ಫ್ಯಾಕ್ಟ್‌ಚೆಕ್: ‘ಅದಾನಿ ಕಾಪಾಡಲು ನೂರೊಂದು ದಾರಿ’ ಎಂಬ ಪುಸ್ತಕವನ್ನು ಪ್ರಧಾನಿ ಮೋದಿ ಓದುತ್ತಿರುವುದು ನಿಜವೇ?
ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ “101 Ways to Save Adani” ( ಅದಾನಿಯನ್ನು ಕಾಪಾಡಲು ನೂರೊಂದು ದಾರಿ) ಎಂಬ ಪುಸ್ತಕವನ್ನು ಓದುತ್ತಿರುವುದನ್ನು ಕಾಣಬಹುದು. ಕಾಂಗ್ರೆಸ್ ಪಕ್ಷದ ಅಧಿಕೃತ ಫೇಸ್‌ಬುಕ್ ಪೇಜ್‌ಗಳಲ್ಲಿ ಈ ಚಿತ್ರವನ್ನು ಯಾವಾಗಲೂ ಚೀಟ್ ಕೋಡ್ ಅನ್ನು ಕೈಯಲ್ಲಿ ಇಟ್ಟುಕೊಳ್ಳಿ ಪ್ರಧಾನಿಗಳೇ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
Always keeping the cheat-code handy… pic.twitter.com/x26EvvtPby
— Bihar Congress (@INCBihar) March 23, 2023
ಬಿಹಾರ, ತೆಲಂಗಾಣ ಮತ್ತು ಕಾಂಗ್ರೆಸ್ ಸೇವಾದಳ ಟ್ವಿಟರ್ ಹ್ಯಾಂಡಲ್‌ನಿಂದ ಈ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ.
Always keeping the cheat-code handy…🤥📑 pic.twitter.com/v9W2jrtXJp
— Telangana Pradesh Congress Sevadal (@SevadalTL) March 22, 2023
ಹಾಗಿದ್ದರೆ ಪ್ರಧಾನಿ ನರೇಂದ್ರ ಮೋದಿಯವರು “101 Ways to Save Adani” ಎಂಬ ಪುಸ್ತಕವನ್ನು ಓದುತ್ತಿದ್ದರೇ? ಕಾಂಗ್ರೆಸ್ ತನ್ನ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಪ್ರಧಾನಿ ನರೇಂದ್ರ ಮೋದಿ ಪುಸ್ತಕವನ್ನು ಓದುತ್ತಿರುವ ಅದೇ ರೀತಿಯ ಮೂಲ ಚಿತ್ರವೊಂದು ಲಭ್ಯವಾಗಿದೆ. ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್‌ನ ವೆಬ್‌ಸೈಟ್‌ನ 2014 ರ ಲೇಖನದಲ್ಲಿ ಮೂಲ ಚಿತ್ರವನ್ನು ಪ್ರಕಟಿಸಿದೆ. ಲೇಖನದ ಪ್ರಕಾರ, “ಭಾರತದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿ ಅವರು “ಗೆಟ್ಟಿಂಗ್ ಇಂಡಿಯಾ ಬ್ಯಾಕ್ ಆನ್ ಟ್ರ್ಯಾಕ್: ಆನ್ ಆಕ್ಷನ್ ಅಜೆಂಡಾ ಫಾರ್ ರಿಫಾರ್ಮ್” ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಬಿಬೆಕ್ ಡೆಬ್ರಾಯ್, ಆಶ್ಲೇ ಜೆ. ಟೆಲ್ಲಿಸ್ ಮತ್ತು ರೀಸ್ ಟ್ರೆವರ್ ಭಾಗವಹಿಸಿದ್ದರು, ಗೆಟ್ಟಿಂಗ್ ಇಂಡಿಯಾ ಬ್ಯಾಕ್ ಆನ್ ಟ್ರ್ಯಾಕ್ (ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ ಮತ್ತು ರಾಂಡಮ್ ಹೌಸ್ ಇಂಡಿಯಾದಿಂದ ಪ್ರಕಟಿಸಲಾಗಿದೆ) ದೇಶವನ್ನು ಉನ್ನತ, ಸುಸ್ಥಿರ ಬೆಳವಣಿಗೆ ಮತ್ತು ಅಂತರಾಷ್ಟ್ರೀಯ ಬೆಳವಣಿಗೆಗೆ ಹೇಗೆ ಕೊಂಡೊಯ್ಯುವುದು ಎಂಬುದರ ಕುರಿತು ಭಾರತದ ಕೆಲವು ಅತ್ಯಂತ ನಿಪುಣ ವಿದ್ವಾಂಸರಿಂದ ವಿಶ್ಲೇಷಣೆ ಮತ್ತು ಶಿಫಾರಸುಗಳನ್ನು ಒಳಗೊಂಡಿದೆ.
ಈ ಪುಸ್ತಕ ಬಿಡುಗಡೆಯ ವಿಡಿಯೊವನ್ನು ಜೂನ್ 2014 ರಲ್ಲಿ PMO ಇಂಡಿಯಾ ಮತ್ತು ನರೇಂದ್ರ ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇಲ್ಲಿ ಈ ವಿಡಿಯೋಗಳಲ್ಲಿ ಪ್ರಧಾನಿ ಮೋದಿಯವರ ಕೈಯಲ್ಲಿ “ಗೆಟ್ಟಿಂಗ್ ಇಂಡಿಯಾ ಬ್ಯಾಕ್ ಆನ್ ಟ್ರ್ಯಾಕ್” ಪುಸ್ತಕವನ್ನು ಸಹ ಕಾಣಬಹುದು.
ಪ್ರಧಾನಿ ನರೇಂದ್ರ ಮೋದಿಯವರು “ಗೆಟ್ಟಿಂಗ್ ಇಂಡಿಯಾ ಬ್ಯಾಕ್ ಆನ್ ಟ್ರ್ಯಾಕ್” ಪುಸ್ತಕವನ್ನು 2014ರಲ್ಲಿ ಬಿಡುಗಡೆ ಮಾಡಿ ಅದನ್ನು ತಿರುವಿ ಹಾಕುತ್ತಿರುವ ಚಿತ್ರವನ್ನು ಎಡಿಟ್ ಮಾಡು ಮೂಲಕ “101 Ways to Save Adani” ಎಂಬ ಪುಸ್ತವನ್ನು ಓದುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಧ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಆಧಾರ್ ನಂಬರ್ ಮತ್ತು ಪಾನ್ ಕಾರ್ಡ್ ಜೋಡಣೆ 2024ರ ವರೆಗೂ ವಿಸ್ತರಣೆಯಾಗಿದೆಯೇ? ಇಲ್ಲಿದೆ ಡೀಟೇಲ್ಸ್