Cricket : ಕೊರೋನಾ ಸೇನಾನಿಗಳಿಗೆ ಹುಟ್ಟುಹಬ್ಬ ಅರ್ಪಣೆ, ಆಚರಣೆ ಇಲ್ಲ – Sachin…

ಕ್ರಿಕೆಟ್ ದಿಗ್ಗಜ ಸಚಿನ ತೆಂಡೂಲ್ಕರ್‍ ನಾಳೆ (ಏ. 24) ತಮ್ಮ 47ನೇ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಮನೆಯ ಮಟ್ಟಿಗೆ ತೀರಾ ಸರಳವಾಗಿ ಜನ್ಮದಿನದ ಸವಿ ಹಂಚಿಕೊಳ್ಳಲಿರುವ ಸಚಿನ್ ತಮ್ಮ ಹುಟ್ಟು ಹಬ್ಬದ ಆಚರಣೆಯನ್ನು ಕೊರೋನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸೇನಾನಿಗಳಿಗೆ ಅರ್ಪಿಸಿದ್ದಾರೆ.

ಪ್ರತಿ ವರ್ಷ ಕ್ರಿಕೆಟ್ ಪ್ರೇಮಿಗಳು ಅತೀವ ಸಂತಸದಿಂದ ತಮ್ಮ ಆರಾಧ್ಯ ದೈವ ಸಚಿನ ತೆಂಡೂಲ್ಕರ್‍ ಜನ್ಮ ದಿನ ಆಚರಿಸುವುದುಂಟು. ಆದರೆ ಈ ಬಾರಿ ಯಾವುದೇ ಆಚರಣೆಗೆ ಬೇಡ ಎಂದು ಸಚಿನ್ ತೆಂಡೂಲ್ಕರ್‍ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಯಾವುದೇ ಆಡಂಬರವಿಲ್ಲದೇ ತಮ್ಮ ಜನ್ಮದಿನವನ್ನು ಕಳೆಯಲು ಸಚಿನ್ ಬಯಸಿದ್ದಾರೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಹಗಲಿರುಳೆನ್ನದೇ ಶ್ರಮಿಸುತ್ತಿರುವ ಆರೋಗ್ಯ ಸಿಬ್ಬಂದಿಗೆ ತಮ್ಮ ಜನ್ಮದಿನಾಚರಣೆಯನ್ನು ಅರ್ಪಿಸಲು ಅವರು ನಿರ್ಧರಿಸಿದ್ದಾರೆಂದು ಆಪ್ತ ಮೂಲಗಳು ಹೇಳಿವೆ.

ಕೊರೋನಾ ಸಂಬಂಧಿತ ಸಾಮಾಜಿಕ ಕಾರ್‍ಯದಲ್ಲಿ ತಮ್ಮ ತೊಡಗಿಸಿಕೊಂಡಿರುವ ಸಚಿನ್ ತೆಂಡೂಲ್ಕರ್‍ ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂಗಳ ದೇಣಿಗೆಯನ್ನು ಸಹ ನೀಡಿದ್ದಾರೆ.  ಆದರೆ ಸೋಶಲ್ ಮೀಡಿಯಾದಲ್ಲಿ ಸಚಿನ ಜನ್ಮದಿನವನ್ನು ಸಂಭ್ರಮಿಸಲು ಅವರ ಅಭಿಮಾನಿಗಳು ನಿರ್ಧರಿಸಿದ್ದು ಇದಕ್ಕಾಗಿ ನಾನಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್‍ ಅವರ ಅಪರೂಪದ ಚಿತ್ರಗಳ ಸಂಗ್ರಹವನ್ನು ಹಂಚಿಕೊಳ್ಳುವುದು ಹಾಗೂ ಸಚಿನ ಅವರ ಸಾಮಾಜಿಕ ಕಾಳಜಿ, ಚಟುವಟಿಕೆಯ ಬಗ್ಗೆ ಪ್ರಚಾರ ಮಾಡುವ ಮೂಲಕ ಅವರಿಗೆ ಧನ್ಯವಾದ ಃಏಳಲು ಅಭಿಮಾನಿಗಳು ಸಜ್ಜಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.