ನೀಲಿ ಚಿತ್ರ ಪ್ರಕರಣ : ರಾಜ್ ಕುಂದ್ರಾಗೆ ಜು.27 ರವರೆಗೆ ಬಂಧನ ಅವಧಿ ವಿಸ್ತರಣೆ..!

ನೀಲಿ ಚಿತ್ರ ಪ್ರಕರಣದಲ್ಲಿ ಬಂಧಿಸಲಾದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರ ಬಂಧನದ ಅವಧಿಯನ್ನು ಜು.27 ರವರೆಗೆ ವಿಸ್ತರಣೆ ಮಾಡಲಾಗಿದೆ.

ರಾಜ್ ಕುಂದ್ರಾ ಅವರನ್ನು ಆನ್‌ಲೈನ್ ಬೆಟ್ಟಿಂಗ್‌ ಮತ್ತು ನೀಲಿ ಚಿತ್ರ ರಚನೆ ಹಾಗೂ ಅದರ ಬಿಡುಗಡೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಅಶ್ಲೀಲ ಚಿತ್ರಗಳ ರಚನೆ ಮತ್ತು ಕೆಲವು ಆ್ಯಪ್‌ಗಳ ಮೂಲಕ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ನ್ಯಾಯಾಲಯ ಉದ್ಯಮಿ ರಾಜ್ ಕುಂದ್ರಾ ಅವರ ಪೊಲೀಸ್ ಕಸ್ಟಡಿಯನ್ನು ಜುಲೈ 27 ರವರೆಗೆ ವಿಸ್ತರಿಸಿದೆ.

ನಟಿ ಶಿಲ್ಪಾ ಶೆಟ್ಟಿಯ ಪತಿ ಕುಂದ್ರಾ ಅವರನ್ನು ಜುಲೈ 19 ರ ರಾತ್ರಿ ನಗರ ಪೊಲೀಸ್ ಅಪರಾಧ ವಿಭಾಗವು ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕೇಸ್ ದಾಖಲಿಸಿ ಬಂಧಿಸಿತ್ತು.

ಶುಕ್ರವಾರ ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಪೊಲೀಸರು ಆತನ ಬಂಧನವನ್ನು ವಿಸ್ತರಿಸಲು ಕೋರಿದರು. ಹೀಗಾಗಿ ನ್ಯಾಯಾಲಯ ಕುಂದ್ರಾ ಬಂಧನ ಅವಧಿಯನ್ನು ವಿಸ್ತರಿಸಿದೆ.

35 ಹಾಟ್‌ಶಾಟ್‌ಗಳು, 51 ಕ್ಲಿಪ್‌ಗಳು ಹೀಗೆ ಸುಮಾರು 4 ಟಿಬಿ ಬೃಹತ್ ಸಂಗ್ರಹವನ್ನು ಕುಂದ್ರಾ ಅವರಿಂದ ಪೊಲೀಸರು ವಶಪಡಿಸಿಕೊಂಡಿರುವ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಜೊತೆಗೆ ಈ ಎಲ್ಲಾ ಕ್ಲಿಪ್‌ಗಳನ್ನು ಇಂಟರ್‌ನೆಟ್‌ಗೆ ಅಪ್‌ಲೋಡ್ ಮಾಡಲಾಗಿದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ

ಅಶ್ಲೀಲ ವಿಷಯ ಬಹಿರಂಗವಾಗುತ್ತಿದ್ದಂತೆ ಗೂಗಲ್ ಮತ್ತು ಆಪಲ್ ತಮ್ಮ ಡಿಜಿಟಲ್ ಖಾತೆಗಳಲ್ಲಿನ ‘ಹಾಟ್‌ಶಾಟ್‌ಗಳನ್ನು’ ನಿಷ್ಕ್ರಿಯಗೊಳಿಸಿ ಕುಂದ್ರಾ ಅವರು “ಪ್ಲ್ಯಾನ್ ಬಿ” ಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಅವರಲ್ಲಿ ವಹಿವಾಟಿನ ದಾಖಲೆಯೂ ಇದೆ ಎಂದು ಪೊಲೀಸರು ಹೇಳಿದ್ದಾರೆ. ಅಶ್ಲೀಲ ವಿಷಯದ ಮಾರಾಟದಿಂದ ಬಂದ ಇದುವರೆಗೆ 7.5 ಕೋಟಿ ರೂ. ಹಣವನ್ನು ಆನ್‌ಲೈನ್ ಬೆಟ್ಟಿಂಗ್‌ಗೆ ಬಳಸಲಾಗಿದೆ ಎಂದು ಶಂಕಿಸಿದ್ದಾರೆ.

ಹೀಗೆ ಅಶ್ಲೀಲ ಫೋಟೋಗಳಿಂದ ತಯಾರಿಸುವ ಮತ್ತು ಮಾರಾಟ ಮಾಡುವ ಅಕ್ರಮ ಚಟುವಟಿಕೆಯಿಂದ 45 ವರ್ಷದ ಉದ್ಯಮಿ ಆರ್ಥಿಕವಾಗಿ ಲಾಭ ಗಳಿಸುತ್ತಿದ್ದಾನೆ.

ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿದ್ದು, ಅವರವ್ಯವಹಾರಗಳು ಮತ್ತು ವಹಿವಾಟುಗಳನ್ನು ಸಹ ಪರಿಶೀಲಿಸಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Spread the love

Leave a Reply

Your email address will not be published. Required fields are marked *