ಶಿಕ್ಷಕರಿಗೆ ನಕಲಿ ಕೊರೊನಾ ಭೀತಿ ಹುಟ್ಟಿಸಿದ ಮಕ್ಕಳು : ಶಾಲೆ ರಜೆಗಾಗಿ ಹೈಡ್ರಾಮಾ..!

ಮಕ್ಕಳು ಶಿಕ್ಷಕರಿಗೇ ನಕಲಿ ಕೊರೊನಾ ಭೀತಿ ಹುಟ್ಟಿಸಿದ ಅಘಾತಕಾರಿ ಘಟನೆ ಚಾಮರಾಜ ನಗರದ ಹನೂರು ತಾಲೂಕಿನ ಗೊರಸಾಣೆ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಹೌದು.. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಮೀಪದ ಗೊರಸಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊರೊನಾ ವೈರಸ್ ಬಗ್ಗೆ ಶಿಕ್ಷಕರು ಅರಿವು ಮೂಡಿಸುತ್ತಿದ್ದ ವೇಳೆ ಮಕ್ಕಳು ಇದ್ದಕ್ಕಿದ್ದಂತೆ ವಾಂತಿ ಬೇಧಿ ನಾಟಕವಾಡಿದ್ದಾರೆ. 1ರಿಂದ 7ನೇ ತರಗತಿಯವರೆಗೆ 146 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಾರ್ಥನೆ ವೇಳೆ ಶಿಕ್ಷಕ ಪ್ರೇಮ್‍ಕುಮಾರ್ ಕೊರೊನಾದ ಲಕ್ಷಣಗಳ ಬಗ್ಗೆ ತಿಳಿಸುತ್ತಿದ್ದಂತೆ 20 ವಿದ್ಯಾರ್ಥಿಗಳು ಅಸ್ವಸ್ಥರಾದರು. ಈ ವೇಳೆ ಗಾಬರಿಗೊಂಡ ಶಿಕ್ಷಕರು ವೈದ್ಯರ ಬಳಿ ಮಕ್ಕಳನ್ನು ಕರೆದೊಯ್ದು ರಕ್ತದ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಯಾವುದೇ ಕೊರೊನಾ ಇರುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ವೇಳೆ ವೈದ್ಯರೇ ಮಕ್ಕಳ ಮನವೊಲಿಸಿ ಪ್ರಶ್ನಿಸಿದಾಗ ಕೆಲ ದಿನಗಳ ವರೆಗೆ ರಜೆ ಸಿಗುವ ಆಸೆಯಿಂದ ಮಕ್ಕಳು ಈ ರೀತಿ ನಾಟಕವಾಡಿರುವುದು ಬೆಳಕಿಗೆ ಬಂದಿದೆ. ಅಕ್ಷರಶ: ಕಲಿತು ವಿದ್ಯಾವಂತರಾಗಬೇಕಾದ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಸುಳ್ಳು ಹೇಳುವುದು ರೂಢಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯ.

ಇನ್ನೂ ವಿಶ್ವದೆಲ್ಲೆಡೆ ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ಜನ ಆತಂಕಗೊಂಡಿವ ಸಂದರ್ಭವನ್ನೇ ಬಳಸಿಕೊಳ್ಳುವ ಕಿಡಿಗೇಡಿಗಳು ರಾಜ್ಯದಲ್ಲಿ ವಿನಾಕಾರಣ ಕೊರೊನಾ ಭೀತಿ ಹುಟ್ಟಿಸುತ್ತಿದ್ದಾರೆ. ಇದರಿಂದ ಯಾರಿಗೇ ಕೊರೊನಾ ಲಕ್ಷಣಗಳು ಎನ್ನಲಾದ ಶೀತ, ನಗಡಿ, ಕೊಮ್ಮು, ವಾಂತಿ, ತಲೆ ನೋವು ಕಾಣಿಸಿಕೊಂಡರೂ ಅಂತವರಿಗೆ ಕೊರೊನಾ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಹೀಗಾಗಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಜನ ತಮ್ಮಲ್ಲೇ ಒಬ್ಬರಿಗೆ ಕೊರೊನಾ ಇರುವಂತೆ ವರ್ತಿಸುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಇಂಥವರ ವಿರುದ್ಧ ಆರೋಗ್ಯ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights