ಮನೆಯಲ್ಲೇ ಮುಖ ಕವಚಗಳನ್ನು ಮಾಡಿ ಉಪಯೋಗಿಸಿ: ಆರೋಗ್ಯ ಇಲಾಖೆ

ಭಾರತದಲ್ಲಿ ಶನಿವಾರಕ್ಕೆ ಕೊರೊನ ಸೋಂಕಿತ ಪ್ರಕರಣಗಳು 3000 ಮುಟ್ಟಿರುವ ಸಮಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಸೋಂಕಿನ ಯಾವುದೇ ಲಕ್ಷಣ ಇಲ್ಲದೆ ಇದ್ದರೂ, ಮನೆಯಲ್ಲೇ ಮಾಡಿಕೊಂಡ ಮುಖ ಕವಚಗಳನ್ನು ಧರಿಸಲು ಜನರಿಗೆ ಸಲಹೆ ನೀಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಮುಖ ಕವಚಗಳನ್ನು ಧರಿಸುವುದು ಸ್ವಚ್ಚತೆಗೆ ಹೆಚ್ಚು ಅವಕಾಶ ನೀಡಿ ಆರೋಗ್ಯ ಪರಿಸ್ಥಿತಿಯಲ್ಲಿ ಒಟ್ಟಾರೆ ಸ್ವಚ್ಚತೆಯಯನ್ನು ಸೃಷ್ಟಿ ಮಾಡುತ್ತದೆ ಎಂದಿದೆ.

“ಆರೋಗ್ಯದ ತೊಂದರೆ ಇಲ್ಲದವರು ಅಥವಾ ಉಸಿರಾಟದ ತೊಂದರೆ ಇಲ್ಲದವರು ಮನೆಯಲ್ಲೇ ಮಾಡಿದ ಮರುಬಳಕೆಯ ಮುಖ ಕವಚಗಳನ್ನು ಬಳಸಬಹುದು. ಅದರಲ್ಲೂ ಮನೆಯಿಂದ ಹೊರಗೆ ಹೋದಾಗ ಬಳಸಬಹುದು. ಸಮುದಾಯವನ್ನು ಒಟ್ಟಾರೆಯಾಗಿ ರಕ್ಷಿಸಲು ಇದು ಸಹಾಯ ಮಾಡುತ್ತದೆ” ಎಂದು ಪತ್ರಿಕಾ ಹೇಳಿಕೆಯಲ್ಲಿ ಇಲಾಖೆ ತಿಳಿಸಿದೆ.

ಎರಡು ಮುಖ ಕವಚಗಳನ್ನು ಸಿದ್ದತೆ ಮಾಡಿಕೊಂಡು ಒಂದು ಬಳಸಿದ ಮೇಲೆ ಅದನ್ನು ಹೊಗೆಯುವುದಕ್ಕೆ ಹಾಕಿ ಮತ್ತೊಂದನ್ನು ಬಳಸಲು ಅನುವಾಗುವಂತೆ ನೋಡಿಕೊಳ್ಳಬೇಕು ಎನ್ನದು ಸಚಿವಾಲಯ ತಿಳಿಸಿದೆ.

ಅಮೆರಿಕಾದಲ್ಲಿಯೂ ಅಲ್ಲಿನ ಆಡಳಿತಗಳು ನಾಗರಿಕರು ಸ್ವಯಂಪ್ರೇರಿತವಾಗಿ ಮುಖ ಕವಚಗಗಳನ್ನು ಧರಿಸಬೇಕು ಎಂದು ತಿಳಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹದು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights