ಸರ್ಕಾರಿ ನೌಕರನ ಜವಬ್ದಾರಿಯ ಸಾರ್ವಜನಿಕ ಸೇವೆ

ಕೊರೋನ ಪಿಡುಗಿನ ಪರಿಣಾಮ ಬಡವರ ಅದರಲ್ಲೂ ದಿನನಿತ್ಯ ದುಡಿದು ತಿನ್ನುವರ ಬದುಕು ಸಾಗಿಸುವುದು ಕಷ್ಟಕರವಾಗಿರುವ ಸಂಧರ್ಭದಲ್ಲಿ ಅವರಿಗೆ ಅಗತ್ಯವಿರುವ ವಸ್ತುಗಳನ್ನು ಪಡೆಯುವುದೇ ಒಂದು ಸಾಹಸವಾದರೇ ಮತ್ತೊಂದು ಕಡೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಬೆಳೆದ ಬೆಳೆಗಳ ಕೇಳೋರೆ ಇಲ್ಲಾದಾಗಿದೆ ರೈತನ ಪಾಡು!
ಇಂತಹ ಸಂದರ್ಭದಲ್ಲಿ ಕೆ.ಆರ್‌.ಪೇಟೆ ತಾಲ್ಲೂಕಿನ ಶಿಕ್ಷಕರೊಬ್ಬರು ಬೆಳೆದ ರೈತನಿಗೆ ಹಾಗೂ ಊಟದ ಪದಾರ್ಥಗಳನ್ನು ಪಡೆಯಲು ಪರದಾಡುತ್ತಿರುವರಿಗೆ ತಮ್ಮ ಅಭಯ ಹಸ್ತ ಚಾಚಿದ್ದಾರೆ.
ತಾಲ್ಲೂಕಿನ ಚಿಕ್ಕೋನಹಳ್ಳಿ ಗ್ರಾಮದ ರೈತರೊಬ್ಬರು ಬಹಳ ಶ್ರಮದಿಂದ ಕುಂಬಳಕಾಯಿ ಬೆಳೆದಿದ್ದರು. ಬೆಳೆಯೇ ಕಟಾವಿಗೆ ಬರುವ ಮುನ್ನವೇ ವ್ಯಾಪಾರಿಗಳು ನನಗೆ ಕೊಡಿ ನನಗೆ ಕೊಡಿ ಎಂದು ದಂಪಾಲು ಬಿದ್ದಿದ್ದರು.
ಲಾಕ್ ಡೌನ್ ಪರಿಣಾಮ ಕೇಳೋರೆ ಇಲ್ಲದಾದರು. ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಕಟಾವು ಮಾಡಿ ಕಾಲುವೇ ಏರಿಯ ಮೇಲೆ ಲಾಟು ಹಾಕಿ ವ್ಯಾಪಾರಿಗಳಿಗೆ ಕಾದು ಕುಳಿತರು ಏನು ಪ್ರಯೋಜನ ವಾಗಲಿಲ್ಲ.
ಇದನ್ನು ತಮ್ಮ ಸ್ನೇಹಿತರ ಮೂಲಕ ತಿಳಿದ ಬಿ ಬಿ ಕಾವಲಿನ ಶಾಲೆಯ ಶಿಕ್ಷಕರಾದ ಸಂತೇಬಾಚಹಳ್ಳಿ ಎಸ್ ರಂಗಸ್ವಾಮಿರವರು ಆ ರೈತನಿಂದ ಖರೀದಿಸಿ ಕೆ ಅರ್ ಪೇಟೆ ಟೌನಿನ ಪೌರ ಕಾರ್ಮಿಕರ ಕಾಲೋನಿ, ರಾಮಯ್ಯ ಕಾಲೋನಿ, ಅಂಬೇಡ್ಕರ್ ನಗರ, ಕ್ರಿಶ್ಚಿಯನ್‌ ಕಾಲೋನಿ ಮುಂತಾದ ಕಡೆಗೆ ತಮ್ಮ ಮಕ್ಕಳೊಂದಿಗೆ ಉಚಿತವಾಗಿ ಹಂಚಿದ್ದಾರೆ.
ಇವರ ಈ ಸೇವೆಗೆ ಮಾನ್ಯ ತಹಶಿಲ್ದಾರರಾದ ಎಂ ಶಿವಮೂರ್ತಿರವರು ತಕ್ಷಣವೇ ಅನುಮತಿ ನೀಡಿದರೆ ಟಾಟ ಎಸಿಯ ಮಾಲೀಕರಾದ ಹೊಸಹೊಳಲು ಸತೀಶ್ ಕೈ ಜೋಡಿಸಿದ್ದಾರೆ.
ಪ್ರಚಾರಕ್ಕೆಂದೇ ದಾನ ಮಾಡುವರೇ ಹೆಚ್ಚಿರುವ ಸಮಾಜದಲ್ಲಿ ಯಾವುದೇ ಪ್ರಚಾರವನ್ಮು ಬಯಸದೆ ಗೌಪ್ಯವಾಗಿಯೇ ತಮ್ಮ ಸೇವೆ ಮಾಡಿರುವ ಇವರು ಇದೇ ರೀತಿ ರೈತರು ಬೆಳೆದು ಮಾರಾಟ ಮಾಡಲಾಗದ ಬೆಳೆಗಳನ್ನು ಖರೀದಿ ಮಾಡಿ ಅಗತ್ಯವಿರವರಿಗೆ ಹಂಚಲು ತಮ್ಮ ಸ್ನೇಹಿತರ ಪಡೆಯನ್ನೇ ಕಟ್ಟಿ ನಿಂತಿದ್ದಾರೆ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights