ರಾಜ್ಯದಲ್ಲಿ 700ರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ : ಹೊಸದಾಗಿ 8 ಕೇಸ್ ಪತ್ತೆ!

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 700 ಗಡಿ ದಾಟಿದ್ದು, ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಕಡಿಮೆಯಾಗುವ ಲಕ್ಷಣಗಳೇ ಕಾಣಸಿಗುತ್ತಿಲ್ಲ.

ಹೌದು… ಇಂದು ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್ ನಲ್ಲಿ,  ರಾಜ್ಯದಲ್ಲಿಂದು ಹೊಸದಾಗಿ 8 ಜನರಿಗೆ ಕೊರೊನಾ ಸೋಂಕು ಹರಡಿದ್ದು, ಕಲಬುರಗಿಯಲ್ಲಿ 3, ಬೆಂಗೂರಿನಲ್ಲಿ 1, ಬೆಳಗಾವಿಯಲ್ಲಿ 1 ದಾವಣಗೆರೆಯಲ್ಲಿ 3 ಪ್ರಕರಣಗಳು ದಾಖಲಾಗಿವೆ. ಈವರೆಗೆ ಒಟ್ಟು 701 ಜನರಿಗೆ ರಾಜ್ಯದಲ್ಲಿ ಸೋಂಕು ತಗುಲಿದೆ. ಇಂದು ದಾವಣಗೆರೆಯ 55 ವರ್ಷದ ಮಹಿಳೆ ಕೊರೊನಾಗೆ ಸಾವನ್ನಪ್ಪಿದ್ದು, 30 ಜನ ಮೃತಪಟ್ಟಿದ್ದಾರೆ. ದಾವಣಗೆರೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ 4ಕ್ಕೇರಿಕೆಯಾಗಿದೆ. 363 ಜನ ಡಿಸ್ಚಾರ್ಜ್ ಆಗಿದ್ದಾರೆ.

ಸೋಂಕಿತ 49 ವರ್ಷದ ಮಹಿಳೆ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಯಶವಂತಪುರದ ಸುಬೇದಾರ್ ಪಾಳ್ಯದಲ್ಲಿರುವ ಮಗನ ಮನೆಗೆ ಮಾರ್ಚ್ 12ರಂದು ಬಂದಿದ್ದರು. ಅವರಿಗೆ ಏಪ್ರಿಲ್ 30ರಂದು ಜ್ಚರ ಕಾಣಿಸಿಕೊಂಡಿತ್ತು. ಹೀಗಾಗಿ ಚಿಕನ್ ಗುನ್ಯಾ ಅಂತ ಭಾವಿಸಿ ಯಶವಂತಪುರದ ಖಾಸಗಿ ಆಸ್ಪತ್ರೆಗೆ ಮೇ 1ರಂದು ದಾಖಲಾಗಿದ್ದರು. ಆದರೆ ಅವರಿಗೆ ಕೊರೊನಾ ಲಕ್ಷಣಗಳಿರುವ ಶಂಕೆ ವ್ಯಕ್ತಪಡಿಸಿದ ವೈದ್ಯರು ಚಿಕನ್ ಗುನ್ಯಾ ಟೆಸ್ಟ್ ಜೊತೆಗೆ ಕೋವಿಡ್-19 ಪರೀಕ್ಷೆ ಕೂಡ ಮಾಡಿಸಿದ್ದರು. ಈ ವೇಳೆ ಪಾಸಿಟಿವ್ ಬಂದಿದೆ. ತಕ್ಷಣವೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ವ್ಯಕ್ತಿ ಶಿಫ್ಟ್ ಮಾಡಲಾಗಿದೆ. ಮಹಿಳೆಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಜೊತೆಗೆ ಆಸ್ಪತ್ರೆಯಿಂದ ಇತರೆ ರೋಗಿಗಳ ಸ್ಥಳಾಂತರಗೊಳಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights