ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ…? : ಜನರಲ್ಲಿ ಹೆಚ್ಚಾದ ಆತಂಕ

ಮಂಗಳೂರು ಏರ್ ಪೋರ್ಟ್ ಆವರಣದಲ್ಲಿ ಸಿಕ್ಕ ಲ್ಯಾಪ್ ಟ್ಯಾಪ್ ಬ್ಯಾಗ್ ನಲ್ಲಿ ಸಜೀವ  ಬಾಂಬ್ ಪತ್ತೆಯಾಗಿದೆ. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರೀಯ ದಳದಿಂದ ಬಾಂಬ್ ಇದ್ದ ಬ್ಯಾಗ್ ನ್ನು 400 ಮೀಟರ್ ನಿರ್ಜನ ಪ್ರದೇಶದಲ್ಲಿ ತಂದು ಪರಿಶೀಲನೆ ಮಾಡಲಾತ್ತಿದೆ.

ಹೌದು… ಇಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದ ಟಿಕೇಟ್ ಕೌಂಟರ್ ನಲ್ಲಿ ಅನಿಮಾನಾಸ್ಪದ ಲ್ಯಾಪ್ ಟ್ಯಾಪ್ ಬ್ಯಾಗ್ ಪತ್ತೆಯಾಗಿದ್ದು ಆತಂಕವೇ ಸೃಷ್ಟಿ ಮಾಡಿದೆ.

ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ. ಹರ್ಷ ದೌಡಾಯಿಸಿದ್ದಾರೆ. ಬಾಂಬ್ ನಿಷ್ಕ್ರೀಯ ವಾಹನದಲ್ಲಿ ನಿಷ್ಕ್ರೀಯ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಇಲ್ಲವಾದರೂ ಎಲ್ಲಾ ಪರಿಶೀಲನೆಯನ್ನು ಗಮನಿಸಿದರೆ ಇದು ಬಾಂಬ್ ಇರುವ ಶಂಕೆಯನ್ನು ಹೆಚ್ಚಿಸಿದೆ. ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಮಂಗಳೂರು ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

ಸದ್ಯಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಯಾಗಿದ್ದು, ವಿಮಾನ ನಿಲ್ದಾಣದಲ್ಲಿ ಮಾತ್ರವಲ್ಲದೇ ಮಂಗಳೂರಿನ ಜನತೆಯಲ್ಲಿ ಆತಂಕ ಸೃಷ್ಟಿ ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights