BSY Budget : ಬೆಂಗಳೂರು ನಗರಕ್ಕೆ ಸಿಎಂ ಭರ್ಜರಿ ಕೊಡುಗೆ : ಪ್ರಯಾಣಿಕರಿಗೆ ಖುಷಿ ವಿಚಾರ
ಇಂದು ಬಿಎಸ್ ವೈ 7ನೇ ಬಜೆಟ್ ಮಂಡನೆ ಮಾಡಿ ಪೂರ್ಣಗೊಳಿಸಿದ್ದು ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದ್ದಾರೆ.
2020-21 ಬಜೆಟ್ ನಲ್ಲಿ ಸಿಎಂ ಬಿಎಸ್ ವೈ ಬೆಂಗಳೂರಿಗೆ 8 ಸಾವಿರ ಕೋ. ಅನುದಾನ ನೀಡಿದ್ದಾರೆ. ಘನತ್ಯಾಜ್ಯ ನಿವಾರಣೆ, ಕೆರೆಗಳ ಒತ್ತುವರಿ ತಡೆಗೆ ಕ್ರಮ ಕೈಗೊಳ್ಳುವ ಜೊತೆಗೆ ಕೆರೆಗಳ ಅಭಿವೃದ್ಧಿಗೆ 317 ಕೋ. ರೂ. ಶುಭ್ರ ಬೆಂಗಳೂರು ಯೋಜನೆ ಜಾರಿ, ಬಿಡದಿಯಲ್ಲಿ ತ್ಯಾಜ್ಯ ವಿದ್ಯುತ್ ಉತ್ಪಾದನೆ, ಬೆಂಗಳೂರಲ್ಲಿ 4 ವಿದ್ಯುತ್ ಚಿತಾಗಾರ ಸ್ಥಾಪನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಇನ್ನೂ ಬೆಂಗಳೂರಿನ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಮೇಟ್ರೋ ಮಾರ್ಗಕ್ಕೆ ಮತ್ತು ರಸ್ತೆಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. 14 ಸಾವಿರ ಕೋ. ವೆಚ್ಚದಲ್ಲಿ ರಿಂಗ್ ರೋಡ್, ಮೆಟ್ರೋ ಮಾರ್ಗಗಳ ವಿಸ್ತರಣೆ, ಹೊರವರ್ತುಲ ರಸ್ತೆಯಲ್ಲಿ ಮೆಟ್ರೋ, ಸಿಲ್ಕ್ ಬೋರ್ಡ್ನಿಂದ ಏರ್ಪೋರ್ಟ್ಗೆ, ಸಂಚಾರ ದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಂಡಿದ್ದಾರೆ.
ಸಬ್ ಅರ್ಬನ್ ರೈಲು ಯೋಜನೆಗೆ 500 ಕೋ, ಬೈಯಪ್ಪನಹಳ್ಳಿ-ಚನ್ನಸಂದ್ರ ಜೋಡಿ ರೈಲ್ವೇ, ಶೇ.50ರಷ್ಟು ರಾಜ್ಯದ ಪಾಲು ನೀಡ್ತೀವಿ. 500 ಎಲೆಕ್ಟ್ರಿಕ್ ಬಸ್ಗಳ ಖರೀದಿಗೆ ನೆರವು, ಮೆಟ್ರೋ ಫೀಡರ್ಗೆ 90 ಎಲೆಕ್ಟ್ರಿಕ್ ಬಸ್, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸ್ ಯೋಜನೆ, ಬೆಂಗಳೂರಲ್ಲಿ ಅಂಡರ್ಗ್ರೌಂಡ್ ಪಾರ್ಕಿಂಗ್ ಜೊತೆಗೆ ಇತರೆ ಯೋಜನೆಗಳನ್ನು ಪ್ರಸ್ತಾಪ ಮಾಡಿದ್ದಾರೆ.