ಲಾಕ್ ಡೌನ್ – ಆಲ್ಕೋಹಾಲ್ ಸಿಗದೆ 9 ಜನ ಆತ್ಮಹತ್ಯೆ – ದೇವರನಾಡಿನ ಕರಾಳ ಸತ್ಯ…!

ಒಂದು ಕಡೆ ಕೊರೊನಾ ಸೋಂಕಿಗೆ ಜನ ಬಲಿಯಾಗುತ್ತಿದ್ದಾರೆ. ಇನ್ನೊಂದು ಕಡೆ ಕುಡಿಯಲು ಆಲ್ಕೋಹಾಲ್ ಇಲ್ಲದೇ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಹೌದು.. ಆಶ್ಚರ್ಯ ಎನ್ನಿಸಿದರೂ ಇದು ನಿಜವೇ. ವಿಶ್ವದಾದ್ಯಂತ ಜನ ಸೋಂಕಿನಿಂದ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಾ ಪಡ್ತಾಯಿದ್ರೆ ಇತ್ತ ದೇವರ ನಾಡು ಕೇರಳದಲ್ಲಿ ಜನ ಕುಡಿಯಲು ಆಲ್ಕೋಹಾಲ್ ಸಿಗುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾರೆ. ಕೇರಳದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರು ಒಬ್ಬ ರು ಮಾತ್ರ, ಆದರೆ ಆಲ್ಕೋಹಾಲ್ ಸಿಕ್ಕಿಲ್ಲ ಎಂದು ಪ್ರಾಣ ಬಿಟ್ಟವರ ಸಂಖ್ಯೆ 9.

ಕೊರೊನಾ ಸೋಂಕು ಹರಡದಂತೆ ಕೇಂದ್ರ ಸರ್ಕಾರ ದೇಶದೆಲ್ಲೆಡೆ ಲಾಕ್ ಡೌನ್ ಘೋಷಿಸಿದರೂ ಸೋಂಕು ವೇಗವಾಗಿ ಹರಡುತ್ತಿರುವದರಿಂದ ಸೋಂಕಿತರ ಸಂಖ್ಯೆ ದೇಶದಲ್ಲಿ ಸಾವಿರ ಗಡಿ ದಾಟಿದೆ. ಏಪ್ರಿಲ್ 14 ರವೆಗೂ ಲಾಕ್ ಡೌನ್ ಮಾಡಲಾಗಿದೆಯಾದರೂ ದೇಶದಲ್ಲಿ ಕೊರೊನಾ ಸಂಕಿತರಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರಿಗೆ ಮನೆಯಿಂದ ಹೊರಬಾರದಂತೆ ಸೂಚಿಸಲಾಗಿದೆ. ಜೊತೆಗೆ ಜನರಿಗೆ ಅಗತ್ಯ ವಸ್ತುಗಳು ಬಿಟ್ಟರೆ ಯಾವುದೇ ವಸ್ತುಗಳು ಖರೀದಿ ಸಿಗುತ್ತಿಲ್ಲ. ಜನ ಸೇರಬಹುದಾದಂತಹ ಸ್ಥಳಗಳನ್ನ ಕಂಪ್ಲೀಟ್ ಬಂದ್ ಮಾಡಲಾಗಿದೆ. ಹೀಗಾಗಿ ಆಲ್ಕೋಹಾಲ್ ಕೂಡ ಸಿಗುತ್ತಿಲ್ಲ. ಮಧ್ಯಪಾನಿಗಳಿಗೆ ಇದು ನುಂಗಲಾರದ ತುತ್ತಾಗಿದೆ. ಮನೆಯಲ್ಲೇ ಕಾಲ ಕಳೆಯಬೇಕಾದ ಸಂದರ್ಭದಲ್ಲಿ ಆಲ್ಕೋಹಾಲ್ ಬಯಸುವ ಕುಡುಕರು ಮದ್ಯದಂಗಡಿಗಳಿಗೆ ಅಲೆದಿದ್ದಾರೆ. ಮದ್ಯಸಿಗದ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ರೀತಿಯ ಮೊದಲ ಪ್ರಕರಣ ಶುಕ್ರವಾರ ನಡೆದಿತ್ತು. ತ್ರಿಶೂರ್​ನ ಸನೋಜ್ ಮತ್ತು ಕೊಚ್ಚಿಯ ಮುರಳಿ ಎಂಬುವವರು ಸಾರಾಯಿ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ನಂತರ ಶನಿವಾರ ಕಣ್ಣೂರಿನ ವಿಜಿಲ್, ಕೊಲ್ಲಂನ ಬಿಜು ಮತ್ತು ಸುರೇಶ್, ಕೊಚ್ಚಿಯ ವಾಸು ಶನಿವಾರ ಮೃತಪಟ್ಟಿದ್ದರು. ಭಾನುವಾರ ತಿರುವನಂತಪುರದ ಕೃಷ್ಣನ್ ಕುಟ್ಟಿ ಆಲ್ಕೋಆಲ್ ಸಿಗದ ಕಾರಣ ಸಾವನ್ನಪ್ಪಿದ್ದ. ಭಾನುವಾರ 46 ವರ್ಷದ ಕೃಷ್ಣನ್ ಕುಟ್ಟಿ ಎಂಬಾತ ಆಲ್ಕೋಹಾಲ್ ಸಿಗದೆ ಸರ್ಕಾರಿ ಆಸ್ಪತ್ರೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಕಯಂಕುಳಂನ ನೌಶಾದ್ ಶನಿವಾರ ಶೇವಿಂಗ್ ಲೋಷನ್ ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಕೊಲ್ಲಂನ ಮುರಳೀಧರನ್ ಆಚಾರಿಗೆ ಆಲ್ಕೋಹಾಲ್ ಸಿಗದೆ, ಒತ್ತಡದಲ್ಲಿ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಯಾರಿಗೆಲ್ಲ ಆಲ್ಕೋಹಾಲ್ ಇಲ್ಲದೆ ಇರುವುದು ಕಷ್ಟವೋ ಅಂಥವರಿಗೆ ನಿಯಮಿತ ಪ್ರಮಾಣದಲ್ಲಿ ಆಲ್ಕೋಹಾಲ್ ದೊರೆಯುವಂತೆ ಮಾಡಲಾಗುವುದು. ಅಬಕಾರಿ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡಿ, ಸರ್ಕಾರದಿಂದಲೇ ನಿಯಮಿತ ಪ್ರಮಾಣದಲ್ಲಿ ಆಲ್ಕೋಹಾಲ್ ಸಿಗುವಂತೆ ಮಾಡಲಾಗುವುದು. ತಜ್ಞ ವೈದ್ಯರ ಸಲಹೆ ಪಡೆದು, ಅವರ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಆಲ್ಕೋಹಾಲ್ ಅಗತ್ಯವಿದೆ ಎಂಬುದನ್ನು ಆಧರಸಿ, ಮದ್ಯ ನೀಡಲಾಗುವುದು ಎಂದು ಕೇರಳದ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.ಆದರೆ, ಇದಕ್ಕೆ ಕೇರಳ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘ ವಿರೋಧ ವ್ಯಕ್ತಪಡಿಸಿದೆ. ಮದ್ಯಸೇವನೆಯಿಲ್ಲದೆ ಬದುಕಲಾಗದು ಎನ್ನುವವರಿಗೆ ಆಲ್ಕೋಹಾಲ್ ನೀಡುವುದು ಸರಿಯಲ್ಲ. ಇದು ಅವೈಜ್ಞಾನಿಕ ನಿರ್ಧಾರ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights