‘ಯುಪಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ರಾಜ್ಯಗಳು ಅನುಮೋದನೆ ಪಡೆಯಬೇಕು’- ಯೋಗಿ ಆದಿತ್ಯನಾಥ್

ಭವಿಷ್ಯದಲ್ಲಿ ಉತ್ತರ ಪ್ರದೇಶದಿಂದ ವಲಸೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಬಯಸುವ ರಾಜ್ಯಗಳು ತಮ್ಮ ಸರ್ಕಾರದ ಅನುಮತಿಯನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.

ವೆಬಿನಾರ್ ಮೂಲಕ ಮಾತನಾಡಿದ ಆದಿತ್ಯನಾಥ್, “ಈಗ, ಯಾವುದೇ ರಾಜ್ಯಕ್ಕೆ ಮಾನವಶಕ್ತಿ ಅಗತ್ಯವಿದ್ದರೆ, ಯುಪಿ ಸರ್ಕಾರವು ಮಾನವಶಕ್ತಿಗೆ ಸಾಮಾಜಿಕ ಭದ್ರತೆಯನ್ನು ನೀಡುತ್ತದೆ. ನಾವು ಅವರಿಗೆ ವಿಮೆ ಮತ್ತು ಭದ್ರತೆಯನ್ನು ನೀಡುತ್ತೇವೆ. ಆದರೆ, ನಮ್ಮ ಅನುಮತಿಯಿಲ್ಲದೆ, ನಮ್ಮ ಜನರನ್ನು ಇತರ ರಾಜ್ಯಗಳು ತೆಗೆದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಯುಪಿ ನಿವಾಸಿಗಳನ್ನು ಯಾವ ರೀತಿ ನಡೆೆೆೆೆಸಿಕೊಳ್ಳಲಾಯಿತು ಎಂಬುದನ್ನ ನೋಡಿ, ನಾವು ಜನರ ಸಾಮಾಜಿಕ ಭದ್ರತೆಯನ್ನುಜವಬ್ದಾರಿಯನ್ನು ತೆಗೆದುಕೊಂಡಿದ್ದೇವೆ. ” ಎಂದಿದ್ದಾರೆ.

ಜೊತೆಗೆ ಸರ್ಕಾರವು ವಲಸೆ ಕಾರ್ಮಿಕರ ಕೌಶಲ್ಯ ನಕ್ಷೆಯನ್ನು ಕೈಗೊಳ್ಳಲಿದೆ. ಅವರು ಇತರ ರಾಜ್ಯಗಳು ಅಥವಾ ದೇಶಗಳಿಗೆ ಹೋಗಲಿ ಬಿಡಲಿ ಅವರ ಪರವಾಗಿ ನಾವು ನಿಲ್ಲುತ್ತೆವೆ ಎಂದು ಮುಖ್ಯಮಂತ್ರಿ ಹೇಳಿದರು. ಅಲ್ಲದೇ ಲಾಕ್ ಡೌನ್ ಮಧ್ಯೆ ರಾಜ್ಯಕ್ಕೆ ಮರಳಿದ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ವಲಸೆ ಆಯೋಗವನ್ನು ಸ್ಥಾಪಿಸುವುದಾಗಿ ಆದಿತ್ಯನಾಥ್ ಘೋಷಿಸಿದರು. ಈ ಆಯೋಗವು ಕಾರ್ಮಿಕರಿಗೆ ಅವರ ಕೌಶಲ್ಯಕ್ಕೆ ಅನುಗುಣವಾಗಿ ಉದ್ಯೋಗ ನೀಡುವ ಮೂಲಕ ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸುವ ಕೆಲಸ ಮಾಡುತ್ತದೆ.

ಇನ್ನೂ ರಾಜ್ಯಕ್ಕೆ ಮರಳಿದವರಲ್ಲಿ ಸೋಂಕಿನ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ, ವಲಸೆ ಕಾರ್ಮಿಕರು ಇತರರಿಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

“ಮರಳಿ ಬರುವ ವಲಸೆ ಕಾರ್ಮಿಕರು [ಕೋವಿಡ್ -19 ನೊಂದಿಗೆ] ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ನಮಗೆ ತಿಳಿದಿದೆ. ಆದರೆ, ಅವರು ಕಷ್ಟಪಟ್ಟು ಬೆವರು ಸುರಿಸಿ ಕೆಲಸ ಮಾಡುತ್ತಾರೆ. ನೈಸರ್ಗಿಕವಾಗಿ ಅವರು ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಸಾಮಾನ್ಯ ವ್ಯಕ್ತಿಯು ಸೋಂಕಿಗೆ ಒಳಗಾಗಿದ್ದರೆ, ಅವರು ಚೇತರಿಸಿಕೊಳ್ಳಲು 14 ರಿಂದ 20 ದಿನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ವಲಸೆ ಕಾರ್ಮಿಕರು ಆರು ಅಥವಾ ಏಳನೇ ದಿನ ಕೊರೊನ ಮುಕ್ತರಾಗುತ್ತಿದ್ದಾರೆ.   ಇದು ನಮ್ಮ ಶಕ್ತಿ . ಸ್ಕ್ರೀನಿಂಗ್ ಜೊತೆಗೆ, ವಲಸಿಗರನ್ನು ಸಹ ಕೌಶಲ್ಯಕ್ಕಾಗಿ ಮ್ಯಾಪ್ ಮಾಡಲಾಗುತ್ತಿದೆ, ”ಎಂದು ಅವರು ಹೇಳಿದರು.

ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರ ಆಡಳಿತ ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ, “ನಾನು ಉತ್ತರ ಪ್ರದೇಶದ ಬಗ್ಗೆ ಮಾತನಾಡುವಾಗ, ಇದು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಎಂದು ಹೇಳುವುದು ಸಹಜ… ಲಾಕ್‌ಡೌನ್ ಸಮಯದಲ್ಲಿ ನಾವು ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಆರಂಭದಲ್ಲಿ ವಲಸೆ ಕಾರ್ಮಿಕರು ಮತ್ತು ಕಾರ್ಮಿಕರು ರಾಜ್ಯಕ್ಕೆ ಬರಲು ಪ್ರಾರಂಭಿಸಿದರು. ಇದು ನಮಗೆ ಮೊದಲ ಸವಾಲಾಗಿತ್ತು. ಕೆಲವು ಸ್ಥಳಗಳಲ್ಲಿ ಅವರನ್ನು ಬಸ್‌ಗಳಲ್ಲಿ ಕರೆತಂದ ನಂತರ ಯುಪಿ ಗಡಿಯಲ್ಲಿ ಇಳಿಸಲಾಯಿತು. ನಾವು 16,000 ಬಸ್ಸುಗಳನ್ನು ನಿಯೋಜಿಸಿದ್ದೇವೆ. 24 ಗಂಟೆಗಳ ಒಳಗೆ ಅವರನ್ನು ಮತ್ತೆ ತಮ್ಮ ಜಿಲ್ಲೆಗಳಿಗೆ ಕರೆತರಲಾಯಿತು ಮತ್ತು ಅವುಗಳನ್ನು ಪರೀಕ್ಷಿಸಲು ವ್ಯವಸ್ಥೆ ಮಾಡಲಾಯಿತು. ”

ಇನ್ನೂ ಈ ವೇಳೆ ಯಾರ ಹೆಸರನ್ನು ಹೇಳದೆ ವಲಸೆ ಬಿಕ್ಕಟ್ಟಿಗೆ ಪ್ರತಿಪಕ್ಷ ನಾಯಕರ ವಿರುದ್ಧ ಕೆಂಡ ಕಾರಿದರು. “ಲಾಕ್‌ಡೌನ್ ಸಮಯದಲ್ಲಿ, ಬಡವರಿಗಾಗಿ ಘೋಷಣೆಗಳನ್ನು ಎತ್ತುವವರು… ಕಾರ್ಮಿಕರ ಬಗ್ಗೆ ಪ್ರಾಮಾಣಿಕವಾಗಿ ಚಿಂತಿತರಾಗಿದ್ದರೆ, ವಲಸೆಯನ್ನು ನಿಲ್ಲಿಸಬಹುದಿತ್ತು. ಇದು ಸಂಭವಿಸಲಿಲ್ಲ. ಯಾವುದೇ ಸೌಲಭ್ಯಗಳನ್ನು ನೀಡಲಾಗಿಲ್ಲ. ಹಲವಾರು ಸ್ಥಳಗಳಲ್ಲಿ, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ, ಆದ್ದರಿಂದ ಜನರು ವಲಸೆ ಹೋಗಬೇಕಾಯಿತು, ”ಎಂದು ಅವರು ಹೇಳಿದರು.

ರಾಜ್ಯದಲ್ಲಿ 18 ಕೋಟಿ ಜನರಿಗೆ ಐದು ಬಾರಿ ಆಹಾರ ಧಾನ್ಯಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. “ನಮ್ಮಲ್ಲಿ ವಲಸೆ ಹೋಗುತ್ತಿರುವ ಅಪಾರ ಸಂಖ್ಯೆಯ ಕಾರ್ಮಿಕರಿದ್ದಾರೆ. ಯುಪಿಯಲ್ಲಿ ಸುಮಾರು 25 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಒಬ್ಬರು ಕೂಡ ವಲಸೆ ಹೋಗುತ್ತಿಲ್ಲ. ಅವರು ಇಲ್ಲಿಯೇ ಉಳಿದುಕೊಂಡಿದ್ದಾರೆ ಏಕೆಂದರೆ ಅವರಿಗೆ ಗೌರವ ಧನ ನೀಡಲಾಯಿತು. 25 ಲಕ್ಷ ಕಾರ್ಮಿಕರಲ್ಲಿ 22 ಲಕ್ಷ ಮಂದಿ ತಮ್ಮ ಕೆಲಸಕ್ಕೆ ಮರಳಿದ್ದಾರೆ ಮತ್ತು ಲಾಕ್‌ಡೌನ್ ಅವಧಿಗೂ ಸಹ ಅವರಿಗೆ ಸಂಬಳ ಸಿಕ್ಕಿದೆ. ” ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights