ಮಂಡ್ಯದ ಗಂಡು ನಿಮ್ನ ಮರಿಯೋಲ್ಲಾ ಎಂದು.. : ಅಂಬಿ ಹುಟ್ಟುಹಬ್ಬಕ್ಕೆ ಮಗನ ಹೊಸ ಸಿನಿಮಾ
ಮಂಡ್ಯದ ಗಂಡು ಮುತ್ತಿನ ಚಂಡು ನಿಮ್ನಾ ಮರಿಯೋಲ್ಲಾ ಎಂದು… ಇಂದು ರೆಬೆಲ್ ಸ್ಟಾರ್ ಅಂಬರೀಷ್ ಅವರ 68ನೇ ಹುಟ್ಟುಹಬ್ಬವನ್ನು ಕುಟುಂಬಸ್ಥರು ಹಾಗೂ ಅಭಿಮಾನಿಗಳು ಆಚರಿಸಲಾಯಿತು. ಈ ವೇಳೆ ಮಗ ಅಭಿಷೇಕ್ ಅಭಿನಯದ 2ನೇ ಸಿನಿಮಾ ‘ಬ್ಯಾಡ್‍ಮ್ಯಾನರ್ಸ್’ ಫಸ್ಟ್ ಲುಕ್ ಪೋಸ್ಟರ್ ನ್ನು ಬಿಡುಗಡೆ ಮಾಡಲಾಯಿತು.
ಹೌದು…. ಹಿರಿಯ ನಟ ಹಾಗೂ ರಾಜಕಾರಣಿಯೂ ಆಗಿದ್ದ ಅಂಬರೀಷ್ ಅವರು ಹುಟ್ಟುಹಬ್ಬ ಅಂಗವಾಗಿ ನಗರದ ಕಂಠೀರವಾ ಸ್ಟುಡಿಯೋದಲ್ಲಿರುವ ಅಂಬಿಯ ಸಮಾಧಿಗೆ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಸುಮಲತಾ ಅಂಬರೀಷ್ ಅವರು ಸುದ್ದಿಗಾರರಿಗೆ ಮಾತನಾಡಿದರು.
“ಪ್ರತೀ ವರ್ಷ ಅವರ ಹುಟ್ಟುಹಬ್ಬಕ್ಕೆ ನೂರಾರು ಅಭಿಮಾನಿಗಳು ಮನೆಗೆ ಬಂದು ಹುಟ್ಟುಹಬ್ಬವನ್ನು ಆಚರಿ ಶುಭ ಕೋರುತ್ತಿದ್ದರು. ಆದರೆ ಈ ಬಾರಿ ಅದು ಸಾಧ್ಯವಾಗಿಲ್ಲ. ಇಂದು ಅವರು ನಮ್ಮೊಂದಿಗಿದ್ದರೆ ಈ ಹುಟ್ಟುಹಬ್ಬ ಇನ್ನೂ ಚೆನ್ನಾಗಿರ್ತಾಯಿತ್ತು. ಜನರ ಕಷ್ಟಗಳಿಗೆ ಸದಾ ತುಡಿಯುತ್ತಿದ್ದ ಅಂಬರೀಷ್ ಅವರು ಉತ್ತಮ ಸ್ನೇಹಜೀವಿಯೂ ಆಗಿದ್ದರು ಅವರಿಗೆ ಸಿನಿಮಾ ರಂಗದಲ್ಲದೆ ರಾಜಕೀಯ ಕ್ಷೇತ್ರದಲ್ಲೂ ಬಹಳಷ್ಟು ಸ್ನೇಹಿತರಿದ್ದಾರೆ. ಅವರವರ ಜಿಲ್ಲೆಯಲ್ಲೇ ಅವರ ಹುಟ್ಟುಹಬ್ಬವನ್ನು ಜನ ಆಚರಿಸಿದ್ದಾರೆ. ಅವರೆಲ್ಲಿರೂ ಕೃತಜ್ಞತೆಗಳು. ಅಭಿಮಾನಿಗಳೂ ನಮ್ಮ ಮನದಲ್ಲಿದ್ದಾರೆ” ಎಂದು ಸಂಸದೆ ಹಾಗೂ ಅಂಬಿ ಪತ್ನಿ ಸುಮಲತಾ ಅಂಬರೀಷ್ ಅವರು ಹೇಳಿದರು.


