ಹಾಟ್ಸ್ಪಾಟ್ಗಳಿಗೆ ಮಸೀದಿಯ ಹೆಸರಿಟ್ಟು ಎಡವಟ್ಟು ಮಾಡಿಕೊಂಡ ಯುಪಿ ಸರ್ಕಾರ!
ಈಗಾಗಲೇ ದೇಶದಲ್ಲಿ ಕೊರೊನಾ ಸೋಂಕು ಹರಡಿರುವುದಕ್ಕೆ ಕೋಮು ಬಣ್ಣ ಹಚ್ಚಲಾಗಿದೆ. ಈ ನಡುವೆ ಉತ್ತರಪ್ರದೇಶದ ರೆಡ್ ಝೋನ್ ಗಳಿಗೆ ಮಸೀದಿಯ ಹೆಸರಿಟ್ಟು ಎಡವಟ್ಟು ಮಾಡಿಕೊಂಡಿದೆ ಯುಪಿ ಸರ್ಕಾರ.
ಹೌದು… ಸದಾ ಸುದ್ದಿಯಲ್ಲಿರುತ್ತಿದ್ದ ಯೋಗಿ ಆದಿತ್ಯನಾಥ್ ಸರಕಾರ, ಸದ್ಯ ಮತ್ತೊಂದು ವಿವಾದಾತ್ಮಕ ನಿರ್ಧಾರ ತೆಗೆದುಕೊಂಡು ವೃಥಾ ಸಮರ್ಥನೆ ಮಾಡಿಕೊಂಡಿದೆ. ಉತ್ತರ ಪ್ರದೇಶದ ಹದಿನೆಂಟು ಹಾಟ್ ಸ್ಪಾಟ್ ಗಳ ಪೈಕಿ ಎಂಟು ಹಾಟ್ ಸ್ಪಾಟ್ ವಾರ್ಡ್ ಗಳಿಗೆ ಮಸೀದಿಯ ಹೆಸರನ್ನು ಇಟ್ಟು, ಸಾರ್ವಜನಿಕರ ಆಕ್ರೋಶಕ್ಕೆ ಯೋಗಿ ಸರಕಾರ ಗುರಿಯಾಗಿದೆ. ಜೊತೆಗೆ ಇದು ಉದ್ದೇಶಪೂರ್ವಕ ನಡೆಯಲ್ಲ ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟನೆಯನ್ನು ನೀಡಿದ್ದಾರೆ.
“ಮಹಾರಾಷ್ಟ್ರದ ನಾಸಿಕ್ ನಿಂದ ವಿಶೇಷ ರೈಲು, ಲಕ್ನೋಗೆ ಬರಲಿದೆ. ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ನಾವು ಸಜ್ಜಾಗಿದ್ದೇವೆ. ಕೋವಿಡ್ 19 ಪರೀಕ್ಷೆಯಲ್ಲಿ ಅವರೆಲ್ಲಾ ನೆಗೆಟೀವ್ ಆದರೆ, ಅವರಿಗೆ ಉದ್ಯೋಗವನ್ನೂ ನೀಡಲಿದ್ದೇವೆ” ಎಂದು ಹೇಳಿದ್ದ ಯೋಗಿ ಸರಕಾರ, ಹಾಟ್ ಸ್ಪಾಟ್ ಗೆ ಮಸೀದಿಯ ಹೆಸರನ್ನು ಇಟ್ಟು ಎಡವಟ್ಟು ಮಾಡಿಕೊಂಡಿದೆ. ಪಾಸಿಟೀವ್ ಕೇಸ್ ಗಳು ಆ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವುದರಿಂದ ಈ ನಿರ್ಧಾರ, ಎನ್ನುವುದು ಅಲ್ಲಿನ ಅಧಿಕಾರಿಗಳ ಸ್ಪಷ್ಟನೆ ನೀಡಿದ್ದಾರೆ. ಆದರೆ ಇದು ಕೋಮು ಬಣ್ಣ ಹಚ್ಚೋ ಕೆಲಸ ೆಂದು ಅಲ್ಪಸಂಖ್ಯಾತರು ಹಾಗೂ ಕಾಂಗ್ರೆಸ್ ನಾಯಕರು ಕೆಂಡ ಕಾರಿದ್ದಾರೆ.
‘ಕೊರೊನಾ ನಿರ್ವಹಣೆ ಸಾಧ್ಯವಾಗದೇ ಯೋಗಿ ಸರ್ಕಾರ ಕೋಮು ಬಣ್ಣ ಹಚ್ಚು ಹೊರಟಿದೆ’ ಎಂದು ರಾಜ್ಯದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಲಲ್ಲೂ ಹೇಳಿದ್ದಾರೆ.
ಸದರ್ ಬಜಾರ್ ಎನ್ನುವ ಹೆಸರಿನ ಪ್ರದೇಶಕ್ಕೆ ಈಗ ‘ಮಸೀದಿ ಆಲಿ ಜಾನ್ ಮತ್ತು ಸುತ್ತಮುತ್ತಲ ಪ್ರದೇಶಗಳು’, ವಾಜ್ರಿಗಂಜ್ ಪ್ರದೇಶಕ್ಕೆ ‘ಮೊಹಮದೀಯ ಮಸೀದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು’, ತ್ರಿವೇಣಿ ನಗರಕ್ಕೆ ‘ನಜರ್ ಬಾಗ್ ಮಸೀದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು” ಎಂದು, ಉತ್ತರ ಪ್ರದೇಶದ ಆರೋಗ್ಯ ಇಲಾಖೆ ಹೊಸ ಹೆಸರನ್ನು ಇಟ್ಟಿದೆ. ಇದು ಭಾರೀ ಆಕ್ರೋಶಕ್ಕೆ ಗುರಿಯಾದರೂ ಅಧಿಕಾರಿಗಳು ಇದನ್ನ ಸರಮರ್ಥಿಸಿಕೊಂಡಿದ್ದಾರೆ.

