ಸುಳ್ ಸುದ್ದಿ: ಬೀದಿಯಲ್ಲಿ ನೋಟುಗಳ ರಾಶಿ, ಅದು ಇಟಲಿಯದ್ದೂ ಅಲ್ಲ; ಕೊರೋನಕ್ಕೆ ಸಂಬಂಧವು ಇಲ್ಲ

ಕೊರೊನ ಒಂದು ಕಡೆ ಸಾಂಕ್ರಾಮಿಕವಾಗಿ ದೇಶದೆಲ್ಲೆಡೆ ಮತ್ತು ಇಡೀ ವಿಶ್ವದಲ್ಲಿ ವ್ಯಾಪವಾಗಿ ಹಬ್ಬುತ್ತಿರುವುದು ದೊಡ್ಡ ಸಮಸ್ಯೆಯಾಗಿದ್ದರೆ, ಅದರ ಜೊತಗೆ ಕೊರೊನ ನೆಪದಲ್ಲಿ ಹಬ್ಬುತ್ತಿರುವ ಸುಳ್ಳು ಸುದ್ದಿಗಳು ಸಮಸ್ಯೆಯನ್ನು ಉಲ್ಬಣಗೊಳಿಸಿವೆ. ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ, ರಸ್ತೆಗಳಲ್ಲಿ ನೋಟುಗಳು ಬಿದ್ದು ಒದ್ದಾಡುತ್ತಿರುವ ಫೋಟೋ ಟ್ವೀಟ್ ಮಾಡಿ, ಇದು ಇಟಲಿಯದ್ದು, ಅಲ್ಲಿ ಜನ ಕೊರೊನ ಭೀತಿಗೆ ತುತ್ತಾಗಿ, ಬದುಕಿದರೆ ಸಾಕೆಂದು ಬೇಸರದಿಂದ ತಮ್ಮ ಹತ್ತಿರವಿದ್ದ ದುಡ್ಡನ್ನೆಲ್ಲಾ ರಸ್ತೆಗೆ ಎಸೆದಿದ್ದಾರೆ ಎಂಬ ಪೋಸ್ಟ್ ಟ್ವಿಟ್ಟರ್ ಮತ್ತು ಫೇಸ್ಬುಕ್ ನಲ್ಲಿ ಹರಿದಾಡುತ್ತಿದೆ.

इटली में लोगों ने अपनी दौलत सड़कों पर फेंक दी।उनका कहना है कि ये किसी काम की नहीं।

Posted by Chandan Kumar Chaudhary on Monday, March 30, 2020

ಇಟಲಿಯಲ್ಲಿ ಇಲ್ಲಿಯವರೆಗೂ ಕೊರೋನದಿಂದ 12 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿರುವ ಅಂಶವನ್ನು ಬಳಸಿಕೊಂಡು ಇಂತಹ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹರಡಲಾಗುತ್ತಿದೆ.

 

ನಿಜಾಂಶ: ಈ ಫೋಟೋಗಳಿಗೂ ಕೊರೋನಕ್ಕೂ ಯಾವುದೇ ಸಂಬಂಧ ಇಲ್ಲ. ಒಂದು ಫೋಟೋ ವೆನಿಜ್ಯುಯೇಲಾದ ಮೆರಿಡಾದಲ್ಲಿ ಮಾರ್ಚ್ 2019ರಲ್ಲಿ ಬ್ಯಾಂಕ್ ಲೂಟಿ ಮಾಡಿದ್ದಾಗ ನಡೆದ ಘಟನೆ ಇಡು.

ಮತ್ತೊಂದು ಫೋಟೋ 2018 ರಲ್ಲಿ ವೆನಿಜ್ಯುಯೇಲಾದಲ್ಲಿ ಹಳೆ ನೋಟುಗಳನ್ನು ರದ್ದುಮಾಡಿ ಹೊಸ ನೋಟುಗಳನ್ನು ಪರಿಚಯಿಸಿದ್ದ ಸಂದರ್ಭ ಎಂದು ತಿಳಿದು ಬಂದಿದೆ.

https://twitter.com/myteks/status/1105276080146038785

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights