ರಾಜ್ಯದಲ್ಲಿಂದು 45 ಹೊಸ ಕೊರೊನಾ ಕೇಸ್ ದಾಖಲು : 750ಕ್ಕೇರಿದ ಸೋಂಕಿತರ ಸಂಖ್ಯೆ!

ರಾಜ್ಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕೊಂಚ ಕಡಿಮೆಯಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು ಇದ್ದಕ್ಕಿದ್ದಂತೆ ಏರಿಕೆಯಾಗಿದೆ. ರಾಜ್ಯದಲ್ಲಿಂದು ಹೊಸದಾಗಿ 45 ಕೊರೊನಾ ಕೇಸ್ ದಾಖಲಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.

ಹೌದು… ನಿನ್ನೆ ಸಂಜೆಯಿಂದ ಇಂದು ಬೆಳಗಿನ ವರದಿ ಪ್ರಕಾರ, ಹೊಸದಾಗಿ 45 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ  750 ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ.

ಬೆಂಗಳೂರು 7,  ಭಟ್ಕಳ 12, ಬೆಳಗಾವಿ 11, ಬಳ್ಳಾರಿ 1, ದಾವಣಗೆರೆಯಲ್ಲಿ  14 ಸೋಂಕಿತರು ದಾಖಲಾಗಿದೆ. ದಾವಣಗೆರೆಯಲ್ಲಿ 10 ವರ್ಷದ ಒಳಗಿನ 6 ಮಕ್ಕಳಿಗೆ ಸೋಂಕು ಹರಡಿದೆ. ಒಂದೇ ಕುಟುಂಬದವರಿಗೆ ಓರ್ವ ನರ್ಸ್ ನಿಂದ ಸೋಂಕು ಹರಡಿರುವುದು ವರದಿಯಾಗಿದೆ. ಈವರೆಗೆ ದಾವಣೆಗೆರೆಯಲ್ಲಿ ಒಟ್ಟು 61 ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.

ಇವತ್ತು ದಾಖಲಾದ 45 ಸೋಂಕಿತರಲ್ಲಿ 9 ಜನ ಯುವಕರು, 30 ವರ್ಷ ಮೇಲ್ಪಟ್ಟ ವಯಸ್ಸಿನ 10 ಜನ ಮಹಿಳೆಯರು, 2 ವೃದ್ಧರು ಸೇರಿ 40 ವರ್ಷ ಮೇಲ್ಪಟ್ಟ 8 ಜನ ಪುರುಷರು, 16 ವರ್ಷ ಮೇಲ್ಪಟ್ಟ 8 ಜನ ಯುವತಿಯರು, 3 ವರ್ಷದ ಮಗು ಸೇರಿ 10 ಜನ ಮಕ್ಕಳು ಇದ್ದಾರೆ.

ಈವರೆಗೆ ರಾಜ್ಯದಲ್ಲಿ ದಾಖಲಾದ ಒಟ್ಟು 750 ಸೋಂಕಿತರ ಪೈಕಿ 30 ಜನ ಮೃತಪಟ್ಟಿದ್ದು, 371 ಜನ ಗುಣಮುಖರಾಗಿದ್ದಾರೆ. ಈ ಬಗ್ಗೆ ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿದ್ದಾರೆ.

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights