14 ದಿನಗಳ ಕೊರೊನಾ ನಿಗಾ ವಹಿಸುವ ಅವಧಿ ಮುಂದೂಡಿದ ಸಚಿವ ಸುರೇಶ್ ಕುಮಾರ್
ರಾಜ್ಯದಲ್ಲಿ ಮುಜಾಗೃತ ದೃಷ್ಟಿಯಿಂದ 14 ದಿನಗಳ ಕಾಲ ನಿಗಾ ವಹಿಸುವ ಅವಧಿಯನ್ನು 28 ದಿನಗಳ ವರೆಗೆ ಮುಂದಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಹೌದು… ಕೆಲ ರಾಜ್ಯಗಳಲ್ಲಿ ಮತ್ತು ದೇಶಗಳಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆದಮೇಲೆ ಪುನ: ಸೋಂಕು ಕಾಣಿಸಿಕೊಳ್ಳುವ ಪ್ರಕರಣಗಳು ದಾಖಲಾಗುತ್ತಿವೆ. ಇನ್ನೂ ಕೆಲವೆಡೆ ಸೋಂಕಿತರ ಮೂಲ ಕಂಡುಹಿಡಿಯುವುದೇ ದೊಡ್ಡ ತಲೆನೋವಾಗಿದೆ. ಮತ್ತೊಂದು ಕಡೆ ರೋಗ ಲಕ್ಷಣಗಳು ಇಲ್ಲದೇ ಸೋಂಕು ಹರಡಿರುವುದು ಕಂಡು ಬರುತ್ತಿದೆ.
ಹೀಗಾಗಿ ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಇದೀಗ 14 ದಿನಗಳ ಕಾಲ ಕೋವಿಡ್ 19 ರೋಗ ಲಕ್ಷಣ ಗಮನಿಸಲು ಸೋಂಕಿತರ ಮೇಲೆ ನಿಗಾ ವಹಿಸಲು ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತಿತ್ತು. ಆದರೆ ಇನ್ಮುಂದೆ ಕ್ವಾರಂಟೈನ್ ಅವಧಿ 28 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ರಾಜ್ಯದಲ್ಲಿ ಇದುವರೆಗೆ ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದ್ದ 1330 ಮಂದಿಯನ್ನು ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರ ಪೈಕಿ 40 ಮಂದಿಗೆ ಕೊರೊನಾ ವೈರಸ್ ಇರುವುದು ದೃಢವಾಗಿದೆ. ಇನ್ನು ಅನೇಕರು ಮಾಹಿತಿ ಕೊಟ್ಟಿಲ್ಲ. ಅವರನ್ನು ಹುಡುಕಿ ಪರೀಕ್ಷೆಗೆ ಒಳಪಡಿಸುವ ಕಾರ್ಯಾಚರೆ ಮುಂದುವರೆಸಲಾಗಿದೆ ಎಂದು ಹೇಳಿದರು.