20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ…!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ದೇಶದ 130 ಕೋಟಿ ಜನತೆಯನ್ನುದ್ದೇಶಿಸಿ ಮಾತನಾಡಿ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ.

ಹೌದು… ಭಾರತದ ಆರ್ಥಿಕ ವ್ಯವಸ್ಥೆ ಸದೃಢಗೊಳಿಸುವ ನಿಟ್ಟಿನಲ್ಲಿ  20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ.  ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ಸ್ವಾವಲಂಭಿ ಭಾರತಕ್ಕೆ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಈ  6 ವರ್ಷದಲ್ಲಿ ಹಲವಾರು ಬದಲಾವಣೆಗಳು ಆಗಿವೆ. 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್ ನಲ್ಲಿ ಕೈಗಾರಿಕೆಗಳಿಗೆ, ಲ್ಯಾಂಡ್ , ಲೇಬರ್, ಗೃಹ, ಕುಟೀರು ಉದ್ಯೋಗಿಗಳಿಗೆ, ಲಘು ಉದ್ಯೋಗಿಗಳಿಗೆ, ರೈತರಿಗೆ, ಕಾರ್ಮಿಕರಿಗೆ, ಸಣ್ಣ ಉದ್ಯಮಗಳಿಗೆ, ಭಾರತೀಯ ಉದ್ಯೋಗದಾತರಿಗೆ ಈ ಪ್ಯಾಕೇಜ್ ನೆರವಾಗಲಿದೆ. ದೇಶದ ಆರ್ಥಿಕ ಸಂಕಷ್ಟದಲ್ಲಿರುವ ಎಲ್ಲಾ ಕ್ಷೇತ್ರದ ಜನರಿಗೆ ಈ ಪ್ಯಾಕೇಜ್ ಸಹಕಾರಿಯಾಗಲಿದೆ.

ಇದು 2020 ದೇಶದ ಅಭಿವೃದ್ಧಿ ಯಾತ್ರೆಗೆ ಪೂರಕವಾಗಲಿದೆ. ದೇಶದ ವಿಕಾಸಕ್ಕೆ ಪೂರಕವಾಗಿದೆ. ದೇಶದ ಉದ್ಯೋಗಿಗಳ ಬಲ ಸಮರ್ಥನೆಗೆ ಸಹಯಕವಾಗಲಿದೆ. ಭಾರತ ಬದಲಾವಣೆಗೆ ಮತ್ತೊಂದು ಹಂತ ತಲುಪಬೇಕಾಗಿದೆ. ಎಲ್ಲವೂ ಬಂದ್ ಇದ್ದಾಗಲೂ ರೈತರಿಗೆ ಆರ್ಥಿಕ ನೆರವು ಸಿಕ್ಕಿದೆ. ತೆರಿಗೆ ಪಾವತಿಸುತ್ತಿರುವ ವರ್ಗಕ್ಕೆ ಈ ಪ್ಯಾಕೇಜ್ ನೆರವಾಗಲಿದೆ.  ಇವತ್ತು ಭಾರತ ಎಲ್ಲಾ ಸ್ಪರ್ಧೆಯಲ್ಲೂ ಗೆಲ್ಲಬೇಕು ಎನ್ನುವ ಬೇಡಿಕೆ ಇದೆ. ಎಲ್ಲ ಕ್ಷೇತ್ರಕ್ಕೂ ಸಹಕಾರಿಯಾಗುವಂತಹ ಪ್ಯಾಕೇಜ್ ಇದು ಎಂದಿದ್ದಾರೆ.

ಜೊತೆಗೆ ಹೊಸ ನಿಯಮಗಳೊಂದಿಗೆ 4ನೇ ಲಾಕ್ ಡೌನ್ ಘೋಷಣೆಯಾಗಲಿದೆ. ಇದರ ನಿರ್ಣಯವನ್ನು ಮೇ 18ರ  ಒಳಗೆ ಮಾಡಲಾಗುವುದು. ನನಗೆ ಸಂಪೂರ್ಣವಾಗಿ ಭರವಸೆ ಇದೆ. ನಾವು ಕೊರೊನಾ ವಿರುದ್ಧ ಹೋರಾಡುತ್ತೇವೆ. ಕೊರನಾವಿಲ್ಲದ ಜೀವನ ಮಾಡುತ್ತೇವೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಆರಂಭಿಸಲು ಮುಂದಾಗಿನಿಂದ ಮೋದಿ ಇದುವರೆಗೆ ಮಾರ್ಚ್‌ 19, ಮಾರ್ಚ್‌ 24, ಏಪ್ರಿಲ್‌ 3, ಏಪ್ರಿಲ್‌ 14 ರಂದು ನಾಲ್ಕು ಬಾರಿ ಭಾಷಣ ಮಾಡಿದ್ದರು. ಈಗ ಮತ್ತೊಮ್ಮೆ 5ನೇ ಬಾರಿ ಭಾಷಣ ಮಾಡಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights