Covid 19 : ಬಾಗಕೋಟೆಯ ವ್ಯಕ್ತಿ ಕೊರೋನಾ ಸೊಂಕಿಗೆ ಬಲಿ, ರಾಜ್ಯದಲ್ಲಿ ನಾಲ್ಕನೇ ಸಾವು..

ಕೇವಲ ಒಂದು ದಿನದ ಹಿಂದಷ್ಟೇ ಕೊರೋನಾ ಸೋಂಕು ದೃಢಪಟ್ಟಿದ್ದ ವಯೋವೃದ್ಧರೊಬ್ಬರು ಶುಕ್ರವಾರ ರಾತ್ರಿ ಅಸುನೀಗಿದರು. ಇದರೊಂದಿಗೆ ಮಾರಕ ಕೊರೋನಾ ವೈರಸ್‌ಗೆ ರಾಜ್ಯದಲ್ಲಿ ಪ್ರಾಣ ಕಳೆದುಕೊಮಡವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ..ಮೂರು ದಿನಗಳ ಹಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದು ಪರೀಕ್ಷೆಗೆ ಒಳಪಡಿಸಲಾಗಿತ್ತು ಅವರಲ್ಲಿ ಸೋಂಕು ಇರುವುದು ಗುರುವಾರ ದೃಢಪಟ್ಟಿತ್ತು.

ವಯೋಸಹಜ ನಾನಾ ಬಾಧೆಗಳಿಂದ ಬಳಲುತ್ತಿದ್ದ ವ್ಯಕ್ತಿ ವೈದ್ಯರ ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ರಾತ್ರಿ ಅಗಲಿದರು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರನ್ನು ಸಹ ಪರೀಕ್ಷೆಗೆ ಒಳಪಡಲಾಗಿದ್ದು ಮೂವರ ವರದಿ ನಕಾರಾತ್ಮಕವಾಗಿದ್ದು, ಇನ್ನಿಬ್ಬರ ಕುರಿತಾದ ವರದಿ ಬರಬೇಕಿದೆ.

ವ್ಯಕ್ತಿಯ ಸಾವಿನ ಹಿನ್ನೆಲೆಯಲ್ಲಿ ಅವರು ವಾಸವಿದ್ದ ಪ್ರದೇಶವನ್ನು ನಿರ್ಬಂಧಿಸಲಾಗಿದ್ದು ವ್ಯಾಪಕ ತಪಾಸಣಾ ಕಾರ್‍ಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಇದೇ ವೇಳೆ ಸಿಎಂ ಯಡಿಯೂರಪ್ಪ ಅವರು ಶುಕ್ರವಾರ ರಾಜ್ಯದಲ್ಲಿ ಕೊರೋನ ಆಪರಿಸ್ಥಿತಿ ಕುರಿತಾಗಿ ಸರಣಿ ಸಭೆಗಳನ್ನು ನಡೆಸಿ ಪರಿಹಾರ ಕಾರ್‍ಯಗಳ ಮಾಹಿತಿ ಪಡೆದರು. ಮುಸ್ಲಿಂ ನಾಯಕರು, ಅಧಿಕಾರಿಗಳು, ಮಂತ್ರಿಗಳು ಹಾಗೂ ಬೆಂಗಳೂರಿನ ಮಂತ್ರಿಗಳ ಜೊತೆ ಸಿಎಂ ಯಡಿಯೂರಪ್ಪ ವ್ಯಾಪಕ ಸಮಾಲೋಚನೆ ನಡೆಸಿದರು.

ರಾಜ್ಯದಲ್ಲಿ ವರದಿಯಾದ ಕೋವಿಡ್ 19 ಪ್ರಕರಣಗಳಲ್ಲಿ ಅರ್ಧದಷ್ಟು ಬೆಂಗಳೂರಿನಲ್ಲಿ ಇವೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಬೆಂಗಳೂರು ನಗರದ ಸಚಿವರೊಂದಿಗೆ ಸಭೆ ನಡೆಸಲಾಯಿತು. ನಗರದ ಶಾಸಕರು, ಪಾಲಿಕೆ ಸದಸ್ಯರ ಸಹಕಾರದೊಂದಿಗೆ ಬಡವರು, ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಪಡಿತರ ವಿತರಣೆ ಸಮರ್ಪಕವಾಗಿ ಆಗುವಂತೆ ಖಾತರಿ ಪಡಿಸಿಕೊಳ್ಳಲು ಸಿಎಂ ಸೂಚಿಸಿದರು.

ಇನ್ನು ದೇಶದಲ್ಲಿ ‌ಇದುವರೆಗೆ 2902 ಕೊರೊನಾ ಪ್ರಕರಣ ದಾಖಲಾಗಿವೆ.‌ ಈ ಕಳೆದ 24 ಗಂಟೆಗಳ ಅವಧಿಯಲ್ಲಿ 601 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.‌ 68 ಸಾವುಗಳಾಗಿವೆ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights