದಲೂ ಭಾರತೀಯ ಮತ್ತು ಚೀನಾದ ಸೈನಿಕರು ಲಡಾಖ್‌ನ ವಾಸ್ತವಿಕ ಗಡಿಯಲ್ಲಿ ಮುಖಾಮುಖಿಯಾಗಿದ್ದಾರೆ ಎಂದು ಭಾರತೀಯ ಮಿಲಿಟರಿ ಅಧಿಕಾರಿಗಳು ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಎರಡೂ ಕಡೆಯವರು ರಕ್ಷಣಾ ಕಾರ್ಯಗಳನ್ನು ಸಜ್ಜುಗೊಳಿಸಿದ್ದಾರೆ.

ಲಡಾಖ್ ಮತ್ತು ಸಿಕ್ಕಿಂನ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಚೀನಾದ ಮಿಲಿಟರಿ ತನ್ನ ಸೈನಿಕರನ್ನು ಜಮಾಯಿಸಿದ್ದು, ಗಸ್ತು ತಿರುಗುತ್ತಿದ್ದಾರೆ ಎಂದು ಭಾರತ ಹೇಳಿದೆ. ಈ ವಾದವನ್ನು ನಿರಾಕರಿಸಿರುವ ಚೀನಾ, ನಮ್ಮ ಭೂಪ್ರದೇಶವನ್ನು ಭಾರತೀಯ ಪಡೆಗಳನ್ನು ಅತಿಕ್ರಮಣ ಮಾಡುವುದರಿಂದ ಎರಡು ಸೈನ್ಯಗಳ ನಡುವೆ ಉದ್ವಿಗ್ನತೆ ಉಂಟಾಗುತ್ತಿದೆ ಎಂದು ಹೇಳಿದೆ.

ಕಳೆದ ವಾರ ಈ ಕುರಿತು ತಾನು ಮಧ್ಯಸ್ಥಿಕೆ ವಹಿಸಲು ಸಮರ್ಥ ಮತ್ತು ಸಿದ್ದನಿರುವುದಾಗಿ ಅಮೆರಿಕಾ ಅಧ್ಯಕ್ಷ ಟ್ರಂಪ್‌ ಘೋಷಿಸಿದ್ದರು. ಈ ಕುರಿತು ಭಾರತದ ಪ್ರಧಾನಿ ಮೋದಿಯೊಡನೆ ಮಾತನಾಡಿದ್ದೇನೆ ಎಂದು ಸಹ ಹೇಳಿದ್ದರು. ಆದರೆ ಭಾರತವು ಟ್ರಂಪ್‌ ಪ್ರಸ್ತಾಪವನ್ನು ತಿರಸ್ಕರಿಸಿತ್ತು ಮತ್ತು ಮೋದಿಯೊಡನೆ ಈ ವಿಚಾರ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಸದ್ಯಕ್ಕೆ ಟ್ರಂಪ್ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವನ್ನು ಬದಿಗೊತ್ತಿ ಭಾರತವು ಮಿಲಿಟರಿ ನಿಲುವನ್ನು ಎದುರಿಸಲು ಚೀನಾದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights