Covid 19 : ದಿನಗುಲಿ ನೌಕರರ ಸಮಸ್ಯೆ ಮದ್ಯೆ ಕೊರೊನಾ ವೈರಸ್ 3ನೇ ಸ್ಟೇಜ್ ಆತಂಕ…

ಭಾರತದಲ್ಲಿ ಕೊರೊನಾ ವೈರಸ್ ಭೀಕರತೆಯ 3ನೇ ಹಂತ ತಲುಪಿದ್ದು, ದೇಶದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಈ ರೀತಿ ಸುದ್ದಿಯಿಂದ ಸಮೂಹಸನ್ನಿ ಉಂಟಾಗಿ ಆತಂಕ ಹೆಚ್ಚಾಗಲಿದೆ. ಈ ಬಗ್ಗೆ ಆತಂಕ ಬೇಡ ಎಂದಿದೆ. ಈ ನಡುವೆ ಉತ್ತರಪ್ರದೇಶ, ದೆಹಲಿ, ಕರ್ನಾಟಕ, ಕೇರಳ, ಆಂಧ್ರ, ತೆಲಂಗಾಣ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ವಲಸೆ ಕಾರ್ಮಿಕರ ಸಮಸ್ಯೆ ತಲೆದೋರಿವೆ.

ವಲಸಿಗರನ್ನು ನಿರ್ಲಕ್ಷಿಸದಂತೆ ಕೇಂದ್ರ ಸರ್ಕಾರ ಸೂಚಿಸಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 979 ದಾಟಿದೆ. 86 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 25ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ತೆಲಂಗಾಣ, ಕೇರಳ ರಾಜ್ಯ ಮೃತರ ಪಟ್ಟಿಯಲ್ಲಿ ಇದೀಗ ಕಾಣಿಸಿಕೊಂಡಿವೆ.

ಈ ನಡುವೆ 21 ದಿನಗಳ ಲಾಕ್ ಡೌನ್ ಶುರುವಾಗಿ ಕೆಲ ದಿನಗಳಲ್ಲೇ ದೆಹಲಿ, ಬೆಂಗಳೂರು ಮುಂತಾದ ಪ್ರಮುಖ ನಗರದಲ್ಲಿ ವಾಯು ಮಾಲಿನ್ಯ ತಗ್ಗಿದೆ. ಜಾಗತಿಕ ಅಂಕಿ ಅಂಶ: ಮಾರ್ಚ್ 29 ರಂದು ಮಧ್ಯಾಹ್ನ 3.45ರ ಸುಮಾರಿಗೆ ಜಗತ್ತಿನಲ್ಲಿ ಒಟ್ಟು 672,027 ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 31,191 ಜನರು ಸಾವನ್ನಪ್ಪಿದ್ದಾರೆ. 143,840 ಜನರು ಈ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. ಯುಎಸ್ಎ 123,781 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಇಂದು 203 ಹೊಸ ಕೇಸ್ ಬಂದಿವೆ. 8 ಮಂದಿ ಮೃತರಾಗಿದ್ದರೆ, ಒಟ್ಟಾರೆ 2229 ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ 92 472 ಪ್ರಕರಣಗಳಿದ್ದು, 10, 023 ಮಂದಿ ಮೃತರಾಗಿದ್ದಾರೆ. ಚೀನಾದಲ್ಲಿ 45 ಹೊಸ ಪ್ರಕರಣ ದಾಖಲಾಗಿದ್ದು, 81439 ಪ್ರಕರಣಗಳ ಪೈಕಿ 3300 ಮಂದಿ ಮೃತರಾಗಿದ್ದಾರೆ. ಸ್ಪೇನ್ 73235 ಕೇಸ್, 5982 ಮೃತ, ಜರ್ಮನಿ ಇಂದು 22 ಮೃತರೊಂದಿಗೆ ಒಟ್ಟು 58247 ಕೇಸ್, 455 ಮೃತರನ್ನು ಕಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights