3 ವರ್ಷದ ಮಗುವಿಗೆ ಚಾಕುವಿನಿಂದ ಹೊಡೆದ ಅಂಗನವಾ ಸಹಾಯಕಿ : ಕಾರಣ ಕೇಳಿದ್ರೆ ಕೋಪ ಬರೋದು ಗ್ಯಾರೆಂಟಿ..?
ಈ ವಿಡಿಯೋದಲ್ಲಿರುವ ಪುಟ್ಟ ಮಗುವನ್ನ ನೋಡಿದ್ರೆ ಹೊಡಿಯೋದಿರಲಿ ಬೈಯೋಕು ಕೂಡ ಯೋಚನೆ ಮಾಡುಬೇಕು. ಹೀಗಿರುವಾಗ ಇಲ್ಲೊಬ್ಬ ರಾಕ್ಷಸಿ ಮಾಡಿದ ಕೆಲಸ ಕೇಳಿದ್ರೆ ನಿಮಗೆಲ್ಲಾ ಕೋಪ ನೆತ್ತಗೇರದೇ ಇರದು.
ಅಂಗನವಾಡಿಯಲ್ಲಿ ಮೂತ್ರ ಮಾಡಿದ್ದಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಕೆರೆಮಕ್ಕಿ ಗ್ರಾಮದಲ್ಲಿ ನಡೆದಿದೆ.
ಚಡ್ಡಿಯಲ್ಲಿ ಮೂರು ವರ್ಷದ ಮಗು ಸೂಸು ಮಾಡಿದ್ದಕ್ಕೆ ಅಂಗನವಾಡಿ ಸಹಾಯಕಿ ಚಾಕುವಿನಿಂದ ಹೊಡೆದು ಹಲ್ಲೆ ಮಾಡಿದ್ದಾಳೆ. ಅಮಿತ್ (3) ಹಲ್ಲೆಗೊಳಗಾದ ಮಗು. ಘಟನೆಯಲ್ಲಿ ಗಂಭೀರ ಗಾಯಗೊಂಡ ಮಗುವನ್ನ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಗುವಿನ ತಲೆಗೆ ಮೂರು ಹೊಲಿಗೆ ಹಾಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಶಿಕ್ಷಕಿ ಮಾಲ ಹಾಗೂ ಆಯಾ ಮಂಜುಳ ವಿರುದ್ಧ ದೂರು ದಾಖಲಾಗಿದೆ. ಶಿಕ್ಷಕಿ ಹಾಗೂ ಸಹಾಯಕಿ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.