ಮೃತ ತಾಯಿಯ ಶವದೊಂದಿಗೆ ಐದು ದಿನ ಕಳೆದ ಮಗಳು…!

ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವವೇ ತಬ್ಬಿಬ್ಬಾಗಿ ಹೋಗಿದೆ. ಕಣ್ಣಿಗೆ ಕಾಣದ ಜೀವಿಯೊಂದು ಮನುಕುಲವನ್ನೇ ಮನೆಯಲ್ಲಿರುವಂತೆ ಮಾಡಿದೆ. ಲಾಕ್ ಡೌನ್ ನಿಂದಾಗಿ ಅದೆಷ್ಟೋ ಪ್ರಾಣಿ -ಪಕ್ಷಿಗಳು ಆಹಾರವಿಲ್ಲದೇ ಪ್ರಾಣ ಬಿಡುತ್ತಿವೆ. ಇದರ ನಡುವೆ ತಾಯಿ ಸಾವನ್ನಪ್ಪಿ ಐದು ದಿನವಾದರೂ ಯಾರಿಗೂ ತಿಳಿಸಿದ ಮಗಳು ತಾಯಿ ಶವದೊಂದಿಗೆ ಕಾಲ ಕಳೆದ  ಮನಕಲುಕುವ ಘಟನೆಯೊಂದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಹೌದು…. ಸ್ತನ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎನ್ನಲಾದ 64 ವರ್ಷದ ನಿವೃತ್ತ ಶಿಕ್ಷಕಿ ರಾಜೇಶ್ವರಿ ಮೇ 13 ರಂದು ಮೃತಪಟ್ಟಿದ್ದಾರೆ. ತಾಯಿ ತೀರಿಕೊಂಡು ಐದು ದಿನ ಕಳೆದರೂ ಭಯದಿಂದ ಮಗಳು ಐದು ದಿನ ಹಗಲು ರಾತ್ರಿ ಶವದೊಂದಿಗೆ ಕಾಲ ಕಳೆದಿದ್ದಾಳೆ. ಶಿವಮೊಗ್ಗದ ಬಸವನಗುಡಿ ಬಡಾವಣೆಯಲ್ಲಿ 5 ನೇ ತಿರುವಿನಲ್ಲಿ ಇಂತಹ ಘಟನೆ ನಡೆದಿದೆ.

ಮಾನಸಿಕ ಅಸ್ವಸ್ಥೆಯಾಗಿದ್ದ ಮಗಳು ಶಾಂಭವಿಗೆ ಮುಂದೆ ಏನು ಮಾಡಬೇಕು ಎಂದು ತೋಚದೆ ತಾಯಿಯ ಶವದೊಂದಿಗೆ ಕಾಲ ಕಳೆದಿದ್ದಾಳೆ.  ಮೃತ ರಾಜೇಶ್ವರಿ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಅತಿಯಾಗಿ ಔಷದಿ ಸೇವಿಸಿದ್ದರಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಿದ್ದಾರೆ.

ಶವ ಕೊಳೆತ ವಾಸನೆ ಬಂದಿದ್ದರಿಂದ ಅಕ್ಕಪಕ್ಕದ ಮನೆಯವರು ಬಂದು ನೋಡಿದ್ದಾರೆ. ಬಳಿಕ ಜಯನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.

 

 

 

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights