Fact Check: ರಾಜಸ್ಥಾನದ ಅಪ್ರಾಪ್ತ ಬಾಲಕಿಯನ್ನು ಮುಸ್ಲಿಂ ಪುರುಷರು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದರು ಎಂಬ ವೈರಲ್ ಚಿತ್ರ ಫೇಕ್

ರಾಜಸ್ಥಾನದಲ್ಲಿ ನಾಲ್ಕು ಮುಸ್ಲಿಂ ಪುರುಷರಿಂದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೀಡಾದ ಯುವತಿಯನ್ನು ತೋರಿಸುವ ಚಿತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮೇ 7 ರಂದು ಚಿತ್ರವನ್ನು ಹಂಚಿಕೊಂಡು, ಆದರೆ ನಂತರ ಅದನ್ನು ತೆಗೆದುಹಾಕಿದ ಟ್ವೀಟ್ ಒಂದು 8,000ಕ್ಕೂ ಹೆಚ್ಚು ಬಾರಿ ಮರು ಟ್ವೀಟ್ ಆಗಿತ್ತು.

ಇನ್ನೂ ಅನೇಕರು ಈ ಚಿತ್ರವನ್ನು ಟ್ವಿಟರ್ ಮತ್ತು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಇದು ರಾಜಸ್ಥಾನದಲ್ಲಿ ಅತ್ಯಾಚಾರಕ್ಕೊಳಗಾದ ಹುಡುಗಿಯ ಚಿತ್ರ ಎಂದು ಹೇಳಿಕೊಂಡಿದ್ದಾರೆ.

ಫ್ಯಾಕ್ಟ್ ಚೆಕ್:
ರಾಜಸ್ಥಾನದ ಟೋಂಕ್‍ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಬಗ್ಗೆ ವರದಿಗಳು ಬಂದಿದ್ದು, ಅದರ ನಂತರ ಮೂವರನ್ನು ಬಂಧಿಸಲಾಯಿತು ಮತ್ತು ಬಾಲಾಪರಾಧಿಯನ್ನು ಮೇ 7ರಂದು ಬಂಧಿಸಲಾಯಿತು. ಆದರೆ ಈ ಮೇಲಿನ ಟ್ವಿಟರ್ ಮತ್ತು ಫೇಸ್ಬುಕ್ ಪೋಸ್ಟ್ ಗಳು ನಿಜವಲ್ಲ.

ಆ ಹುಡುಗಿ ಜೀವಂತವಾಗಿದ್ದಾಳೆ ಮತ್ತು ವಿವಿಧ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಹಂಚಿಕೊಂಡಿರುವ ಮಹಿಳೆಯ ಚಿತ್ರವು ಏಪ್ರಿಲ್ 16ರಂದು ಹರಿಯಾಣದ ಹಿಸಾರ್‍ ನಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿದ ಚಿತ್ರ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights