ವಿಶ್ವದಾದ್ಯಂತ 41 ದಶಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು..!

ಕೊರೊನಾ ವೈರಸ್ (ಕೋವಿಡ್ -19) ಸಾಂಕ್ರಾಮಿಕ ರೋಗ ವಿಶ್ವದಲ್ಲಿ ಹೆಚ್ಚುತ್ತಿದೆ. ಇದುವರೆಗೆ ವಿಶ್ವದಾದ್ಯಂತ 41 ದಶಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕಿತರು ದೃಢಪಟ್ಟಿದ್ದಾರೆ.
ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 41,66,095 ಜನರು ಈ ಕಾಯಿಲೆಗೆ ತುತ್ತಾಗಿದ್ದು, ವಿಶ್ವದ 187 ದೇಶಗಳು ಈ ರೋಗದ ವಿರುದ್ಧ ಹೋರಾಡುತ್ತಿವೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3604 ಹೊಸ ಕೊರೊನಾ ಪ್ರಕರಣ ವರದಿಯಾಗಿದ್ದು, ಅದು 70 ಸಾವಿರ ಗಡಿ ದಾಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ 2293 ಜನರು ಸಾವನ್ನಪ್ಪಿದ್ದಾರೆ.
ಅಮೆರಿಕದಲ್ಲಿ 13 ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 17,948 ಹೊಸ ಕೊರೊನಾ ವೈರಸ್ ಸೋಂಕನ್ನು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 13,47,151 ಕ್ಕೆ ಏರಿದೆ. ಇದೇ ಅವಧಿಯಲ್ಲಿ 850 ಜನರ ಸಾವಿನ ನಂತರ, ಒಟ್ಟು ಸತ್ತವರ ಸಂಖ್ಯೆ 80,378 ಕ್ಕೆ ಏರಿದೆ.
ಯುರೋಪ ಖಂಡದಲ್ಲೂ ಈ ರೋಗಕ್ಕೆ ಹಲವು ದೇಶಗಳು ನಲುಗಿ ಹೋಗಿವೆ. ಇಟಲಿಯಲ್ಲಿ ಇದುವರೆಗೆ 30,739 ಜನರು ಸಾವನ್ನಪ್ಪಿದ್ದಾರೆ ಮತ್ತು ಇದುವರೆಗೆ 2,19,814 ಜನರು ಸೋಂಕಿಗೆ ಒಳಗಾಗಿದ್ದಾರೆ. ಕೋವಿಡ್ -19 ಸೋಂಕಿನಿಂದ ಹೆಚ್ಚು ಬಾಧಿತ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಪೇನ್ ಎರಡನೇ ಸ್ಥಾನದಲ್ಲಿದೆ. ಇಲ್ಲಿಯವರೆಗೆ 2,27,436 ಜನರು ಇದಕ್ಕೆ ಬಲಿಯಾಗಿದ್ದು, 26,744 ಜನರು ಸಾವನ್ನಪ್ಪಿದ್ದಾರೆ.
ಈವರೆಗೆ 1,77,547 ಜನರು ಸೋಂಕಿಗೆ ಒಳಗಾಗಿದ್ದು, 26643 ಜನರು ಸಾವನ್ನಪ್ಪಿದ್ದಾರೆ. ಜರ್ಮನಿಯಲ್ಲಿ, 169575 ಜನರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು 7417 ಜನರು ಸಾವನ್ನಪ್ಪಿದ್ದಾರೆ.
ಇಂಗ್ಲೆಂಡ್ ನಲ್ಲಿ 2,23,060 ಜನರು ಬಾಧಿತರಾಗಿದ್ದು, ಈ ಸೋಂಕಿನಿಂದ 32,065 ಜನರು ಸಾವನ್ನಪ್ಪಿದ್ದಾರೆ. ಟರ್ಕಿಯಲ್ಲಿ ಕರೋನಾ ಸೋಂಕಿನ ಹೊಸ ಪ್ರಕರಣ ವರದಿಯಾಗಿದ್ದು ಮತ್ತು ಈವರೆಗೆ 1,38,657 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ಇರಾನ್‌ನಲ್ಲಿ 1,09,286 ಜನರು ಸೋಂಕಿಗೆ ಒಳಗಾಗಿದ್ದು, 6685 ಜನರು ಸಾವನ್ನಪ್ಪಿದ್ದಾರೆ. ರಷ್ಯಾದಲ್ಲಿ ಈವರೆಗೆ 2,21,344 ಪ್ರಕರಣಗಳು ದೃ ಢಪಟ್ಟಿದ್ದು, ಎರಡು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಬ್ರೆಜಿಲ್‌ನಲ್ಲಿ 11519 ಜನರು, ಬೆಲ್ಜಿಯಂನಲ್ಲಿ 8707, ನೆದರ್‌ಲ್ಯಾಂಡ್‌ನಲ್ಲಿ 5456, ಕೆನಡಾದಲ್ಲಿ 4906, ಸ್ವೀಡನ್‌ನಲ್ಲಿ 3256, ಮೆಕ್ಸಿಕೊದಲ್ಲಿ 3573, ಸ್ವಿಟ್ಜರ್ಲೆಂಡ್‌ನಲ್ಲಿ 1837, ಐರ್ಲೆಂಡ್‌ನಲ್ಲಿ 1458 ಮತ್ತು ಪೋರ್ಚುಗಲ್‌ನಲ್ಲಿ 1144 ಜನರು ಸಾವನ್ನಪ್ಪಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights