ಲಂಡನ್‌ನಲ್ಲಿ ಮೇಯರ್‌ ಆಗಿದ್ದ ಕನ್ನಡಿಗನಿಗೆ ಕೊರೊನಾ ಸೋಂಕು

ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಡಾ. ನೀರಜ್‌ ಪಾಟೀಲ್‌ ಅವರಿಗೆ COVID-19 ಸೋಂಕು ತುಗುಲಿದ್ದು ಲಂಡನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಹೋಂ ಐಸೋಲೇಷನ್‌ಗೆ ಒಳಗಾಗಿದ್ದಾರೆ.

ಡಾ. ನೀರಜ್‌ ಪಾಟೀಲ್‌ ಹುಟ್ಟಿದ್ದು ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯಲ್ಲಿ. ಇವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಲಂಡನ್‌ನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ, ಅವರು 2010 ರಿಂದ 2011 ರವರೆಗೆ ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮೇಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲೆಂಡ್‌ನ ಲೇಬರ್ ಪಕ್ಷದ ಸದಸ್ಯರಾಗಿರುವ ಇವರು ಏಷ್ಯಾ ಮೂಲದಿಂದ ಲಂಡನ್‌ನ ಮೊದಲ ಮೇಯರ್ ಆಗಿದ್ದರು.

ಎಡಿನ್‌ಬರ್ಗ್‌ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನಲ್ಲಿ ಫೆಲೋಶಿಪ್ ಪೂರ್ಣಗೊಳಿಸಿದ ಅವರು ಅಪಘಾತ ಮತ್ತು ತುರ್ತು ಔಷಧ ವಿಭಾಗದ ಸಲಹೆಗಾರರಾಗಿದ್ದಾರೆ. ಇವರು ವರ್ತಿಂಗ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು 2006 ರಲ್ಲಿ ಮೊದಲ ಬಾರಿಗೆ ಲಾರ್ಕ್‌ಹಾಲ್ ವಾರ್ಡ್‌ಗೆ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. 2010 ರಲ್ಲಿ ಮರು ಆಯ್ಕೆಯಾದ ಇವರು ಲ್ಯಾಂಬೆತ್‌ ನಗರದ ಮೇಯರ್‌ ಆಗಿ ಸೇವೆಸಲ್ಲಿಸಿದ್ದರು.

ಅಲ್ಲದೆ, ಲಂಡನಿನ ಥೇಮ್ಸ್ ನದಿ ದಂಡೆಯ ಮೇಲೆ  ಮಹಾತ್ಮ ಬಸವೇಶ್ವರರ ಪುತ್ಥಳಿಯನ್ನು ಸ್ಥಾಪಿಸಿದ ಹಿರಿಮೆ ಇವರದು.

ವೈದ್ಯಕೀಯ ವೃತ್ತಿಯಲ್ಲಿದ್ದ ಇವರಿಗೆ ಕೊರೊನಾ ಸೋಂಕು ತಗುಲಿದ್ದು, ಸಧ್ಯ ಹೊಂ ಕ್ವಾರಂಟೈನ್‌ನಲ್ಲಿದ್ದು, ಎಲ್ಲರಿದಂಲೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights