Food inflation : RBI ಅಂಕೆ ಮೀರಿ ಸಾಗಿದ ಹಣದುಬ್ಬರ ದರ, ಜನಸಾಮಾನ್ಯರಿಗೆ ಕಷ್ಟ ಕಷ್ಟ..

ಹಣದುಬ್ಬರದ ಅಂಕೆ ಮೀರಿ ಹಣದುಬ್ಬರ ಏರಿಕೆ ಕಂಡಿದ್ದು ಮೊಲದೇ ಕುಸಿತದಲ್ಲಿರುವ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಭಾರೀ ಪೆಟ್ಟು ನೀಡಿದೆ.
ಗ್ರಾಹಕ ದರ ಸೂಚಿಯ ಆಧಾರದ ಮೇಲೆ ಡಿಸೆಂಬರ್‍ ತಿಂಗಳಿಗೆ ಸಗಟು ಹಣದುಬ್ಬರ ಶೇ. 7.35ಕ್ಕೆ ಏರಿಕೆ ಕಂಡಿದೆ. ಆಹಾರ ಪದಾರ್ಥಗಳ ದರಗಳಲ್ಲಿ ಸತತ ಏರಿಕೆಯಿಂದಾಗಿ ಹಣದುಬ್ಬರ ಭಾರೀ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.

೨೦೧೮ರ ಇದೇ ಅವಧಿಯಲ್ಲಿ ಹಣದುಬ್ಬರ ಶೇ. 2.11 ಇದ್ದರೇ ಕಳೆದ ನವೆಂಬರ್‍ ತಿಂಗಳಲ್ಲಿ ಉಬ್ಬರದ ಪ್ರಮಾಣ ಶೇ. 5.54 ಇತ್ತು. ಈಗ ಒಂದೇ ತಿಂಗಳಲ್ಲಿ ಸುಮಾರು ಶೇ. 2ರಷ್ಟು ಏರಿಕೆ ಕಂಡಿದೆ.

ಕಳೆದ ನವೆಂಬರ್‌ನಲ್ಲಿ ಶೇ. ೧೦ರ ಆಸುಪಾಸಿನಲ್ಲಿದ್ದ ಆಹಾರ ಪದಾರ್ಥಗಳ ಹಣದುಬ್ಬರ 30 ದಿನಗಳಲ್ಲಿ ಶೇ. ನಾಲ್ಕರಷ್ಟು ಏರಿಕೆ ಕಂಡಿರುವ ಕಾರಣ ಹಣದುಬ್ಬರ ರಿಸರ್ವ್‌ ಬ್ಯಾಂಕಿನ ಎಚ್ಚರಿಕೆಯ ಮಿತಿಯನ್ನು ಮೀರಿ ಬೆಳೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights