ಮೋದಿಯನ್ನು ತಿರಸ್ಕರಿಸುತ್ತಿದ್ದಾರೆ ಭಾರತೀಯ ಯುವಜನರು: ಕಾರಣ – ಆರ್ಥಿಕತೆ ಮತ್ತು ಸಿದ್ದಾಂತ

ಮೋದಿ ಸರ್ಕಾರಕ್ಕೆ ಆರು ವರ್ಷಗಳು ಕಳೆದಿವೆ. 2014ರಲ್ಲಿ ಯುವಕರ ಉತ್ಸಾಹದ ಅಲೆಯ ಮೇಲೆ ಸವಾರಿ ಮಾಡಿದ ನರೇಂದ್ರ ಮೋದಿಯವರ ಮೇಲೆ ಭಾರತೀಯ ಯುವಕರು ಇಂದು ನಿರಾಶೆ ಮತ್ತು ಭ್ರಮನಿರಸನಗೊಂಡಿದ್ದಾರೆ. ಹಾಗಾಗಿ ಪ್ರಧಾನಿ ಮೋದಿಯನ್ನು ಯುವಜನರು ತಿರಸ್ಕರಿಸುತ್ತಿದ್ದಾರೆ ಎಂದು ದಿ ಪ್ರಿಂಟ್ ಸಮೀಕ್ಷೆ ಹೇಳಿದೆ.

ಆರ್ಥಿಕ ಕುಸಿತ ಮತ್ತು ಹೆಚ್ಚುತ್ತಿರುವ ನಿರುದ್ಯೋಗದ ಸಂದರ್ಭದಲ್ಲಿ ಮೋದಿಯವರ ಹಿಂದೂತ್ವ ಮತ್ತು ಅಂತ್ಯವಿಲ್ಲದ ಸಾಂಸ್ಕೃತಿಕ ಯುದ್ದಗಳ ಹೆಸರಿನ ರಾಜಕೀಯ ಯುವಜನರನ್ನು ತೃಪ್ತರನ್ನಾಗಿಸಲು ಸಾಧ್ಯವಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ.

ಯುವಜನರು ಏಕೆ ಭ್ರಮನಿರಸನಗೊಂಡಿದ್ದಾರೆ? ಮಿಂಟ್ ಯೂಗೊವ್ ಸಿಪಿಆರ್ ಸಮೀಕ್ಷೆಯ ಪ್ರಕಾರ, ಹೆಚ್ಚಿನ ಯುವಜನರು ಆರ್ಥಿಕತೆಯು ಅಧೋಗತಿಯ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಮಿಲೇನಿಯಲ್‌ಗಳು ಎಂದು ಕರೆಯಲಾಗುವ ಇಂದಿನ ತಲೆಮಾರಿನ ಯುವಜನರಲ್ಲಿ ಶೇಕಡಾ 44 ರಷ್ಟು ಆರ್ಥಿಕ ಕುಸಿತದ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ, ಕೇವಲ 36 ಶೇಕಡಾ ಮಿಲೇನಿಯಲ್‌ಗಳು ಆರ್ಥಿಕತೆಯ ಚಿಂತೆಯಿಲ್ಲದೆ ತೃಪ್ತರಾಗಿದ್ದಾರೆ. ವಯಸ್ಸಾದವರಲ್ಲಿಯೂ ಅತಿ ಕಡಿಮೆ ಪ್ರಮಾಣದ ಜನರು ಆರ್ಥಿಕತೆಯೊಂದಿಗೆ ತೃಪ್ತರಾಗಿದ್ದಾರೆ.

Kolkata asked Modi to 'Go Back'

ಈ ಮೊದಲು ಮೋದಿಯನ್ನು ಬೆಂಬಲಿಸಿದ್ದ ಯುವಜನರಲ್ಲಿ ಹಲವರು ಆರ್ಥಿಕ ದುರುಪಯೋಗ ಮತ್ತು ಧ್ರುವೀಕರಿಸುವ ಸಮಸ್ಯೆಗಳ ಬಗೆಗೆ ತಮ್ಮ ಹತಾಶೆಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. ಉದಾಹರಣೆಯೆಂಬಂತೆ, ದೆಹಲಿ ಚುನಾವಣೆಯಲ್ಲಿ ಬಿಜೆಪಿ ಕೋಮು ರಾಜಕೀಯದ ವಿರುದ್ಧ ಆಮ್‌ ಆದ್ಮಿ ಪಕ್ಷಕ್ಕೆ ಮತ ನೀಡಿದವರು 18-25 ವಯಸ್ಸಿನ ಯುವಜನರು ಎಂದರೆ ಆಶ್ಚರ್ಯವಿಲ್ಲ.

ದೇಶದ ಸರ್ಕಾರದ ಬಗ್ಗೆ ಯುವನರಲ್ಲಿ ಕೆಲವು ಸಮಯದಿಂದ ಅಸಮಾಧಾನ ಹೆಚ್ಚುತ್ತಿದೆ. ಇದಕ್ಕೆ ಎರಡು ಕಾರಣಗಳಿವೆ.

 ಆರ್ಥಿಕತೆ:

ಮೊದಲನೆಯದಾಗಿ, ಆರ್ಥಿಕತೆಯ ಸ್ಥಿತಿ. ಕಳೆದ ವರ್ಷ ಬಿಡುಗಡೆಯಾದ ಸರ್ಕಾರಿ ಸಮೀಕ್ಷೆಯ ಪ್ರಕಾರ ಭಾರತದ ನುರಿತ ಯುವಕರಲ್ಲಿ ಶೇ.33 ರಷ್ಟು ಯುವಜನರು ನಿರುದ್ಯೋಗಿಗಳಿದ್ದಾರೆ. ಈ ಅಂಕಿಅಂಶವು ಮಾರ್ಚ್ 2019 ರ ಲೋಕನಿಟಿ ಸಮೀಕ್ಷೆಗೆ ಪೂರಕವಾಗಿದೆ. ಆದರೆ, ಲೋಕನಿಟಿ ಸಮೀಕ್ಷೆಯ ನಂತರ ಬಾಲಕೋಟ್ ಸಂಭವಿಸಿತು. ಇದು ಯುವಜನರನ್ನು ಬಿಜೆಪಿಗೆ ಮರಳಿ ಮತನೀಡುವಂತೆ ಪ್ರೇರೇಪಿಸಿತ್ತು.

ಆದರೆ, ಈಗ ಕೊರೊನಾ ಮತ್ತು ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ದುರಂತವು ಯುವಜನರನ್ನು ಮತ್ತಷ್ಟು ಜರ್ಜರಿತಗೊಳಿಸಿದೆ. ಬಹುಸಂಖ್ಯಾತ ಯುವಜನರು ಕಡಿಮೆ ಸುರಕ್ಷಿತಯುಳ್ಳ ಅನೌಪಚಾರಿಕ ವಲಯದಲ್ಲಿ ಉದ್ಯೋಗ ಮಾಡುತ್ತಿದ್ದಾರೆ.  CMIE ಮಾಹಿತಿಯ ಪ್ರಕಾರ, ಏಪ್ರಿಲ್ ತಿಂಗಳಲ್ಲಿನಲ್ಲಿಯೇ 20 ರಿಂದ 30 ವರ್ಷದೊಳಗಿನ 27 ದಶಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರಿಂದಾಗಿ ಯುವ ಭಾರತದ ಬಹುಪಾಲು ಜನರು ಅನಿಶ್ಚಿತತೆಯಲ್ಲಿ ಸಿಲುಕಿಕೊಂಡಿದ್ದಾರೆ. ಅವರು ಹೊಸ ಅವಕಾಶಗಳು ಕಣ್ಮರೆಯಾಗುತ್ತಿರುವ ಅಪಾಯವನ್ನು ನೋಡುತ್ತಿದ್ದಾರೆ.

ವಿಭಜಿಸುವ ಒಂದು ಸಿದ್ಧಾಂತ

ಎರಡನೆಯದು, ಬಿಜೆಪಿ ಕೇಂದ್ರೀಕರಿಸಿದ ಸೈದ್ಧಾಂತಿಕ ವಿಷಯಗಳು. ವಿಶೇಷವಾಗಿ ಕಳೆದ ಒಂದು ವರ್ಷದಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ), ಆರ್ಟಿಕಲ್ 370, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಯುವಜನರು ಹೆಚ್ಚು ಪ್ರಶ್ನೆ ಮಾಡುತ್ತಿದ್ದಾರೆ.

ಮಿಂಟ್ ಯೂಗೊವ್ ಸಿಪಿಆರ್ ಸಮೀಕ್ಷೆಯ ಪ್ರಕಾರ, ಮೋದಿ ಸರ್ಕಾರದ ನಿಲುವುಗಳನ್ನು ಅವರು ಒಪ್ಪುವುದಿಲ್ಲ.  ಈ ವಿಚಾರಗಳಲ್ಲಿ ಯುವಜನರು ಮೋದಿಯನ್ನು ಬೆಂಬಲಿಸಲು ಮೊದಲಿಗೆ ಹೋಲಿಸಿದರೆ ಇಂದು ಹಿಂದೆ ಸರಿದಿದ್ದಾರೆ.  ನೇರವಾಗಿ ಹೇಳುವುದಾದರೆ, ಯುವಕರು ಈ ಸೈದ್ಧಾಂತಿಕ ವಿಷಯಗಳ ಬಗ್ಗೆ ಯುವಜನರಲ್ಲಿ ಆಸಕ್ತಿಯಿಲ್ಲ. ಹಲವರು ಸೈದ್ಧಾಂತಿಕವಾಗಿ ಸಮಾಜವಾಗಿ ವಿಘಟಿತರಾಗಿದ್ದಾರೆ.

VHP sets 'deadline', demands ordinance for Ram temple in ...

ಹಿಂದೂ-ಮುಸ್ಲೀಂ ಸಂಬಂಧಗಳನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗುತ್ತಿದೆ.  ಗ್ರಹಿಕೆಯು ತಪ್ಪುದಾರಿಯಲ್ಲಿದೆ ಎಂದು ಅವರು ಅರ್ಥಮಾಡಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಯುವಜನರು ಸಂಪ್ರದಾಯವಾದಿ ಸಿದ್ದಾಂತಗಳನ್ನು ಮೀರಿದವರಾಗಿದ್ದಾರೆ. ಅವರು  ಮದುವೆ, ಡೇಟಿಂಗ್, ಮದ್ಯಪಾನಗಳಂತ ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಪ್ರದಾಯವಾದವನ್ನು ಮುರಿಯುತ್ತಿದ್ದಾರೆ. ಇದು ರಾಜಕೀಯವಾಗಿ ಬಿಜೆಪಿಗೆ ನೆರವಾಗಲಾರದು.

ಅಲ್ಲದೆ, ಇಂದಿನ ತಲೆಮಾರಿನ ಯುವಜನರು ‘ಉದಾರವಾದಿ’, ‘ಜಾತ್ಯತೀತವಾದಿ’ ಅಥವಾ ‘ಸ್ತ್ರೀಸಮಾನತಾವಾದಿ’ಧಾರೆಗಳೊಂದಿಗೆ ಸುಲಭವಾಗಿ ಗುರುತಿಸಿಕೊಳ್ಳುವ ಸಾಧ್ಯತೆಯಿದೆ.

ಆದರೆ ಅಸಮಾಧಾಮವು ಮತಗಳಾಗಿ ಪರಿವರ್ತನೆಯಾಗುವುದಿಲ್ಲ:

ಮೋದಿ ಸರ್ಕಾರದ ಬಗೆಗೆ ಮೂಢುತ್ತಿರುವ ಅಸಮಾಧಾನವು ಕಾಂಗ್ರೆಸ್ ಅಥವಾ ಇನ್ನಾವುದೇ ವಿರೋಧ ಪಕ್ಷದ ಮತಬ್ಯಾಂಕ್‌ ಆಗಿ ಪರಿವರ್ತನೆಯಾಗುವುದಿಲ್ಲ. ಇದು ತಕ್ಷಣವೇ ಮೋದಿಗೆ ಗಂಭೀರ ರಾಜಕೀಯ ಬೆದರಿಕೆಯನ್ನು ಒಡ್ಡುವುದೂ ಇಲ್ಲ. ಚುನಾವಣಾ ಬದಲಾವಣೆಗೆ ಮತದಾರರು ವಿಶ್ವಾಸಾರ್ಹ ಪರ್ಯಾಯಗಳನ್ನು ನೋಡಬೇಕಾಗಿದೆ. ಹಾಗೆ ನೋಡಿದರೆ, ಯುವಜನರಿಗೆ ಕಾಂಗ್ರೆಸ್‌ ವಿಶ್ವಾಸಾರ್ಹ ಪರ್ಯಾಯವಾಗಿ ಕಾಣುತ್ತಿಲ್ಲ. ಕಾಣುವುದಕ್ಕೆ ಪುರಾವೆಗಳೂ ಇಲ್ಲ.

ಅಲ್ಲದೆ, ಮೋದಿ ಯುಗದಲ್ಲಿ ಹೆಚ್ಚಿನವರು ಪ್ರೌಢಾವಸ್ಥೆಗೆ ಬಂದಿರುವುದರಿಂದ, 2011-14ರ ಅವಧಿಯ ಕಾಂಗ್ರೆಸ್ ಭ್ರಷ್ಟಾಚಾರದ ಹಗರಣಗಳಿಂದ ಪ್ರತಿನಿಧಿಸಲ್ಪಟ್ಟಂತೆ ಈಗ ಮೋದಿಯವರಿಗೆ ಮತ ನೀಡಲು ಅವರಿಗೆ ಬಲವಾದ ನೆನಪುಗಳಿಲ್ಲ. ಇದರಿಂದಾಗಿ ಅವರು ಬಿಜಪಿಯಿಂದ ದೂರ ಸರಿಯಬಹುದು. ಆದರೆ ವಿರೋಧ ಪಕ್ಷಗಳು ಸಕ್ರಿಯವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಯುವಜನರ ಅಸಮಾಧಾನ ಮತ್ತು ಆಕಾಂಕ್ಷೆಗಳನ್ನು ಎಚ್ಚರಿಕೆಯಿಂದ ನಿಭಾಯಿಸುವ ಹಾಗೂ ಆಕರ್ಷಕ ಪರ್ಯಾಯ ವೇದಿಕೆಯೊಂದಿಗೆ ಪ್ರಯತ್ನಿಸದಿದ್ದರೆ ವಿರೋಧ ಪಕ್ಷಗಳಿಗೂ ಲಾಭವಿಲ್ಲ.

ಯುಪಿಎ-2 ರ ಅಂತ್ಯದಲ್ಲಿ ಯುವಜನರು ಕಾಂಗ್ರೆಸ್‌ ಬಗ್ಗೆ ಅಸಮಾಧಾನಗೊಂಡಿದ್ದರು. ಆ ಸಂದರ್ಭದಲ್ಲಿ ಆಕರ್ಷಕ ರೀತ್ಯ ಹೊಸ ಸ್ಯೂಟರ್ ಮೋದಿ ಎದುರು ಕಾಣಿಸಿದರು. ಆದರೆ, ಈಗ ಸ್ಯೂಟರ್‌ ಮೋದಿ ನಾವೀನ್ಯತೆಯನ್ನು ಕಳೆದುಕೊಂಡಿದ್ದಾರೆ. ಯುವಜನರು ಮತ್ತೆ ಅಸಮಾಧಾನಗೊಂಡಿದ್ದಾರೆ. ಆದರೆ ವೇದಿಕೆಯಲ್ಲಿ ಹೊಸದಾಗಿ ಸೆಳೆಯಬಲ್ಲ, ಪರ್ಯಾಯ ಕಟ್ಟಬಲ್ಲ ಅಟ್ರಾಕ್ವಿವ್‌ ಸ್ಯೂಟರ್‌ಗಳ ಮುಖಗಳಿಲ್ಲ.


Read Asloಮೋದಿಯ ವಿದೇಶಾಂಗ ನೀತಿಯಲ್ಲಿ ಮೋದಿಗೆ ಮೊದಲ ಆದ್ಯತೆ; ಭಾರತಕ್ಕೆ ನಂತರದ್ದು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights