Corona in state : ವಿಜಯಪುರ ಇಗ hot spot, ಕಲಬುರ್ಗಿಯಲ್ಲಿ ಮತ್ತೆ 5 ಕೇಸ್….

ವಿಜಯಪುರ ಇಗ ಕರೋನಾ ಸೋಂಕು ತಗುಲಿರುವವರ hot spot ಆಗಿ ಮಾರ್ಪಟ್ಟಿದೆ.  ವಿಜಯಪುರದಲ್ಲಿ ಒಂದೇ ದಿನ 11 ಮಂದಿಗೆ ಕೊರೋನಾ ಸೋಂಕು ದೃಏವಾಗುವ ಮೂಲಕ ರಾಜ್ಯದಲ್ಲಿ ಸೋಂಕಿತ ಸಂಖ್ಯೆ ಏರುಮುಖವಾಗಿದೆ.

ಕಳೆದ 24 ತಾಸಿನಲ್ಲಿ ರಾಜ್ಯದಲ್ಲಿ ಒಟ್ಟು 18 ಮಂದಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ವಿಜಯಪುರ ಹೊರತಾಗಿ ಕಲಬುರ್ಗಿಯಲ್ಲಿ 5 ಮತ್ತು ಗದಗ, ಬೀದರಿನಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಈ ಬೆಳವಣಿಗೆಯೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 280ಕ್ಕೇರಿದೆ. ಈವರಗೆ 112 ಮಂದಿ ಕೊರೋನಾ ಸೋಮಕಿನಿಂದ ಗುಣಮುಖರಾಗಿದ್ದರೇ, 16 ಮಂದಿ ಸಾವಿಗೀಡಾಗಿದ್ದಾರೆ.

ಇದೆಲ್ಲದರ ನಡುವೆ ಬೆಂಗಳೂರಿನಲ್ಲಿ ಸೋಂಕಿತರಿಗಿಂದ ಸೋಂಕು ಕಳೆದುಕೊಂಡವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. 40 ಮಂದಿ ಸೋಂಕಿತರಿದ್ದರೇ ಇಲ್ಲಿ 45 ಮಂದಿ ಗುಣಮುಖರಾಗಿದ್ದಾರೆ. ನಾಲವರು ಮೃತಪಟ್ಟಿದ್ದಾರೆ.

ಚಿಕಿತ್ಸೆ ಪಡೆದವರಲ್ಲಿ ಕರೋನಾ ಸೋಂಕಿತರು ಇದ್ದದ್ದು ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಎರಡು ಆಸ್ಪತ್ರೆಗಳಿಗೆ ಬೀಗ ಜಡಿಯಲಾಗಿದೆ.ಕೊರೋನಾ ಸೋಂಕಿತು ಇಲ್ಲವೇ ಅವರ ಸಂಪರ್ಕದಲ್ಲಿ ಇದ್ದವರು ಇಲ್ಲಿ ಚಿಕಿತ್ಸೆ ಪಡೆದಿರುವುದು ಖಾತರಿಯಾದ ಕಾರಣ ಎರಡು ಆಸ್ಪತ್ರೆಗಳನ್ನು ಮುಚ್ಚಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights